ನವದೆಹಲಿ: ಹಾಗೆಯೇ ಊಹೆ ಮಾಡಿಕೊಳ್ಳಿ… ನೀವೊಂದು ಹೋಟೆಲ್‌ಗೆ ಹೋಗುತ್ತೀರಿ, ಒಂದು ಕಾಫಿ ಕುಡಿದು, ಸುಮ್ಮನೆ ಎಡಗೈಯನ್ನು ಪಿಒಎಸ್ ಅಥವಾ ಇತರೆ ಸಂಪರ್ಕರಹಿತ ಪಾವತಿ ಸಾಧನಗಳ ಮೇಲಿಡುತ್ತೀರಿ. ತಕ್ಷಣ ಹಣ ಕಡಿತವಾಗುತ್ತದೆ, ಎಲ್ಲರೂ ಅಚ್ಚರಿಯಿಂದ ನಿಮ್ಮನ್ನು ನೋಡುತ್ತಾರೆ!
ಹೌದು ಇಂತಹದ್ದೊಂದು ಮೈಕ್ರೋಚಿಪ್ ಈಗಾಗಲೇ ತಯಾರಾಗಿದೆ.
ನೆದರ್ಲೆಂಡ್, ಅಮೆರಿಕದಂತಹ ದೇಶಗಳಲ್ಲಿ ಕೆಲವರು ಬಳಕೆಯನ್ನೂ ಶುರು ಮಾಡಿದ್ದಾರೆ. ಬ್ರಿಟಿಷ್-ಪೋಲಿಷ್ ಸಂಸ್ಥೆ ವ್ಯಾಲೆಟ್‌ಮೊರ್ ಈ ರೀತಿಯ ಮೈಕ್ರೊಚಿಪ್‌ಗಳನ್ನು ತಯಾರಿಸುತ್ತಿದೆ. ಜಗತ್ತಿನ ಯಾವುದೇ ದೇಶದಲ್ಲಾದರೂ ಸಂಪರ್ಕರಹಿತ ಪಾವತಿ ವ್ಯವಸ್ಥೆ ಬಳಕೆಯಲ್ಲಿದ್ದರೆ ಅಲ್ಲಿ ನೀವು ಚಿಪ್ ಅನ್ನು ಬಳಸಬಹುದು! ಈ ಚಿಪ್ ಒಂದು ಅಕ್ಕಿಕಾಳಿನ ಗಾತ್ರದಲ್ಲಿರುತ್ತದೆ, ಇದರ ಸುತ್ತ ಒಂದು ಆ್ಯಂಟೆನಾ ಇರುತ್ತದೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ಇಲ್ಲ: ಅಣ್ಣಾಮಲೈ
ಇದಕ್ಕೆ ಬ್ಯಾಟರಿ ಇರುವುದಿಲ್ಲ ಅಥವಾ ಇನ್ನಾವುದೇ ಚಾರ್ಜಿಂಗ್ ಸಾಧನಗಳ ಅವಶ್ಯಕತೆಯಿಲ್ಲ. ಒಮ್ಮೆ ಹಸ್ತದ ಹಿಂಭಾಗದಲ್ಲಿ ಕೂರಿಸಿಬಿಟ್ಟರೆ ಮುಗಿಯಿತು!
ಎನ್‌ಎಫ್ ಸಿ ತಂತ್ರಜ್ಞಾನವನ್ನು ಬಳಸಿ ವ್ಯಾಲೆಟ್‌ಮೊರ್ ಈ ಸಾಧನವನ್ನು ತಯಾರಿಸಿದೆ. ಭವಿಷ್ಯದಲ್ಲಿ ಇದು ಮನೆಮಾತಾದರೂ ಅಚ್ಚರಿಯಿಲ್ಲ!