Advertisement

ಬಿಸಿಯೂಟ ತಯಾರಕರ ಪ್ರತಿಭಟನೆ

02:46 PM Mar 21, 2017 | Team Udayavani |

ದಾವಣಗೆರೆ: ತಮಿಳುನಾಡು ಮಾದರಿಯಲ್ಲಿ ಅರೆಕಾಲಿಕ ಖಾಯಂ ನೌಕರರಂತೆ ಪರಿಗಣನೆ, ಕೆಲಸದ ಭದ್ರತೆ, ಕನಿಷ್ಠ ವೇತನ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಬಿಸಿಯೂಟ ತಯಾರಕರ ಫೆಡರೇಷನ್‌ ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 

Advertisement

ಶ್ರೀ ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿತ ಅಕ್ಷರ ದಾಸೋಹ ಬಿಸಿಯೂಟ ಯೋಜನೆಯ ಯಶಸ್ಸಿಗೆ ಕಾರಣವಾಗುತ್ತಿರುವ ಬಿಸಿಯೂಟ ತಯಾರಕರ ಬಗ್ಗೆಯೇ ನಿರ್ಲಕ್ಷé ಮಾಡಲಾಗುತ್ತಿದೆ. 

ಕಾರ್ಯಕರ್ತರು 2 ಸಾವಿರದಷ್ಟು ಕಡಿಮೆ ಗೌರವಧನದೊಂದಿಗೆ ಅತೀ ಸಂಕಷ್ಟಮಯ ಜೀವನ ನಡೆಸುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ದಿನಗಳಲ್ಲಿ ಇಷ್ಟೊಂದು ಕಡಿಮೆ ಗೌರವ ಧನದಲ್ಲಿ ಜೀವನ ನಿರ್ವಹಣೆ ತುಂಬಾ ಕಷ್ಟವಾಗುತ್ತಿದೆ. ಹಾಗಾಗಿ ಕನಿಷ್ಠ 18 ಸಾವಿರ ವೇತನ ನಿಗದಿಪಡಿಸಿ, ಪ್ರತಿ ತಿಂಗಳ 5ನೇ ತಾರೀಖೀಗೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಬಿಸಿಯೂಟ ಕಾರ್ಯಕರ್ತರು ಸದಾ ಕೆಲಸದ ಅಭದ್ರತೆಯಲ್ಲೇ ಇರಬೇಕಾಗಿದೆ. ಶಾಲಾಭಿವೃದ್ಧಿ ಸಮಿತಿ ಒಳಗೊಂಡಂತೆ ಮತ್ತಿತರ ತೀರ್ಮಾನದ ಅನ್ವಯ ಕೆಲಸದಲ್ಲಿ ಮುಂದುವರೆಯುವಂತಹ ವಾತಾವರಣ ಇರುವ ಹಿನ್ನೆಲೆಯಲ್ಲಿ ತಮಿಳುನಾಡು ಮಾದರಿಯಲ್ಲಿ ಅರೆಕಾಲಿಕ ಖಾಯಂ ನೌಕರರಂತೆ ಪರಿಗಣಿಸಿ, ಕೆಲಸದ ಭದ್ರತೆ, ಆರೋಗ್ಯ ವಿಮೆ, ಭವಿಷ್ಯ ನಿಧಿ, ನಿವೃತ್ತ ವೇತನದಂತಹ ಸಾಮಾಜಿಕ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು. 

ಯೋಜನೆಯ ಮೂಲ ಕೈಪಿಡಿಯಲ್ಲಿರುವಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕಾರ್ಯಕರ್ತರ ನೇಮಕ, ಆಕಸ್ಮಿಕ ಅಪಘಾತದಿಂದ ಅಂಗವಿಕಲರಾದಲ್ಲಿ ಅಥವಾ ಮರಣ ಸಂಭವಿಸಿದಲ್ಲಿ 2 ಲಕ್ಷ ಪರಿಹಾರ, ಖಾಸಗಿ ಸಂಸ್ಥೆಗಳಿಗೆ ನೀಡಿರುವ ಬಿಸಿಯೂಟ ಯೋಜನೆ ರದ್ಧುಪಡಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು. 

Advertisement

ಫೆಡರೇಷನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಆನಂದರಾಜ್‌, ಆವರಗೆರೆ ವಾಸು, ಮಹಮ್ಮದ್‌ ಬಾಷಾ, ರುದ್ರಮ್ಮ ಬೆಳಲಗೆರೆ, ಸರೋಜಾ, ಪುಷ್ಪಾ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next