ಮಹಾಲಿಂಗಪುರ: ತಿಂಗಳ ಹಿಂದೆ ಕಾಣೆಯಾಗಿದ್ದ ಸ್ಥಳೀಯ ಆಯಿಲ್ ಮಿಲ್ ಬಡಾವಣೆಯ ಈರಪ್ಪ ಪಂಡಿತಪ್ಪ ಸಿದ್ದಾಪುರ ಅವರನ್ನು ಬೆಂಗಳೂರಿನ ಯಲಹಂಕದಲ್ಲಿ ಪತ್ತೆ ಹಚ್ಚಿ ಕರೆ ತರುವಲ್ಲಿ ಮಹಾಲಿಂಗಪುರ ಪೊಲೀಸರು ಯಶಸ್ವಿಯಾಗಿದ್ದಾರೆ.
ಮನೆಯವರ ಆಕ್ರಂದನಕ್ಕೆ ಸಾಂತ್ವನ ನೀಡಬೇಕೆಂದು ಪಣ ತೊಟ್ಟ ಪೊಲೀಸರು ಹಗಲಿರುಳು ಶ್ರಮಿಸಿ ಪತ್ತೆಗಾಗಿ ಪ್ರಯತ್ನಿಸುತ್ತಿದ್ದರು. ಕಾಣೆಯಾಗಿದ್ದ ವ್ಯಕ್ತಿಯೇ ತನ್ನ ಪತ್ನಿಗೆ ಬೆಂಗಳೂರಿನ ಯಲಹಂಕದ ತರಕಾರಿ ವ್ಯಾಪಾರಿಯೊಬ್ಬರ ಮೊಬೈಲ್ನಿಂದ ಕರೆ ಮಾಡಿದ್ದರು. ಈ ಕರೆಯ ಜಾಡನ್ನು ಹಿಡಿದು ಹೊರಟ ಪೊಲೀಸರು ಮೊಬೈಲ್ನ ವಾರಸುದಾರನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಆತನ ಮನವೊಲಿಸಿ ಯಲಹಂಕ ಪೊಲೀಸರ ನೆರವಿನಿಂದ ನಗರಕ್ಕೆ ಕರೆತಂದು ಕುಟುಂಬದವರ ಮನದಲ್ಲಿ ಹರ್ಷ ತುಂಬಲು ಯಶಸ್ವಿಯಾಗಿದ್ದಾರೆ.
ಮನೆ ತೊರೆದ ವ್ಯಕ್ತಿ ಮೊದಲು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಅಂಗಡಿಯಲ್ಲಿ ಕೆಲಕಾಲ ಕೆಲಸ ಮಾಡಿ ಬಳಿಕ ಯಲಹಂಕದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಹೋಟೆಲ್, ಖಾನಾವಳಿಯಲ್ಲಿ ತಿಂಡಿ, ಊಟ ಮಾಡುತ್ತಾ ರಾತ್ರಿ ಗುಡಿ ಗುಂಡಾರಗಳಲ್ಲಿ ಮಲಗುತ್ತಿದ್ದ.
ಪಿಎಸ್ ಐ ರವಿಕುಮಾರ ಧರ್ಮಟ್ಟಿ, ಎಎಸ್‌ಐ ಮಾಂಗ, ಅಶೋಕ ಸವದಿ, ಬಿ. ಎಸ್ .ನಾಯಕ, ಇತರ ಸಿಬ್ಬಂದಿ ಕಾರ್ಯವನ್ನು ಕುಟುಂಬ ಶ್ಲಾಘಿಸಿದೆ.
Advertisement
ಸಂತೆಗೆ ಹೋಗುವುದಾಗಿ ಹೇಳಿ ಏಕಾಏಕಿ ಮನೆಬಿಟ್ಟು ತೆರಳಿ ಕಾಣೆಯಾಗಿದ್ದ ಈರಪ್ಪ ಸಿದ್ದಾಪುರ. ವ್ಯಕ್ತಿಯ ಪತ್ನಿ ಸಾವಿತ್ರಿ, ಮಕ್ಕಳು ದಿಕ್ಕು ತೋಚದೆ ಮನೆಯ ಯಜಮಾನನ ಆಗಮನದ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿದ್ದರು. ಕುಟುಂಬಕ್ಕೆ ಆಧಾರಸ್ಥಂಭವಾಗಿದ್ದ ಮನೆ ಒಡೆಯ ಕಾಣೆಯಾಗಿದ್ದು, ದೊಡ್ಡ ಆಘಾತ ನೀಡಿತ್ತಲ್ಲದೇ ಮನದೊಳಗೆ ನೂರಾರು ಊಹೆ, ಯೋಚನೆಗಳಿಂದ ಜರ್ಜರಿತರಾಗಿದ್ದರು, ಇಂತಹ ಸಂದರ್ಭದಲ್ಲಿ ಕುಟುಂಬದ ಮುಖದಲ್ಲಿ ಕೊನೆಗೂ ನಗು ಅರಳಿಸುವಲ್ಲಿ ಮಹಾಲಿಂಗಪುರ ಪೋಲಿಸರು ಯಶಸ್ವಿಯಾಗಿದ್ದಾರೆ.
Related Articles
Advertisement
ಕಾಣೆಯಾಗಿದ್ದ ವ್ಯಕ್ತಿ ಮೊದಲು ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಅಂಗಡಿಯಲ್ಲಿ ಕೆಲಕಾಲ ಕೆಲಸ ಮಾಡಿ ಬಳಿಕ ಯಲಹಂಕದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ.