Advertisement
ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ದಶಮಾನೋತ್ಸವ ಸಂಭ್ರಮದ ಸಮಾರೋಪ ಭಾಷಣ ಮಾಡುತ್ತಾ ಒಂದೇ ವರ್ಷದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಸರಗೋಡಿನಲ್ಲಿ ಸಾಂಸ್ಕೃತಿಕ ಚಳವಳಿಯನ್ನೇ ನಡೆಸಿದೆ. ಇದು ಕರ್ನಾಟಕ ರಾಜ್ಯಕ್ಕೂ ಮಾದರಿಯಾಗಬೇಕು. ಕರ್ನಾಟಕದಲ್ಲಿ ಕನ್ನಡ ಕಂಪು ಕಳೆದುಕೊಳ್ಳುತ್ತಿದ್ದರೂ, ಗಡಿನಾಡು ಕಾಸರಗೋಡಿನಲ್ಲಿ ಕನ್ನಡದ ಕಂಪು ಇನ್ನೂ ಬೀರುತ್ತಿರುವುದು ಇಲ್ಲಿನ ಕನ್ನಡಿಗರಿಗೆ ಇರುವ ಕನ್ನಡ ಮೇಲಿನ ಪ್ರೀತಿ, ಮಮತೆ ಕಾರಣವಾಗಿದೆ. ಕಾಸರಗೋಡಿನ ಕನ್ನಡಿಗರ ಕನ್ನಡ ಪ್ರೀತಿ ಕರ್ನಾಟಕದ ಜನತೆಗೂ ಮಾದರಿಯಾಗಿದೆ.
ಪ್ರಾಸ್ತಾವಿಕ ಮಾತುಗಳನ್ನಾಡಿದ ರಂಗಚಿನ್ನಾರಿ ಸಂಸ್ಥೆಯ ನಿರ್ದೇಶಕ ಕಾಸರಗೋಡು ಅವರು ರಂಗಚಿನ್ನಾರಿ ಸಂಸ್ಥೆಯ ಹುಟ್ಟು, ಅದರ ಬೆಳವಣಿಗೆ, ಕಳೆದ ಹತ್ತು ವರ್ಷಗಳ ಸಾಧನೆಯ ಬಗ್ಗೆ ವಿವರಿಸಿ ಸ್ವಾಗತಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
Related Articles
Advertisement
ಶಾಬ್ಟಾಸ್ ಚಿನ್ನಾ: ಸುಂದರರಾಜ್ಇಲ್ಲಿನ ಕನ್ನಡ ಚಟುವಟಿಕೆಯನ್ನು ವೀಕ್ಷಿಸಿದಾಗ ಕಾಸರಗೋಡಿನಲ್ಲಿ ಯಾಕೆ ಹುಟ್ಟಿಲ್ಲ ಎನಿಸುತ್ತಿದೆ ಎಂದ ಅವರು ಕಾಸರಗೋಡಿಗೆ ಕಾಲಿಟ್ಟಾಗ ರೋಮಾಂಚನ ಗೊಂಡೆ. ಹೃದಯ ತುಂಬಿ ಬಂತು. ಕನ್ನಡವನ್ನು ಉಳಿಸಲು ಇಲ್ಲಿ ನಡೆಸುತ್ತಿರುವ ಹೋರಾಟ ಕನ್ನಡದ ಮೇಲಿನ ಪ್ರೀತಿಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದ ಅವರು ರಂಗಚಿನ್ನಾರಿ ಮೂಲಕ ಕಾಸರಗೋಡಿನಲ್ಲಿ ಹಲವಾರು ಯುವ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಕರ್ನಾಟಕದ ಖ್ಯಾತ ಕಲಾವಿದರನ್ನು ಕರೆಸಿ ಅವರಿಂದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಸರಗೋಡಿನ ಕನ್ನಡಿಗರಿಗೆ ಕರ್ನಾಟಕದ ಖ್ಯಾತನಾಮರನ್ನು ಪರಿಚಯಿಸಿದ್ದಾರೆ. ಇದರ ಹಿಂದಿನ ಸಾರಥ್ಯ ವಹಿಸಿರುವ ಕಾಸರಗೋಡು ಚಿನ್ನಾ ಅವರು ಕಾಸರಗೋಡಿನ ರಜನೀಕಾಂತ್ ಎಂದರೂ ರಾಜಕುಮಾರ್ ಎಂದರೂ ತಪ್ಪಾಗಲಾರದು ಎಂದ ಅವರು ಕಾಸರಗೋಡು ಚಿನ್ನಾ ಅವರನ್ನು ಶ್ಲಾಘಿಸಿದರು.