Advertisement

ಗೋಡಂಬಿ ಉದ್ಯಮ ಘಟಕಕ್ಕೆ ಕೆನರಾ ಬ್ಯಾಂಕ್‌ ಗರಿಷ್ಠ ಸಾಲ

05:51 PM Mar 06, 2017 | |

ಉಡುಪಿ: ಗೋಡಂಬಿ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಕೆನರಾ ಬ್ಯಾಂಕ್‌ ಉತ್ತೇಜನ ನೀಡುತ್ತಿದ್ದು, ಘಟಕಗಳ ವಿಸ್ತರಣೆ, ನಿರ್ಮಾಣಕ್ಕೆ 50 ಸಾವಿರದಿಂದ 20 ಕೋ.ರೂ.ವರೆಗೆ ಸಾಲ ಸೌಲಭ್ಯವನ್ನು ಕೆನರಾ ಬ್ಯಾಂಕ್‌ ನೀಡಲು ಯೋಜನೆ ಹಮ್ಮಿಕೊಂಡಿದೆ ಎಂದು ಕೆನರಾ ಬ್ಯಾಂಕಿನ ಮಂಗಳೂರು ವೃತ್ತ ಕಚೇರಿಯ ಜನರಲ್‌ ಮ್ಯಾನೇಜರ್‌ ಕೆ. ವಿರೂಪಾಕ್ಷ ಹೇಳಿದರು.

Advertisement

ಶನಿವಾರ ಉಡುಪಿಯಲ್ಲಿ  ಕೆನರಾ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿ ವತಿಯಿಂದ ನಡೆದ ಗೇರು ಬೀಜ ಸಂಸ್ಕರಣಾ ಘಟಕಗಳ ವ್ಯಾಪಾರಸ್ಥರ ಜತೆಗೆ ಸಮ್ಮೇಳನ-ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗೋಡಂಬಿ ಉದ್ದಿಮೆಯ ಬೆಳವಣಿಗೆಗೆ ತಕ್ಕಂತೆ ಯೋಜನೆಗಳನ್ನು ಮಾರ್ಪಾಡುಗೊಳಿಸಲಾಗಿದೆ. ಗೋಡಂಬಿ ಉದ್ಯಮ ಕೂಡ ಕೃಷಿಯ ಒಂದು ಭಾಗವಾಗಿದೆ. ಇದಕ್ಕೆ ಹೆಚ್ಚಿನ ಉತ್ತೇಜನ ನೀಡಲು ಬ್ಯಾಂಕು ಯೋಜನೆಗಳನ್ನು ಪರಿಷ್ಕರಿಸುತ್ತಲಿದೆ. ಗೋಡಂಬಿ ರಫ್ತು ಹೆಚ್ಚಬೇಕಿದೆ ಎಂದ‌ು ಹೇಳಿದರು.

ಗೋಡಂಬಿ ಸಂಸ್ಕರಣಾ ಘಟಕ ನಿರ್ಮಾಣದಲ್ಲಿ ಬ್ಯಾಂಕಿನ ಪಾತ್ರದ ಕುರಿತು ಕೆನರಾ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ಶ್ರೀನಾಥ್‌ ಜೋಶಿ ಮಾತನಾಡಿ, ಸಾಲ ಸೌಲಭ್ಯ ಯೋಜನೆಗಳ ಬಗ್ಗೆ ಪ್ರಾತ್ಯಕ್ಷಿಕೆ ಯೊಂದಿಗೆ ವಿವರಣೆ ನೀಡಿದರು.

ಕೆನರಾ ಬ್ಯಾಂಕ್‌ ಉಡುಪಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್‌ ಜನರಲ್‌ ಮ್ಯಾನೇಜರ್‌ ರಾಜಶೇಖರ್‌ ಕೆ. ಮೇಟಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next