Advertisement

ಮಾದರಿ ರಾಜಕಾರಣಿ ಗೋಪಾಲ ಭಂಡಾರಿ

01:13 AM Jul 21, 2019 | Sriram |

ಹೆಬ್ರಿ: ಗೋಪಾಲ ಭಂಡಾರಿ ಅವರು ಯಾವುದೇ ಜಾತಿ ಬಲ, ಹಣ ಬಲ ಅಥವಾ ಕುಟುಂಬದ ರಾಜಕೀಯ ಹಿನ್ನೆಲೆ ಇಲ್ಲದೆ ತಳಮಟ್ಟದಿಂದ ರಾಜಕೀಯ ಪ್ರವೇಶಿಸಿ ಸದಾ ಪಕ್ಷಕ್ಕಾಗಿ ದುಡಿದ ಜನಪರ ಚಿಂತನೆಯ ಅಪರೂಪದ ಆದರ್ಶ ವ್ಯಕ್ತಿ. ರಾಜಕೀಯ ಜೀವನದಲ್ಲಿ ಯಾವುದೇ ಅಪವಾದವಿಲ್ಲದ ಪ್ರಾಮಾಣಿಕ, ಸಜ್ಜನ ರಾಜಕಾರಣಿಯಾಗಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ| ಎಂ. ವೀರಪ್ಪ ಮೊಯ್ಲಿ ಹೇಳಿದರು.

Advertisement

ಅವರು ಶನಿವಾರ ಹೆಬ್ರಿ ಅನಂತ ಪದ್ಮನಾಭ ಸನ್ನಿಧಿಯ ಸಭಾಭವನದಲ್ಲಿ ನಡೆದ ಕಾರ್ಕಳದ ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.

ರಾಜಕಾರಣಿ ಹೇಗಿರಬೇಕು ಎನ್ನು ವುದಕ್ಕೆ ಉದಾಹರಣೆ ಗೋಪಾಲ ಭಂಡಾರಿ ಅವರು. ನಿಷ್ಠಾವಂತ, ಪ್ರಾಮಾಣಿಕ ರಾಜಕಾರಣಿಯಾಗಿದ್ದ ಅವರು ರಾಜಕೀಯಕ್ಕೆ ಉತ್ತಮ ಸಂದೇಶ ನೀಡಿದ ಧೀಮಂತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಶಾಶ್ವತ ಸ್ಮಾರಕ ಬೇಕು
ನುಡಿ ಮತ್ತು ನಡೆಯಲ್ಲಿ ಒಂದೇ ತೆರನಾಗಿ ಸದಾ ಮಾನವೀಯ ಮೌಲ್ಯಗಳು ಮತ್ತು ಸಾಮಾಜಿಕ ಚಿಂತನೆಯ ಬಗ್ಗೆ ಮಾತನಾಡುತ್ತಾ ಅದನ್ನು ಜೀವನದಲ್ಲಿ ಅಳವಡಿಸಿಕೊಂಡ ಅಪೂರ್ವ ರಾಜಕಾರಣಿ ಗೋಪಾಲ ಭಂಡಾರಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತಾಗಲು ಅವರ ಹೆಸರಿನಲ್ಲಿ ಹೆಬ್ರಿಯಲ್ಲಿ ಒಂದು ವೃತ್ತವಾಗಬೇಕು ಎಂದು ಹರಿದಾಸ ಬಿ.ಸಿ. ರಾವ್‌ ಶಿವಪುರ ಹೇಳಿದರು.

ಮಾಜಿ ಸಚಿವರಾದ ವಿನಯ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಭಟ್ಕಳದ ಮಾಜಿ ಶಾಸಕ ಜಿ.ಡಿ. ನಾಯಕ್‌, ಸುಧಾಕರ್‌ ಶೆಟ್ಟಿ, ಸದಾಶಿವ ಹೆಗ್ಡೆ, ಹರ್ಷ ಮೊಲಿ, ಜೆಡಿಎಸ್‌ ಅಧ್ಯಕ್ಷ ಯೋಗೀಶ್‌ ಶೆಟ್ಟಿ ಮೊದಲಾದವರು ಭಂಡಾರಿ ಅವರನ್ನು ಸ್ಮರಿಸಿದರು.

Advertisement

ಮಾಜಿ ಸಚಿವ ರಮಾನಾಥ ರೈ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ, ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶೇಖರ ಮಡಿವಾಳ, ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ. ಮಂಜುನಾಥ ಪೂಜಾರಿ, ಪಕ್ಷದ ವಕ್ತಾರ ಬಿಪಿನ್‌ಚಂದ್ರ ಪಾಲ್‌ ಉಪಸ್ಥಿತರಿದ್ದರು. ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next