Advertisement

ಫ‌ಲಿತಾಂಶದ ಕ್ಷಣ ಕ್ಷಣ ಮಾಹಿತಿ ಸುವಿಧಾದಲ್ಲಿ ಲಭ್ಯ

03:10 AM May 21, 2019 | sudhir |

ಉಡುಪಿ: ಗುರುವಾರ ನಡೆಯುವ ಲೋಕಸಭಾ ಚುನಾವಣೆಯ ಮತ ಎಣಿಕೆ ಸಂದರ್ಭ ಕ್ಷಣ ಕ್ಷಣ ಫ‌ಲಿತಾಂಶವನ್ನು ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ.

Advertisement

“ಸುವಿಧಾ’ ಆ್ಯಪ್‌ನ್ನು ಇದಕ್ಕಾಗಿ ರೂಪಿಸಲಾಗಿದೆ. ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಎಲ್ಲ ಲೋಕಸಭಾ ಕ್ಷೇತ್ರಗಳ ಆ ಕ್ಷಣ ಆಯಾ ಚುನಾವಣಾಧಿ ಕಾರಿಗಳು ಅಪ್‌ಲೋಡ್‌ ಮಾಡಿದ ಮಾಹಿತಿಗಳು ದೊರೆಯುತ್ತವೆ.

ಇದಕ್ಕಾಗಿ ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ಸಿಬಂದಿ, ತಂತ್ರಜ್ಞರು, ಕಂಪ್ಯೂಟರ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಇವರು ಕಂಪ್ಯೂಟರ್‌ನಲ್ಲಿ ಆಯಾಸುತ್ತಿನ ಮತ ಎಣಿಕೆಯ ಅಂಕಿಅಂಶಗಳನ್ನು ಹಾಕುವಾಗಲೇ ಆ ಮಾಹಿತಿಗಳು ಜನರಿಗೆ ಲಭ್ಯವಾಗುತ್ತದೆ. ಬಿಎಸ್ಸೆನ್ನೆಲ್‌ ಇಂಟರ್‌ನೆಟ್‌ ಅಲ್ಲದೆ ಖಾಸಗಿ ಕಂಪೆನಿಯ ಇಂಟರ್‌ನೆಟ್‌ನೂ° ಬಳಸಿಕೊಳ್ಳಲಾಗುವುದು. ಒಂದು ವೇಳೆ ತೊಂದರೆಯಾದಲ್ಲಿ ಇನ್ನೊಂದು ಜಾಲದ ಮೂಲಕ ಮಾಹಿತಿ ರವಾನೆಯಾಗಬೇಕೆನ್ನುವುದು ಇದರ ಉದ್ದೇಶ.

ಯಾವುದೇ ಲೋಕಸಭಾ ಕ್ಷೇತ್ರದ ಮಾಹಿತಿ ಬೇಕಿದ್ದರೂ ಅದನ್ನು ಟೈಪಿಸಿದರೆ ಅಲ್ಲಿನ ಮಾಹಿತಿಗಳು ಸಿಗು ತ್ತವೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಪ್ರತಿ ಕ್ಷೇತ್ರದ ಚುನಾವಣಾಧಿಕಾರಿಗಳು ಮಾಡಿಕೊಂಡಿದ್ದಾರೆ.

ಫ‌ಲಿತಾಂಶಕ್ಕೂ ಬಳಕೆ
ಚುನಾವಣ ಆಯೋಗವು ಈ ಆ್ಯಪ್‌ನ್ನು ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಪಕ್ಷಗಳು ಜಿಲ್ಲಾಡಳಿತದಿಂದ ಅನುಮತಿ ಪಡೆ ಯುವುದಕ್ಕಾಗಿಆರಂಭಿಸಿತ್ತು. ರ್ಯಾಲಿ, ಸಭೆಗಳನ್ನು ನಡೆಸುವಾಗ ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯುವ ಅವಕಾಶ ಕಲ್ಪಿಸಲಾಗಿತ್ತು. ಏಕಗವಾಕ್ಷಿ ಪದ್ಧತಿಯಾಗಿ ಜಾರಿಗೊಂಡ ಈ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ 24 ಗಂಟೆ ಯಲ್ಲಿ ಅನುಮತಿ ಕೊಡಬೇಕಾಗಿತ್ತು. ಬಳಿಕ ಚುನಾವಣೆ ದಿನ ಎಲ್ಲೆಲ್ಲಿ ಎಷ್ಟೆಷ್ಟು ಮತದಾನವಾಗಿತ್ತು ಎನ್ನುವುದನ್ನು ತಿಳಿಯುವಂತೆ ಆ್ಯಪ್‌ನ್ನು ಮಾರ್ಪಡಿಸಲಾಯಿತು. ಈಗ ಮೂರನೆಯ ಹಂತದಲ್ಲಿ ಫ‌ಲಿತಾಂಶವನ್ನು ಸಾರ್ವಜನಿಕರಿಗೆ ಒದಗಿಸುವಂತೆ ಅಭಿವೃದ್ಧಿ ಪಡಿಸಲಾಗಿದೆ. ಈ ಕುರಿತು ಕೇಂದ್ರ ಚುನಾವಣ ಆಯೋಗ ಎಲ್ಲ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next