Advertisement
ನಗರದ ಉಪವಿಭಾಗ ಕಚೇರಿ ಸಭಾಂಗಣದಲ್ಲಿ ನಡೆದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದಅವರು, ಕರಡು ಮತದಾರರ ಪಟ್ಟಿಯ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಜ.12ಕ್ಕೆ ಇದ್ದ ಕಾಲಾವಧಿಯನ್ನು
22ರವರೆಗೆ ವಿಸ್ತರಿಸಲಾಗಿದೆ. ಹಕ್ಕು ಮತ್ತು ಆಕ್ಷೇಪಣೆಗಳಿದಲ್ಲಿ ಮತದಾರರ ನೋಂದಣಾಧಿಕಾರಿ(ಎಸಿ), ಸಹಾಯಕ ಮತದಾರರ ನೋಂದಣಾಧಿಕಾರಿಗಳ (ತಹಶೀಲ್ದಾರ್) ಕಚೇರಿಗೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು ಎಂದು ಹೇಳಿದರು.
Related Articles
ಡಂಗೂರ ಸಾರಿಸುವ ಮೂಲಕ ಹಾಗೂ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಲು ಕ್ರಮ ವಹಿಸುವುದು. ಭಾರತ
ಚುನಾವಣಾ ಆಯೋಗವು ಫೆ.28, 2018 ರಂದು ಪ್ರಚುರಪಡಿಸುವ ಅಂತಿಮ ಮತದಾರರ ಪಟ್ಟಿಯು ಶೇ.100 ದೋಷರ ಹಿತವಾಗಿರಲು ಸಂಪೂರ್ಣ ಸಹಕಾರ ನೀಡಿ ಬೇಕೆಂದು ಹೇಳಿದರು.
Advertisement
ಮತದಾರ ಪಟ್ಟಿ ಪರಿಷ್ಕರಿಸಿಲ್ಲ: ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ, ಸುಮಾರು ವರ್ಷಗಳು ಕಳೆದರೂ ಮೃತಪಟ್ಟ ಹೆಸರು ಮತದಾರರ ಪಟ್ಟಿಯಲ್ಲಿ ಇರುತ್ತದೆ. ಒಂದೇ ಕುಟುಂಬದಲ್ಲಿ ಬೇರೆ ಬೇರೆ ವಾರ್ಡ್‌ಗಳಲ್ಲಿ ಹೆಸರು ಮತದಾರರ ಪಟ್ಟಿಯಲ್ಲಿರುತ್ತದೆ. ಇವುಗಳನ್ನು ಪರಿಶೀಲನೆ ನಡೆಸ ಬೇಕು. ಕೂಲಿಗಾಗಿ ಬೇರೆ ಗ್ರಾಮಗಳಿಗೆ ವಲಸೆ ಹೋಗಿ ಮತ್ತೆ ಗ್ರಾಮಕ್ಕೆ ಬಂದು ಎರಡು ಮೂರು ವರ್ಷಗಳಾದರೂ ಮತದಾರರ ಪಟ್ಟಿಗೆ ಅಧಿಕಾರಿಗಳು ಸೇರ್ಪಡೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಹಣ ಪಡೆಯುತ್ತಾರೆ: ವಾರ್ಡ್‌ಗಳಲ್ಲಿ ಸೇರ್ಪಡೆ ಹಾಗೂ ಕೈಬಿಡುವುದು ಮತ್ತು ತಿದ್ದುಪಡಿ ಕೆಲಸವನ್ನು ಬಿಎಲ್‌ಒಗಳು ಸರಿಯಾದ ರೀತಿ ನಿರ್ವಹಿಸುತ್ತಿಲ್ಲ. ಗುರುತಿನ ಚೀಟಿ ನೀಡುವ ಸಮಯದಲ್ಲಿ ಮತದಾರರಿಂದ 50 ರಿಂದ 500 ರೂ.ವರೆಗೆ ಹಣ ಪಡೆಯುತ್ತಿದ್ದಾರೆ ಎಂದು ದೂರಿದರು.
ಎಲ್ಲಾವನ್ನು ಆಲಿಸಿದ ಎಸಿ ಮಾತನಾಡಿ, ಎಲ್ಲಾ ಸಮಸ್ಯೆಗಳನ್ನು ಜರೂರಾಗಿ ಕ್ರಮ ವಹಿಸಲಾಗುವುದು. ನೇಮಕಗೊಂಡಿರುವ ಬಿಎಲ್‌ಒ ಹಾಗೂ ಇನ್ನಿತರ ಅಧಿಕಾರಿಗಳು ಸಮಸ್ಯೆ ಬಗೆಹರಿಸದೆ ಹೋದಲ್ಲಿ ಕಚೇರಿಗೆ ಬಂದು ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು. ಚುನಾವಣೆ ವಿಭಾಗದ ಶಿರಸ್ತೇದಾರ್ ಬಿ.ಕೆ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ರಮೇಶ್‌ಬಾಬು, ಹನೂರು ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಪಯ್ಯ, ನಗರಸಭೆ ಅಧ್ಯಕ್ಷ ಶಾಂತರಾಜು, ಬಿಜೆಪಿ ಟೌನ್ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ಪಿ.ಶಿವಕುಮಾರ್, ಜೆಡಿಎಸ್ ಪಕ್ಷದ ಕೊಳ್ಳೇಗಾಲ ಕ್ಷೇತ್ರದ ಕಾರ್ಯಾಧ್ಯಕ್ಷ ಶಶಿಶೇಖರ್, ಜಿಲ್ಲಾ ಉಪಾಧ್ಯಕ್ಷ ಜಿನಕನಹಳ್ಳಿ ಶ್ರೀನಿವಾಸ್, ಬಿಎಸ್ಪಿ ಸಿದ್ದರಾಜು ಇತರರು ಇದ್ದರು.