Advertisement
ಈ ಭಾವಚಿತ್ರ ಪಿಕ್ಚರ್ ಆಫ್ ದಿ ಡೇ. ಆದರೆ ನಮ್ಮಂಥ ಅನೇಕರಿಗೆ ಇದು ಈ ವ್ಯಾಖ್ಯಾನಕ್ಕೆ ಮೀರಿದ ವಿಚಾರ. ಅನೇಕ ರಾಜಕೀಯ ಪಕ್ಷಗಳು ಕುಟುಂಬ ಕೇಂದ್ರೀಕೃತವಾಗಿರುವುದರಿಂದ ಇಂಥ ಫೋಟೋಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಇಬ್ಬರೂ ನಾಯಕರು 70 ವರ್ಷ ಮೇಲ್ಪಟ್ಟವರು. ಬಲಾಡ್ಯ ಕೌಟುಂಬಿಕ ಹಿನ್ನೆಲೆ ಇಲ್ಲದೇ ಬೆಳೆದವರು. ಒಬ್ಬರು ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರಿದ್ದರೆ, ಇನ್ನೊಬ್ಬರು ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡಿದವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜತೆಗಿನ ಸಂಪರ್ಕದೊಂದಿಗೆ ಇಬ್ಬರೂ ರಾಜಕೀಯ ಜೀವನ ಆರಂಭಿಸಿದರು.
ಕಠಿನ ಪರಿಶ್ರಮ, ಆಯಾಸದ ಪರಿವಿಯೇ ಇಲ್ಲದ ಪ್ರಯಾಣ, ಧ್ಯೇಯ, ಗುರಿಯೆಡೆಗಿನ ಸ್ಪಷ್ಟತೆ, ಸಂಘಟನೆಯಲ್ಲಿ ಬೇರುಮಟ್ಟದ ಭಾಗಿದಾರಿಕೆಯಿಂದ ಒಬ್ಬರು ಈಗ ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದರೆ, ಇನ್ನೊಬ್ಬರು ಯಶಸ್ವಿ ಮುಖ್ಯಮಂತ್ರಿಯಾಗಿದ್ದರು. ಇಂದು ಈ ಇಬ್ಬರು ನಾಯಕರು ಕೈ ಕೈ ಹಿಡಿದು ನಡೆಯುತ್ತಿರುವುದು ಪಕ್ಷ, ಸಿದ್ಧಾಂತ ಹಾಗೂ ಸಂಘಟನಾತ್ಮಕವಾದ ಬದ್ಧತೆಯನ್ನು ತೋರುತ್ತದೆ ಎಂದು ಬಿ.ಎಲ್. ಸಂತೋಷ್ ತಮ್ಮ ಬರಹದಲ್ಲಿ ಹೇಳಿದ್ದಾರೆ.