Advertisement
2001ರಲ್ಲಿ ಪುರಸಭೆಯ ಸ್ವರ್ಣ ಜಯಂತಿ ಶಹರಿ ರೋಜಗಾರ ಯೋಜನೆ ಅಡಿಯಲ್ಲಿ 1.40 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಅಭಿವೃದ್ಧಿ ಸಂಘದ ವತಿಯಿಂದ ಪಟ್ಟಣದ ಪುರಸಭೆ ಬಳಿ ಈ ಕಟ್ಟಡ ನಿರ್ಮಿಸಲಾಗಿತ್ತು. ಇದೀಗ ಪುಸ್ತಕಗಳ ಗೋದಾಮು ಆಗಿ ಪರಿವರ್ತನೆಗೊಂಡಿದೆ. ಆರಂಭದ ಕೆಲ ದಿನಗಳನ್ನು ಹೊರತು ಪಡಿಸಿದರೆ, ಈವರೆಗೂ ಇದ್ದೂ ಇಲ್ಲದಂತಾಗಿದೆ.
Related Articles
Advertisement
ಗ್ರಂಥಗಳ ಭಂಡಾರ: ಗ್ರಂಥಾಲಯ ಹೊರ ನೋಟಕ್ಕಷ್ಟೇ ಓಬೇರಾಯನ ಕಾಲದಂತೆ ಕಂಡರೂ ಒಳ ಸುಳಿವು ಮಾತ್ರ ಬಹುದೊಡ್ಡದಾಗಿ ಹಬ್ಬಿದೆ. 35 ಸಾವಿರಕ್ಕೂ ಅಧಿಕ ವಿವಿಧ ಭಾಷೆಯಪುಸ್ತಕಗಳಿವೆ. ಆದರೆ ಬಹು ಮೌಲ್ಯದ ಪುಸ್ತಕ, ಮೇಜು–ಕುರ್ಚಿಗಳನ್ನು ಹೊಂದಿರುವ ಈ ಮಹಿಳಾಗ್ರಂಥಾಲಯ ಸಾರ್ವಜನಿಕರಿಗೆ ಸೇವೆ ನೀಡದೇ ಇದ್ದುದರಿಂದ ಪುಸ್ತಕಗಳು ಧೂಳು ಹಿಡಿದಿವೆ. ವಾಚನಾಲಯ ಉದ್ಘಾಟನೆಗೊಂಡಾಗ ಸಂತಸಗೊಂಡಿದ್ದ ಮುಖಗಳು ಈಗ ಬಾಡಿ ಹೋಗಿವೆ. ಮಹಿಳೆಯರು ಅಕ್ಷರವಂತರಾಗಿಶೈಕ್ಷಣಿಕ ಪ್ರಗತಿ ಸಾ ಧಿಸಿದರೆ, ಮಾತ್ರ ಸಮ ಸಮಾಜ ನಿರ್ಮಿಸಲು ಸಾಧ್ಯವೆಂದು ಗಂಟೆಗಟ್ಟಲೇ ಭಾಷಣ ಬಿಗಿಯುವವರಿಗೆ ಪಟ್ಟಣದಲ್ಲಿರುವ ಮಹಿಳಾ ಗ್ರಂಥಾಲಯ ಬಗ್ಗೆ ಯಾಕಿಷ್ಟು ಉದಾಸೀನ ಎಂಬುದು ತಿಳಿಯದಾಗಿದೆ.
ಬೇಕಿದೆ ಇಚ್ಛಾಶಕ್ತಿ: ಮಹಿಳೆಯೊಬ್ಬಳು ಕಲಿತರೆ ಇಡೀ ಸಮುದಾಯ ಕಲಿತಂತೆ, ಬೇಟಿ ಬಚಾವೋ,ಬೇಟಿ ಪಡಾವೋ ಎಂಬ ಮಾತನ್ನು ಸರ್ಕಾರಗಳು ಮರೆತಂತಿದೆ.
-ಡಿ.ಜಿ. ಮೋಮಿನ್