Advertisement

ಬಹುಮತ ಪಡೆದು ಬಿಜೆಪಿ ಸರಕಾರ ರಚನೆ

12:26 PM May 11, 2018 | |

ಇಂಡಿ: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ದೊರೆತು ಮೇ 15ರಂದು ಸರ್ಕಾರ ರಚಿಸಲಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯ ಸಮೀಪದ ಬಯಲು ಆವರಣದಲ್ಲಿ ಬಿಜೆಪಿ ಇಂಡಿ ಮಂಡಲದಿಂದ ಗುರುವಾರ ಹಮ್ಮಿಕೊಂಡ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು. 

Advertisement

ಕರ್ನಾಟಕ ದೇಶದ ಪ್ರಮುಖ ರಾಜ್ಯ. ಇಲ್ಲಿನ ಸಂಸ್ಕೃತಿ ಆಧ್ಯಾತ್ಮಿಕ ಪರಂಪರೆಯಿಂದ ತುಂಬಿ ತುಳುಕಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಜಿಹಾದಿಗಳೊಂದಿಗೆ ಕೈ ಜೋಡಿಸಿದೆ. ಕರ್ನಾಟಕದಲ್ಲಿ ಅರಾಜಕತೆ ಮನೆ ಮಾಡಿದೆ. ಅಭಿವೃದ್ದಿ ಕುಸಿದಿದೆ. ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲುವ ಅವಶ್ಯಕತೆ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ರಾಮರಾಜ್ಯ ರಾಜ್ಯದಲ್ಲಿ ಸ್ಥಾಪನೆ ಮಾಡಲಿದೆ ಎಂದು ಹೇಳಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಭ್ರಷ್ಟಾಚಾರ, ಅಪರಾಧ ಕೃತ್ಯಗಳಿಂದ ಗುರುತಿಸುವ ಪರಿಸ್ಥಿತಿ ಇದೆ. 

ಕರ್ನಾಟಕದಲ್ಲಿ ಅಕ್ರಮ ಕಸಾಯಿ ಖಾನೆಗಳನ್ನು ಸಿದ್ದರಾಮಯ್ಯ ಸರ್ಕಾರ ಪೋಷಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಘಂಟೆಗಳಲ್ಲಿ ಕಸಾಯಿ ಖಾನೆಗಳನ್ನು ಬಂದ್‌ ಮಾಡಿಸಿದ್ದೇವೆ. ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಸಾಯಿಖಾನೆ ಬಂದ್‌ ಮಾಡುತ್ತೇವೆ ಎಂದು ಹೇಳಿದರು.

ಜೆಡಿಎಸ್‌ ಓವೈಸಿ ಜತೆ ಕೈಜೋಡಿಸಿದೆ. ಇದರ ಅರ್ಥ ಏನು? ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಹತ್ಯೆಗಳು ಸಾಲಾಗಿ
ನಡೆಯುತ್ತಿವೆ. ಇದಕ್ಕೆ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ ಎಂದು ಆರೋಪಿಸಿದರು. ಸಿದ್ದರಾಮಯ್ಯ ಸರ್ಕಾರ ಭೂ ಹಗರಣ ಮತ್ತು ಮರಳು ಮಾಫಿಯಾದವರೊಂದಿಗೆ ಭಾಗಿಯಾಗಿ ಹಣ ಲೂಟಿ ಹೊಡೆದಿದೆ. ಈಗ ಕರ್ನಾಟಕದಲ್ಲಿ
ಕಾಂಗ್ರೆಸ್‌ ಸರ್ಕಾರ ಕುಸಿಯಲು ಆರಂಭಿಸಿದೆ. ಬಿಜೆಪಿ ಅಧಿಕಾರ ಸ್ಥಾಪಿಸುವತ್ತ ದಾಪುಗಾಲಿಡುತ್ತಿದೆ. ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು. 

ಕಾಂಗ್ರೆಸ್‌ ಸರ್ಕಾರ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಇದ್ದಂತೆ. ಇಲ್ಲಿ ಸಾಮಾನ್ಯರಿಗೆ ಅಧಿಕಾರ ನೀಡುವುದಿಲ್ಲ. ಕಾಂಗ್ರೆಸ್‌ ಒಂದು ಪಕ್ಷವಲ್ಲ, ಪರಿವಾರವಾಗಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಗೆ ಮತ ನೀಡಿದರೆ ದೇಶದ್ರೋಹಿಗಳಿಗೆ ಮತ
ನೀಡಿದಂತೆ. ಹೀಗಾಗಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ತಿರಸ್ಕರಿಸಿ ಬಿಜೆಪಿಗೆ ಅ ಧಿಕಾರಕ್ಕೆ ತನ್ನಿ ಎಂದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯೇಂದ್ರ ಗುಪ್ತಾ, ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ಬಿಜೆಪಿ ಅಭ್ಯರ್ಥಿ ದಯಾಸಾಗರ ಪಾಟೀಲ ಮಾತನಾಡಿದರು.

Advertisement

ವಿಜಯೇಂದ್ರ ಗುಪ್ತಾ, ರವಿಕಾಂತ ಬಗಲಿ, ಉದ್ಯಮಿ ಬಾಬುಗೌಡ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಅಣ್ಣಪ್ಪ ಸಾಹುಕಾರ ಖೈನೂರ, ಬಿ.ಎಸ್‌.ಪಾಟೀಲ, ಹಣಮಂತರಾಯಗೌಡ ಪಾಟೀಲ, ಅನಿಲ ಜಮಾದಾರ, ಅಶೋಕ ಅಲ್ಲಾಪುರ, ಸಿದ್ದಲಿಂಗ ಹಂಜಗಿ, ಶೀಲವಂತ ಉಮರಾಣಿ, ಶಂಕರಗೌಡ ಪಾಟೀಲ, ಪಾಪು ಕಿತ್ತಲಿ, ವೆಂಕಟೇಶ ಕುಲಕರ್ಣಿ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next