Advertisement

ಜ್ಯೋತಿ ಬೆಳಗಿಸಿದ ಕ್ರೀಡಾ ತಾರೆಯರ ಸಂದೇಶ

11:23 PM Apr 06, 2020 | Sriram |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಕೊಟ್ಟ “ದೀಪ ಬೆಳಗುವ’ ಕರೆಗೆ ಇಡೀ ದೇಶದ ಜನತೆಯೇ ಒಗ್ಗೂಡಿತ್ತು, ರವಿವಾರ ರಾತ್ರಿ 9 ಗಂಟೆಗೆ ಕೋವಿಡ್ 19ವನ್ನು ಹೊಡೆದೊಡಿಸುವ ಆತ್ಮಶಕ್ತಿಯ ಪ್ರತೀಕವಾದ ಜ್ಯೋತಿಯನ್ನು ಇಡೀ ದೇಶದ ಜನತೆ ಬೆಳಗಿತು, ಜಾತಿ, ಮತ ಧರ್ಮಭೇದವನ್ನು ಮರೆತು ಎಲ್ಲರೂ ಒಗ್ಗೂಡಿ ಭಾವೈಕ್ಯದ ಸಂದೇಶ ಸಾರಿದ್ದು ವಿಶೇಷವಾಗಿತ್ತು.

Advertisement

ಜ್ಯೋತಿ ಬೆಳಗುವ ಕಾರ್ಯಕ್ರಮದಲ್ಲಿ ದೇಶದ ಖ್ಯಾತನಾಮ ಕ್ರೀಡಾಪಟುಗಳೆಲ್ಲ ಕೈ ಜೋಡಿಸಿದ್ದರು, ತಮ್ಮ ಮನೆಯಂಗಳದಲ್ಲಿ, ಬಾಲ್ಕನಿಯಲ್ಲಿ ಜ್ಯೋತಿ ಬೆಳಗಿಸಿದ ಕ್ರೀಡಾ ತಾರೆಯರು ಫೋಟೊ, ಸಂದೇಶವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಏನೆಲ್ಲ ಹಂಚಿಕೊಂಡಿದ್ದಾರೆ ಎನ್ನುವ ವರದಿ ಇಲ್ಲಿದೆ ಓದಿ…

ಟ್ವಿಟರ್‌ ಸಂದೇಶಗಳು

“ಎಲ್ಲರು ಒಟ್ಟಾಗಿ ನಡೆಸುವ ಒಂದು ಪ್ರಾರ್ಥನೆಯಿಂದ ದೇಶಕ್ಕೆ ಒಳಿತಾಗಬಹುದು, ಪ್ರತಿಯೊಬ್ಬರಿಗಾಗಿ ಪ್ರಾರ್ಥಿಸಿ, ಅವರೆಲ್ಲರಿಗೂ ಬೆಂಬಲವಾಗಿ ನಿಲ್ಲಿ’
-ವಿರಾಟ್‌ ಕೊಹ್ಲಿ, ಭಾರತ ತಂಡದ ನಾಯಕ

“ಪ್ರಧಾನ ಮಂತ್ರಿಗಳ ಕರೆಯ ಮೇರೆಗೆ ದೀಪ ಹಚ್ಚುವ ಕಾರ್ಯಕ್ರಮ ನಡೆಸಿದ್ದೇನೆ, ನಮಗಾಗಿ ದುಡಿಯುತ್ತಿರುವ ಡಾಕ್ಟರ್‌, ನರ್ಸ್‌, ಪೊಲೀಸ್‌ ಸಿಬಂದಿ ಸೇರಿದಂತೆ ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಎಲ್ಲರಿಗೂ ಅಭಾರಿಯಾಗಿದ್ದೇನೆ, ಜೈ ಹಿಂದ್‌…ಜೈ ಭಾರತ್‌’
– ಯೋಗೇಶ್ವರ್‌ ದತ್‌, ಒಲಿಂಪಿಯನ್‌ ಕುಸ್ತಿಪಟು

Advertisement

“ಕೋವಿಡ್ 19 ವಿರುದ್ಧದ ಹೋರಾಟಕ್ಕೆ ನನ್ನ ದೇಶದ ಭಾವೈಕ್ಯತೆಯ ಪ್ರತೀಕವಾದ ದೀಪ, ಪ್ರಧಾನಿಗಳೇ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮೊಂದಿಗಿದ್ದೇವೆ’
– ಹಿಮಾ ದಾಸ್‌, ಖ್ಯಾತ ಆ್ಯತ್ಲೀಟ್‌

“ಇಂತಹ ಸಂಕಷ್ಟದ ಸಮಯದಲ್ಲಿ ನಾವೆಲ್ಲ ನಿಮ್ಮೊಂದಿಗೆ ಒಗ್ಗಟ್ಟಾಗಿ ನಿಲ್ಲುತ್ತೇವೆ.
– ಮಣಿಕಾ ಬಾತ್ರಾ, ಟೇಬಲ್‌ ಟೆನಿಸ್‌ ಆಟಗಾರ್ತಿ

“ಕೋವಿಡ್ 19 ವಿರುದ್ಧ ಹೋರಾಟದಲ್ಲಿ ಒಗ್ಗಟ್ಟಿನಿಂದ ತಮ್ಮ ಪಾತ್ರವನ್ನು ನಿರ್ವಹಿಸುತ್ತಿರುವ ಪ್ರತಿಯೊಬ್ಬರ ಜತೆಗೆ ನಾವಿದ್ದೇವೆ. ಎಲ್ಲರು ಒಟ್ಟಾಗಿ ಹೋರಾಡಿ ಶೀಘ್ರದಲ್ಲೇ ಎಲ್ಲ ಸಮಸ್ಯೆಗಳಿಂದ ಮುಕ್ತಿಪಡೆಯುವ. ಓಂ ಶಾಂತಿಃ.. ಶಾಂತಿಃ…ಶಾಂತಿಃ’
– ವೀರೇಂದ್ರ ಸೆಹವಾಗ್‌, ಮಾಜಿ ಕ್ರಿಕೆಟಿಗ

“ಬೆಳಕು ಮನೆಗೆ ತೆರಳಲು ನಮಗೆಲ್ಲ ಮಾರ್ಗದರ್ಶನ ನೀಡುತ್ತದೆ’
– ಕೆ.ಎಲ್‌.ರಾಹುಲ್‌, ಖ್ಯಾತ ಕ್ರಿಕೆಟಿಗ

“ಆರೋಗ್ಯ ಸೈನಿಕರಿಗಾಗಿ ಇಡೀ ದೇಶವೇ ಇಂತಹದೊಂದು ಕಾರ್ಯದಲ್ಲಿ ಒಟ್ಟಾಗಿ ನಿಂತು ಹೃದಯಸ್ಪರ್ಶಿ ನಮನಗಳನ್ನು ಸಲ್ಲಿಸಿದ್ದು ನೋಡಿ ಮನಸ್ಸು ತುಂಬಿ ಬಂತು, ಎಲ್ಲರದ್ದು ಅದ್ಭುತವಾದ ಭಾಗವಹಿಸುವಿಕೆ, ಇಂತಹ ಸಂದರ್ಭದಲ್ಲಿ ನಾವೆಲ್ಲ ಮತ್ತಷ್ಟು ದೃಢ ಮನಸ್ಸಿನಿಂದ ನಿಂತು ಕೋವಿಡ್ 19 ವಿರುದ್ಧ ಹೋರಾಟ ನಡೆಸಬೇಕಿದೆ’.
– ಹಾರ್ದಿಕ್‌ ಪಾಂಡ್ಯ, ಖ್ಯಾತ ಕ್ರಿಕೆಟಿಗ

“ನಮ್ಮ ಸುತ್ತಮುತ್ತ, ಆಸ್ಪತ್ರೆ, ರಸ್ತೆ ಬೀದಿಗಳನ್ನು ಸ್ವತ್ಛಗೊಳಿಸಿ ವೈರಸ್‌ ಹರಡದಂತೆ ತಡೆಯುತ್ತಿರುವ ಸ್ವತ್ಛತಾ ಸೈನಿಕರಿಗೆ ನನ್ನ ಹಾಗೂ ಕುಟುಂಬದ ಪರವಾಗಿ ಧನ್ಯವಾದಗಳು. ಜತೆಗೆ ನಮ್ಮ ಹಿರಿಯರನ್ನು ಜೋಪಾನವಾಗಿ ನೋಡಿಕೊಳ್ಳುವ ಪ್ರತಿಜ್ಞೆ ಮಾಡಿ, ಇಂತಹ ಸಂದರ್ಭದಲ್ಲಿ ಅವರ ಮಾನಸಿಕ, ದೈಹಿಕ ಆರೋಗ್ಯ ಕಾಪಾಡಿ’
– ಸಚಿನ್‌ ತೆಂಡುಲ್ಕರ್‌, ಹಿರಿಯ ಕ್ರಿಕೆಟಿಗ

“ಇಡೀ ಭಾರತಕ್ಕಾಗಿ ನಾವೆಲ್ಲ ಒಟ್ಟಾಗಿ ಇಂತಹ ಮಹತ್ಕಾರ್ಯದಲ್ಲಿ ಒಂದಾಗಿ ನಿಲ್ಲಬೇಕು. ಕಷ್ಟದ ಪರಿಸ್ಥಿತಿಯ ವಿರುದ್ಧ ಹೋರಾಡಿ ಗೆಲ್ಲಬೇಕು’.
– ಸುರೇಶ್‌ ರೈನಾ, ಖ್ಯಾತ ಕ್ರಿಕೆಟಿಗ

Advertisement

Udayavani is now on Telegram. Click here to join our channel and stay updated with the latest news.

Next