ಕಾಸರಗೋಡು: ಪುರಾಣವನ್ನು ಕೆಲವನ್ನು ಹೇಳದೆ ಮೌನವಾಗುತ್ತವೆ. ಪುರಾಣ ಕತೆಗಳ ಆಧಾರದಲ್ಲಿ ರಚನೆಯಾಗುವ ಆಧುನಿಕ ಕೃತಿಗಳು ಅಂತಹ ಮೌನವನ್ನು ಬಗೆದು ಮಾತನಾಡಿದಾಗ, ಮರು ನಿರೂಪಿತ ಕೃತಿಗಳಿಗೆ ಮೌಲ್ಯವಿರುತ್ತದೆ ಎಂದು ಯಕ್ಷಗಾನ ಕಲಾವಿದ ರಾಧಾಕೃಷ್ಣ ಕಲ್ಚಾರ್ ತಿಳಿಸಿದರು. ಪುರಾಣಗಳು ಕೆಲವೊಮ್ಮೆ ಅತಿ ವಾಸ್ತವ ಎಂದೆಣಿಸಿದರೂ ಅದರಲ್ಲಿ ಜೀವನ ಮೌಲ್ಯಗಳಾಗಿರುತ್ತವೆ. ಅದು ಕಾಲಾತೀತವಲ್ಲ. ಅದನ್ನು ಇಂದಿನ ಕಾಲದಲ್ಲಿ ಇದ್ದು ನೋಡುವುದು ಸರಿಯಲ್ಲ. ಆದರೆ ಅದರ ಹಿಂದಿನ ಉದ್ದೇಶ ಅರ್ಥಮಾಡಿಕೊಳ್ಳಬೇಕು. ಪುರಾಣದ ಮರು ನಿರೂಪಿತ ಕೃತಿಗಳಿಗೆ ಪ್ರಚಾರ ಸಿಕ್ಕಿದರೂ,
ಎಲ್ಲವನ್ನೂ ಶ್ರೇಷ್ಠ ಕೃತಿಗಳೆಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಸ್ಮೃತಿ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸುತ್ತಾ ತಿಳಿಸಿದರು.
ವಿಭಾಗದಲ್ಲಿ ಈ ಹಿಂದೆ ಸೇವೆ ಸಲ್ಲಿಸಿ ದಿವಂಗತರಾದ ಸುಬ್ರಾಯ ಭಟ್, ಬಿ.ಕೆ. ತಿಮ್ಮಪ್ಪ, ವೇಣುಗೋಪಾಲ ಕಾಸರಗೋಡು ಮತ್ತು ಬಿ. ಪದ್ಮನಾಭ ಅವರ ಕುರಿತಾಗಿ ನಿವೃತ್ತ ಪ್ರಾಧ್ಯಾಪಕ ಡಾ| ಸುಬ್ರಹ್ಮಣ್ಯ ಭಟ್ ಮಾತನಾಡಿದರು. ವಿಭಾಗ ಮುಖ್ಯಸ್ಥೆ ಸುಜಾತಾ ಎಸ್. ಅಧ್ಯಕ್ಷತೆ ವಹಿಸಿದ್ದರು.
ತೃತೀಯ ಪದವಿ ವಿದ್ಯಾರ್ಥಿಗಳಾದ ಸುನೀತಾ ಮತ್ತು ಸವಿತಾ ಅವರಿಗೆ ಪ್ರೊ| ಬಿ. ಪದ್ಮನಾಭ ಸ್ಮರಣಾರ್ಥ ನೀಡುವ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶ್ರದ್ಧಾ ಪ್ರಾರ್ಥಿಸಿದರು. ಕಾರ್ಯಕ್ರಮ ಸಂಯೋಜಕಿ ಡಾ| ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.