Advertisement
ಯಂತ್ರಗಳನ್ನು ಯಾರು ಬಳಸುವುದಿಲ್ಲ ಹೇಳಿ? ಕಾರು, ಬಸ್ಸು, ವಿಮಾನದಂತಹ ಸಾಗಾಣಿಕೆಯ ಯಂತ್ರಗಳಿಂದ ಹಿಡಿದು ಗ್ರಾÂಂಡರ್, ಪಂಪ್, ಹೊಲಿಗೆ ಯಂತ್ರ ಹೀಗೆ ದೈನಂದಿನ ಹಲವು ಕೆಲಸಗಳಲ್ಲಿ ನಾವಿಂದು ಯಂತ್ರಗಳನ್ನು ಬಳಸುತ್ತಿದ್ದೇವೆ. ಹಿಂದೊಮ್ಮೆ ಎಲ್ಲ ಕೆಲಸಗಳಿಗೆ ಮೈ ಕಸುವನ್ನೇ ನೆಚ್ಚಿಕೊಂಡಿದ್ದ ನಾವು, ಇಂದು ಯಂತ್ರಗಳ ಮೇಲೆ ನಮ್ಮೆಲ್ಲ ಹೊರೆಯನ್ನು ಹಾಕಿದ್ದೇವೆ.
Related Articles
Advertisement
ಇಂಗ್ಲೆಂಡಿನ ಜೆ.ಜೆ.ಥಾಮ್ಸನ್ ಅವರು 1896ರಲ್ಲಿ ನಡೆಸಿದ ಪ್ರಯೋಗ, ಅಣುಗಳ ಒಳರಚನೆಯನ್ನು ತಿಳಿದುಕೊಳ್ಳುವಲ್ಲಿ ಮಹತ್ವದ ಹೆಜ್ಜೆಯಾಯಿತು. ಥಾಮ್ಸನ್ ಅವರು ತಮ್ಮ ಒಡನಾಡಿಗಳೊಂದಿಗೆ ನಡೆಸಿದ ಕ್ಯಾತೋಡ್ ರೇ ಟ್ಯೂಬ್ ಪ್ರಯೋಗದಲ್ಲಿ ಅಣುವಿನಲ್ಲಿ ಕಿರಿದಾದ ಒಳರಚನೆಗಳಿವೆ ಅಂತ ಮೊದಲ ಬಾರಿಗೆ ನಿಕ್ಕಿಯಾಗಿ ಗೊತ್ತಾಯಿತು. ಮುಂದಿನ ಮಹತ್ವದ ಹೆಜ್ಜೆ ರುದರಫೋರ್ಡ್ ಅವರು 1909 ರಲ್ಲಿ ನಡೆಸಿದ ಚಿನ್ನದ ತೆಳುಹಾಳೆ ಪ್ರಯೋಗ. ಯುರೇನಿಯಮ…ನಂತಹ ಹೆಚ್ಚು ಅಣುರಾಶಿಯಿಂದ ಹೊರಹೊಮ್ಮುವ ಅಲ್ಫಾ ಕಿರಣಗಳನ್ನು ಚಿನ್ನದ ತೆಳುಹಾಳೆಯ ಮೂಲಕ ಹಾಯಿಸಿದಾಗ ಅಚ್ಚರಿಯೊಂದು ಕಂಡುಬಂದಿತು. ಅಲ್ಫಾ ಕಿರಣಗಳೆಲ್ಲವೂ ತೆಳುಹಾಳೆಯನ್ನು ತೂರಿಕೊಂಡು ಹೋಗುವ ಬದಲು ಕೆಲವು ಬಾರಿ ಅದರಿಂದ ಹಿಂಪುಟಿಯಲ್ಪಟ್ಟವು. ಈ ಪ್ರಯೋಗದ ಮೂಲಕ ಅಣುವಿನ ನಡುವಣದಲ್ಲಿ ಗಟ್ಟಿಯಾದ ರಾಶಿಯಿರುವುದು ಕಂಡುಬಂದು, ಪ್ರೋಟಾನ್‌ಗಳ ಅರಿವಿಗೆ ಕಾರಣವಾಯಿತು. ಮುಂದೆ 1935ರಲ್ಲಿ ಚಾಡವಿಕ್ ಎಂಬುವವರ ಪ್ರಯೋಗಗಳು ಅಣುವಿನ ನಡುವಿನಲ್ಲಿ ನ್ಯೂಟ್ರಾನ್ ಎಂಬ ರಚನೆಗಳೂ ಇವೆ ಎಂದು ತೋರಿಸಿದವು. ಹೀಗೆ ಅಣುವಿನ ನಡುವಣದಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳೆಂಬ ರಚನೆಗಳಿದ್ದು, ಅವುಗಳ ಸುತ್ತ ಇಲೆಕ್ಟ್ರಾನ್‌ಗಳೆಂಬ ರಚನೆಗಳು ಹಲವು ಬಗೆಯ ಸುತ್ತುದಾರಿಗಳಲ್ಲಿ ಸುತ್ತುತ್ತಿವೆ ಎಂಬುದು ಅರಿವಿಗೆ ಬಂದಿತು. ವಿಜ್ಞಾನ ಮುಂದುವರೆದಂತೆಲ್ಲಾ ಪ್ರೋಟಾನ್ ಮತ್ತು ನ್ಯೂಟ್ರಾನ್‌ಗಳಲ್ಲಿ ಇನ್ನೂ ಕಿರಿದಾದ ಒಳರಚನೆಗಳಿವೆ ಎಂದು ತಿಳಿದುಬಂದಿತು. ಇವುಗಳನ್ನು ಕ್ವಾರ್ಕ್ಸ್ ಎಂದು ಕರೆಯುತ್ತಾರೆ. ಒಂದೇ ಬಗೆಯ ಅಣುಗಳಿಂದ (ಒಂದೇ ಸಂಖ್ಯೆಯ ಪ್ರೋಟಾನ್ ಹೊಂದಿರುವ) ಕೂಡಿರುವ ಮೂಲವಸ್ತು/ಧಾತುಗಳಾಗಲಿ ಇಲ್ಲವೇ ಹಲವು ಬಗೆಯ ಅಣುಗಳಿಂದ (ಬೇರೆ ಬೇರೆ ಸಂಖ್ಯೆಯ ಪ್ರೋಟಾನ್ ಹೊಂದಿರುವ) ಉಂಟಾದ ಬೆರೆತವಸ್ತುಗಳ ಕುರಿತಾಗಿಯೇ ಆಗಲಿ ಜಗತ್ತಿನ ಹಲವೆಡೆ ನಡೆಯುತ್ತಿರುವ ಪ್ರಯೋಗಗಳು ವಿಜ್ಞಾನಿಗಳನ್ನು ಬೆರಗುಗೊಳಿಸುತ್ತಲೇ ಇವೆ. ಕಡುಕಿರಿದಾದ ರಚನೆಗಳ ಬಗ್ಗೆ ಸಂಶೋಧನೆ ನಡೆಸುವ ಕ್ವಾಂಟಮ್ ಫಿಸಿಕ್ಸ್ ಇಂದು ವಿಜ್ಞಾನಿಗಳಿಗೆ ಹಲವು ಸವಾಲುಗಳನ್ನು ಒಡ್ಡುತ್ತಿದೆ. ಫ್ರಾಮತ್ತು ಸ್ವಿಟ್ಜರ್ ಲ್ಯಾಂಡ್ ದೇಶಗಳ ಗಡಿಯಲ್ಲಿ, ಸುಮಾರು 570 ಅಡಿ ನೆಲದಾಳದಲ್ಲಿ ಕಟ್ಟಲಾಗಿರುವ ಎಲ್ಲಕ್ಕಿಂತ ದೊಡ್ಡ ಪ್ರಯೋಗಮನೆ ಯಲ್ಲಿ ಕಡುಕಿರಿದಾದ ಕಣಗಳ ಕುರಿತಾಗಿ ವಿಶೇಷ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪ್ರಯೋಗಮನೆಯಲ್ಲಿ ಪ್ರೋಟಾನ್ ವೇಗದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆಯಿಸಿ, ಅವುಗಳ ಗುದ್ದಾಟದಿಂದ ಉಂಟಾಗುವ ಘಟನೆಗಳನ್ನು ಒರೆಗೆಹಚ್ಚಲಾಗುತ್ತದೆ. ಅಣುಗಳು ರಾಶಿ ಹೊಂದಲು ಕಾರಣವೇನು? ಕಡುಕಿರಿದಾದ ರಚನೆಗಳ ಮೇಲೆ ಎರಗುವ ಬಲಗಳಾವವು? ಅವು ಹೇಗೆ ಬೇರೊಂದು ಕಣಗಳೊಂದಿಗೆ ಒಡನಾಡುತ್ತವೆ? ಹೀಗೆ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಈ ಪ್ರಯೋಗಮನೆಯಲ್ಲಿ ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಅಣುಗಳ ತಿಳುವಳಿಕೆ ಇಪ್ಪತ್ತೂಂದನೇ ಶತಮಾನದ ಅರಿವಿನ ಜಗತ್ತಿನಲ್ಲಿ ಹಲವು ಮೈಲಿಗಲ್ಲುಗಳನ್ನು ದಾಟುತ್ತಾ ಮುನ್ನಡೆಯುತ್ತಿದೆ. (ಕನ್ನಡದಲ್ಲಿ ವಿಜ್ಞಾನ ಬರಹಗಳನ್ನು ಮೂಡಿಸುತ್ತಿರುವ ಅರಿಮೆ ತಂಡದಿಂದ ತಿಂಗಳಿಗೊಮ್ಮೆ ವಿಜ್ಞಾನ ವಿಷಯವೊಂದರ ಬಗ್ಗೆ ಚರ್ಚೆ ಏರ್ಪಡಿಸಲಾಗುತ್ತಿದೆ. ಜೂನ್ ತಿಂಗಳ ಮಾತುಕತೆಯಿಂದ ಮೇಲಿನ ಬರಹವನ್ನು ಆಯ್ದುಕೊಳ್ಳಲಾಗಿದೆ) – ಪ್ರಶಾಂತ ಸೊರಟೂರ