Advertisement
ಹಕ್ಕುಪತ್ರವಿಲ್ಲದೆ ಸಂಕಷ್ಟಗುಂಡ್ಯ ಪ್ರದೇಶದಲ್ಲಿ ಹಲವಾರು ಬಡವರ ಮನೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಮನೆ ದುರಸ್ತಿ ಅಥವಾ ಹೊಸ ಮನೆ ನಿರ್ಮಾಣಕ್ಕಾಗಿ ಸರಕಾರದ ಅನುದಾನ ಪಡೆಯಲು ಸಮಸ್ಯೆಯಾಗಿದೆ. ಕಾರಣ ಹಕ್ಕುಪತ್ರ ವಿಲ್ಲದಿರುವುದು. ಕಳೆದ 20 ವರ್ಷಗಳಿಂದ ವಾಸ ಮಾಡಿಕೊಂಡಿ ದ್ದಾಗ್ಯೂ ಹಕ್ಕುಪತ್ರವಿಲ್ಲವೆಂಬ ಏಕೈಕ ಕಾರಣಕ್ಕಾಗಿ ಸರಕಾರದ ಯಾವೊಂದು ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ಇಲ್ಲಿನ ನಿವಾಸಿಗಳದ್ದು.
ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಈ ವಾರ್ಡ್‌ನ
ಪ್ರಮುಖ ಸಮಸ್ಯೆ. ಆಶ್ರಯ ಕಾಲನಿ ಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಕೆಲವೆಡೆ ಚರಂಡಿಯೇ ಇಲ್ಲ ಎನ್ನಬಹುದು. ಇದ್ದ ಚರಂಡಿಗಳು ಪೊದೆಯಿಂದ ಆವೃತವಾಗಿದ್ದು ಉಪಯೋಗಕ್ಕೆ ಬಾರದಂತಿವೆ. ರಸ್ತೆ ಸ್ಥಿತಿ ಶೋಚನೀಯ
ವಾರ್ಡ್‌ನಲ್ಲಿ ರಸ್ತೆಯೂ ಚೆನ್ನಾಗಿಲ್ಲ. ಹೊಂಡಗುಂಡಿಗಳಿಂದ ಕೂಡಿರುವ ಇಲ್ಲಿನ ರಸ್ತೆಗಳಿಗೆ ಮರುಡಾಮರು ಆಗಬೇಕಿದೆ. ಸದ್ಭಾವನ ನಗರದಿಂದ ಕಲ್ಲೊಟ್ಟೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಅಯೋಗ್ಯವಾಗಿದೆ.
Related Articles
ಗುಂಡ್ಯ ಎಂಬಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಿದ ಜಾಗ ಅಭಿವೃದ್ಧಿ ಕಂಡಿಲ್ಲ. ಉದ್ಯಾನವನ ಸುಂದರಗೊಳಿಸಿ ನಮ್ಮ ಬೇಡಿಕೆಯೊಂದನ್ನು ಈಡೇರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
Advertisement
ವಿದ್ಯುತ್ ಸಂಪರ್ಕ ವಂಚಿತ ಮನೆಗಳುಈ ವಾರ್ಡ್‌ನಲ್ಲಿ ಸುಮಾರು 150 ಮನೆಗಳಿದ್ದು, ಅವುಗಳಲ್ಲಿ ಮೂರು ಮನೆಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕವಿಲ್ಲ. ತಮ್ಮ ಮನೆಯಲ್ಲಿ ಯಾವಾಗ ಬೆಳಕು ಹರಿಯುವಂತಾಗುವುದೋ ಎಂದು ಇಲ್ಲಿನ ನಿವಾಸಿಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ವಾರ್ಡ್ ಅಭಿವೃದ್ಧಿಗೆ
ಪ್ರಾಮಾಣಿಕ ಪ್ರಯತ್ನ
ಒಂದು ವರ್ಷವಾದರೂ ಪುರಸಭೆಗೆ ಅಧ್ಯಕ್ಷರ ನೇಮಕವಾಗದಿರುವುದು ಅಭಿವೃದ್ಧಿ ದೃಷ್ಟಿಯಲ್ಲಿ ಹಿನ್ನಡೆಯಾಗಿದೆ. ನನ್ನ ವಾರ್ಡ್‌ನ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ವ ರೀತಿಯಿಂದಲೂ ಪ್ರಯತ್ನಿಸುತ್ತೇನೆ.
– ನೀತಾ ಪ್ರಶಾಂತ್ ಆಚಾರ್ಯ ,3ನೇ ವಾರ್ಡ್ ಸದಸ್ಯೆ ಉದಯವಾಣಿ ಫಲಶ್ರುತಿ
ಪತ್ತೂಂಜಿಕಟ್ಟೆ ಪ್ರದೇಶಗಳಿಗೆ ಈ ಹಿಂದೆ ಪುರಸಭಾ ವತಿಯಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ ಹಾಗೂ ಈ ಪರಿಸರದಲ್ಲಿ ಅಳವಡಿಸ ಲಾಗಿದ್ದ ದಾರಿದೀಪದ ಸ್ವಿಚ್‌ಗಳು ಅಪಾಯಕಾರಿಯಾಗಿರುವ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟಗೊಂಡಿತ್ತು. ಬಳಿಕ ಪುರಸಭೆ ಈ ಭಾಗಕ್ಕೆ ನೀರು ಸರಬರಾಜುಗೊಳಿಸಿದೆ. ಮೆಸ್ಕಾಂ ಇಲಾಖೆ ಹೊಸ ಸ್ವಿಚ್ ಬೋರ್ಡ್ ಅಳವಡಿಸಿ ಸ್ಪಂದಿಸಿದೆ ಎಂದು ಸ್ಥಳೀಯರು ಸಂತಸ ಹಂಚಿಕೊಂಡರು. ರಾಮಚಂದ್ರ ಬರೆಪ್ಪಾಡಿ