Advertisement
ನಗರದ ಪ್ರಮುಖ ಮಾರುಕಟ್ಟೆ, ಹಣ್ಣಿನ ಮಳಿಗೆಗಳು, ಸೂಪರ್ ಮಾರ್ಕೆಟ್, ಬಜಾರ್‌ಗಳಿಂದ ಹಿಡಿದು ಹಾಪ್‌ಕಾಮ್ಸ್, ತಳ್ಳುಗಾಡಿಗಳು, ಬೀದಿಬದಿ ವ್ಯಾಪಾರ ಮಳಿಗೆಗಳಲ್ಲಿ ಮಾವಿನ ಹಣ್ಣಿನ ರಾಶಿ ಕಾಣುತ್ತಿದ್ದು, ಇಲ್ಲಿನ ಸ್ವಾದಿಷ್ಟ ಮಾವಿನ ಹಣ್ಣುಗಳಿಗೆ ಜನ ಮಾರುಹೋಗಿದ್ದಾರೆ. ಇನ್ನು ಮುಂದಿನ ಮೂರ್‍ನಾಲ್ಕು ತಿಂಗಳ ಕಾಲ ನಗರದಲ್ಲಿ ಮಾವಿನ ಪಾರುಪತ್ಯ ಮುಂದುವರಿಯಲಿದೆ.
Related Articles
Advertisement
ಈ ಬಾರಿ ಹೆಚ್ಚು ಇಳುವರಿ: ರಾಜ್ಯದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ತಾಪಮಾನ ಹೆಚ್ಚಿರುವುದರಿಂದ ಹಾಗೂ ಹವಾಮಾನ ವೈಪರಿತ್ಯ ಕಡಿಮೆ ಇರುವುದರಿಂದ ಮಾವುವಿನ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 1.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆದಿದ್ದು, 10 ಲಕ್ಷ ಟನ್ ಮಾವು ಉತ್ಪಾದನೆಯಾಗಬಹುದು ಎಂದು ಅಂದಾಜಿಸಲಾಗಿದೆ. ಜತೆಗೆ ಇಲ್ಲಿಯವರೆಗೆ ಮಳೆ ಬೀಳದ ಕಾರಣ ಮುಂದೆ ಮೂರು ಹಂತದಲ್ಲಿ ಮಾವು ಕೊಯ್ಲಿಗೆ ಬರಲಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
ಮಾವು ಮಂಡಳಿ ಮತ್ತು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಪ್ರತಿ ವರ್ಷ ಬೆಂಗಳೂರಿನಲ್ಲಿ ಮಾವು ಮೇಳಕ್ಕೆ ಈ ಬಾರಿ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಮಾವು ಮೇಳದ ಕುರಿತು ಯಾವುದೇ ಸಭೆಗಳು ಈವರೆಗೆ ನಡೆದಿಲ್ಲ. ಜತೆಗೆ ರಾಜ್ಯದ ಎಲ್ಲಾ ಭಾಗದ ಮಾವು ಮಾರುಕಟ್ಟೆಗೆ ಬಂದ ನಂತರವೇ ಅಂದರೆ ಮೇ ಕೊನೆಯ ವಾರದ ನಂತರವೇ ಈ ಬಾರಿ ಮೇಳ ಆಯೋಜನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ದರ ಪಟ್ಟಿ (ಕೆ.ಜಿ.ಗೆ): ಆಲ್ಫನ್ಸ್ – 65, ಅಮರ್‌ಪಾಲಿ – 80, ಬೈಗನ್‌ಪಾಲಿ – 99, ಮಲ್ಗೊವಾ- 150, ರಸಪೂರಿ-80 ರೂ. ಮಲ್ಲಿಕಾ- 109 ರೂ. ನೀಲಂ- 52, ರಸಪೂರಿ- 96, ಸೆಂಧೂರ- 42 ರೂ. ಕಾಲಾಪಹಡ್-100 ರೂ. ದಶೇರಿ -150ರೂ. ತೊತಾಪುರಿ-40 ರೂ.
ಈ ವರ್ಷ ಸರಿಯಾದ ಸಮಯಕ್ಕೆ ಮಾವಿನ ಮರಗಳು ಹೂ ಬಿಟ್ಟಿದ್ದು, ಕಳೆದ ಬಾರಿಗಿಂತ ಶೇ.20ರಷ್ಟು ಉತ್ತಮ ಇಳುವರಿಯಾಗಲಿದೆ. ಕಳೆದ ವರ್ಷ ಮಳೆ ಕೈಕೊಟ್ಟ ಪರಿಣಾಮ ಕಾಯಿಗಳ ಗಾತ್ರದಲ್ಲಿ ವ್ಯತ್ಯಾಸವಾಗಬಹುದು. ಪ್ರತಿ ಬಾರಿಯಂತೆ ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತ ಶೇ.20 ರಷ್ಟು ಕಡಿಮೆ ಬೆಲೆಯಲ್ಲಿ ಹಣ್ಣು ಸಿಗಲಿವೆ.-ಪ್ರಸಾದ್, ವ್ಯವಸ್ಥಾಪಕ ನಿರ್ದೇಶಕರು, ಹಾಪ್‌ಕಾಮ್ಸ್