Advertisement

ಹಣ ಹೊಂದಿಸಿಕೊಳ್ಳಲು ಮೆಟ್ರೋ ಒಡಂಬಡಿಕೆ 

11:11 AM Jun 24, 2017 | |

ಬೆಂಗಳೂರು: ನಮ್ಮ ಮೆಟ್ರೋ ಮೊದಲ ಹಂತ ಲೋಕಾರ್ಪಣೆಗೊಂಡ ಹುರುಪಿನಲ್ಲೇ ನಮ್ಮ ಮೆಟ್ರೋ ಯೋಜನೆಯ “2ಎ’ ಮಾರ್ಗಕ್ಕೆ (ಕೆ.ಆರ್‌.ಪುರದಿಂದ ಸಿಲ್ಕ್ ಬೋರ್ಡ್‌ ಜಂಕ್ಷನ್‌) ವಿನೂತನ ಮಾದರಿಯಲ್ಲಿ ಸಂಪನ್ಮೂಲ ಕ್ರೂಢೀಕರಿಸಲು ಬಿಎಂಆರ್‌ಸಿ ಮುಂದಾಗಿದೆ. ಈ ಸಂಬಂಧ ಎಂಬಸಿ ಗ್ರೂಪ್‌ನೊಂದಿಗೆ 100 ಕೋಟಿ ಮೊತ್ತದ ಯೋಜನೆಗೆ ಒಡಂಬಡಿಕೆ ಮಾಡಿಕೊಂಡಿದೆ.

Advertisement

ಈ ಒಪ್ಪಂದದಡಿ “2ಎ’ ಮಾರ್ಗದಲ್ಲಿ ಬರುವ ಕಾಡುಬಿಸನ ಹಳ್ಳಿ ನಿಲ್ದಾಣ ನಿರ್ಮಾಣಕ್ಕೆ ಎಂಬಸಿ ಗ್ರೂಪ್‌ 100 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇದಕ್ಕೆ ಪ್ರತಿಯಾಗಿ ಬಿಎಂಆರ್‌ಸಿಯು ಮೆಟ್ರೋ ರೈಲನ್ನೆ ಕಾಡುಬಿಸನಹಳ್ಳಿ ನಿಲ್ದಾಣಕ್ಕೆ ಹೊಂದಿಕೊಂಡಿರುವ ಎಂಬಸಿ ಗ್ರೂಪ್‌ ಕಂಪೆನಿಯ ಪ್ರವೇಶ ದ್ವಾರಕ್ಕೆ ತಂದು ನಿಲ್ಲಿಸಲಿದೆ. ಇದರೊಂದಿಗೆ ನಿಲ್ದಾಣದ ಪ್ರವೇಶದ್ವಾರದ ಕಮಾನುಗಳ ಮೇಲೆ ಎಂಬಸಿ ಗ್ರೂಪ್‌ನ ಜಾಹಿರಾತು ಫ‌ಲಕಗಳ ಅಳವಡಿಕೆಗೆ ಅವಕಾಶ ಮಾಡಿಕೊಡಲಾಗಿದೆ.

30 ವರ್ಷದ ಒಡಂಬಡಿಕೆ ಇದಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಮೊದಲ ಹಂತದಲ್ಲಿ ಬಿಎಂಆರ್‌ಸಿ ಈ ಪ್ರಯೋಗವನ್ನು ಮಾಡಿದೆ. ಉದಾಹರಣೆಗೆ ಸಿಲ್ಕ್ ಸೋಪ್‌ ಪ್ಯಾಕ್ಟರಿ ನಿಲ್ದಾಣದ ಪ್ರವೇಶ ದ್ವಾರದ ಮೆಟ್ಟಿಲುಗಳು, ಶೆರ್ಟಾನ್‌ ಹೋಟೆಲ್‌ಗೆ ಅಂತ್ಯಗೊಳ್ಳುತ್ತದೆ. ಅದೇ ರೀತಿ ಮಂತ್ರಿ ಸ್ಕ್ವೇರ್‌ಗೆ ಮತ್ತೂಂದು ನಿಲ್ದಾಣ ಬಂದು ಸೇರುತ್ತಿದೆ. ಇದರ ಮುಂದುವರಿದ ಭಾಗವಾಗಿ ಎಂಬಸಿ ಗ್ರೂಪ್‌ನ ಜತೆಗಿನ ಒಪ್ಪಂದ.

4,202 ಕೋಟಿ ಯೋಜನೆ ಇದಾಗಿದ್ದು, ಕೆ.ಆರ್‌.ಪುರಂನಿಂದ ಸಿಲ್ಕ್ ಬೋರ್ಡ್‌ವರೆಗೆ ಸುಮಾರು 17 ಕಿ.ಮೀಟರ್‌ ಇದ್ದು, 13 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ. ಈ ಪೈಕಿ ಒಂದು ನಿಲ್ದಾಣವನ್ನು ಎಂಬಸಿ ಗ್ರೂಪ್‌ ನಿರ್ಮಿಸಿಕೊಡಲಿದೆ. ಒಟ್ಟಾರೆ ಯೋಜನೆಯನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next