Advertisement

ಮುಖ್ಯ ಅತಿಥಿ

03:45 AM Apr 09, 2017 | Harsha Rao |

ನಾನು 2007ರಲ್ಲಿ ಅಮ್ಮನನ್ನು ನೋಡಿಕೊಳ್ಳಲು, ಸ್ವಯಂನಿವೃತ್ತಿ ತೆಗೆದುಕೊಳ್ಳಬೇಕಾಯ್ತು. ನನಗೆ ಬೇಸರವಿಲ್ಲ. 33 ವರ್ಷಗಳು ಕೆಲಸಮಾಡಿ¨ªೆ : ಓದುವ, ಬರೆಯುವ ಹವ್ಯಾಸವಿತ್ತು. ಮುಖ್ಯವಾಗಿ ಅಮ್ಮನ ಜೊತೆ ಹೆಚ್ಚುಕಾಲ ಕಳೆಯಬಹುದಲ್ಲ ಎನ್ನುವ ಖುಷಿಯಿತ್ತು. ಆದರೆ, ಅಮ್ಮನನ್ನು ಒಂದು ರೀತಿಯ ಅಪರಾಧಿ ಮನೋಭಾವ ಕಾಡುತ್ತಿತ್ತೇನೋ? ಸಮಯ ಸಿಕ್ಕಾಗಲೆಲ್ಲ , “ನೀನು ಅವಕಾಶ ಸಿಕ್ಕಾಗ ಸಮಾರಂಭಗಳಿಗೆ ಹೋಗಿ ಬಾ. ನಿನಗೂ ಒಂದು ರೀತಿಯ ಬದಲಾವಣೆ ಇರುತ್ತದೆ’ ಎನ್ನುತ್ತಿದ್ದರು. ನಾನೂ ಒಪ್ಪಿ¨ªೆ. ನನ್ನ ಪರಿಚಿತರೊಬ್ಬರು “ಕನ್ನಡ ರಾಜ್ಯೋತ್ಸವ’ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರಲು ಆಹ್ವಾನಿಸಿದರು. ಅದೊಂದು ಸರಳ ಸಮಾರಂಭ.

Advertisement

ಹೆಚ್ಚೆಂದರೆ 25-30 ಮಂದಿ ಇದ್ದರು. ಭಾಷಣಕ್ಕೆ ಅವಕಾಶವಿರಲಿಲ್ಲ. ನಾವೆಲ್ಲರೂ ಸೇರಿ ಸಂವಾದ ಕಾರ್ಯಕ್ರಮ ನಡೆಸಿದೆವು. ಗಾಯಕಿಯೊಬ್ಬರು ಸುಶ್ರಾವ್ಯವಾಗಿ ಕನ್ನಡಗೀತೆಗಳನ್ನು ಹಾಡಿದರು. ಕಾರ್ಯಕ್ರಮ ಮನಸ್ಸಿಗೆ ಖುಷಿ ನೀಡಿತು. ನಂತರ  ಮಹಿಳಾಸಮಾಜಗಳು ಆಯೋಜಿಸಿದ್ದ ಒಂದೆರಡು ಕಾರ್ಯಕ್ರಮಗಳಿಗೆ ಹೋಗಿಬಂದೆ. ಆ ಕಾರ್ಯಕ್ರಮಗಳೂ ಮನಸ್ಸಿಗೆ ಮುದನೀಡಿದವು.

ನನ್ನ ಆತ್ಮೀಯ ಗೆಳತಿಯೊಬ್ಬರು ತಮ್ಮ ಕಾಲೇಜಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬರಬೇಕೆಂದು ಆಹ್ವಾನಿಸಿದರು. “ಕಾರ್ಯಕ್ರಮ ಸರಿಯಾಗಿ ನಾಲ್ಕುಗಂಟೆಗೆ ಪ್ರಾರಂಭವಾಗುತ್ತದೆ. ನೀವು ಆ ವೇಳೆಗೆ ಅಲ್ಲಿರಬೇಕು’ ಎಂದರು. ನಾನು ಒಪ್ಪಿಕೊಂಡೆ. ಅದೇ ರೀತಿ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಅಲ್ಲಿ¨ªೆ. ಅವರು ಕಾರ್ಯಕ್ರಮ ನಡೆಸಲು ಮೈಸೂರಿನ ಪ್ರಖ್ಯಾತ ಸಭಾಂಗಣವೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ನನಗೆ ಆ ಕಾಲೇಜಿನ ಪ್ರಾಚಾರ್ಯರನ್ನೂ , ಉಪನ್ಯಾಸಕರನ್ನೂ ನನ್ನ ಗೆಳತಿ ಪರಿಚಯಿಸಿದರು.

“”ಮ್ಯಾಡಂ, ನಮ್ಮ ಶಾಲೆಯ ಬೆಟರ್‌ವೆುಂಟ್‌ ಕಮಿಟಿ ಮೆಂಬರ್‌ಗಳು ಬರಬೇಕು. ನಂತರ ಕಾರ್ಯಕ್ರಮ ಆರಂಭಿಸುತ್ತೇವೆ” ಎಂದು ಹೇಳಿ ಸಭಾಂಗಣದ ಮುಂದಿನ ಸಾಲಿನಲ್ಲಿ ಕೂಡಿಸಿದರು. ಒಂದಿಬ್ಬರು ಉಪನ್ಯಾಸಕರು ಬಂದು ನನ್ನ ಪಕ್ಕ ಕುಳಿತು ಮಾತನಾಡಿಸಿದರು. “”ನಮ್ಮ ಕಾಲೇಜಿನಿಂದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತಿದೆ. ಬಸ್‌ ನಿಲ್ದಾಣ ಹತ್ತಿರವಿರುವುದರಿಂದ ಬಹಳಮಂದಿ ವಿದ್ಯಾರ್ಥಿನಿಯರು ಹಳ್ಳಿಗಳಿಂದ ಬರುತ್ತಾರೆ” ಎಂದು ಹೇಳಿದರು. ನಾನು ಸುತ್ತಲೂ ನೋಡಿದೆ. ಹುಡುಗಿಯರು ಸಂಭ್ರಮದಿಂದ ಓಡಾಡುತ್ತಿದ್ದರು. ಅವರ ಹಾವ-ಭಾವ, ಉಡುಪು, ಮಾತು-ಕಥೆ ಗಮನಿಸಿದಾಗ ಗ್ರಾಮೀಣಪ್ರದೇಶದ ಹೆಣ್ಣುಮಕ್ಕಳ ಮುಗ್ಧತೆ ಅವರಲ್ಲಿ ಉಳಿದಿದೆ ಅನ್ನಿಸಲಿಲ್ಲ. ಅವರ ಉಪನ್ಯಾಸಕರು ಎದುರಿಗೇ ಇದ್ದರೂ ಗಮನವೇ ಇಲ್ಲದವರಂತೆ ಫೋಟೋಗ್ರಾಫ‌ರ್‌ ಎದುರು ನಿಂತು ನಾನಾ ಭಂಗಿಯಲ್ಲಿ ಫೋಟೋ ತೆಗೆಸಿಕೊಳ್ಳುತ್ತಿದ್ದರು.

ಬೆಟರ್‌ವೆುಂಟ್‌ ಕಮಿಟಿಯವರು ಒಬ್ಬೊಬ್ಬರಾಗಿ ಬರಲಾರಂಭಿಸಿದರು. ನಮ್ಮನ್ನು ವೇದಿಕೆಗೆ ಆಹ್ವಾನಿಸಿದರು. ನಾನೇ ಮುಖ್ಯ ಅತಿಥಿಯಾಗಿದ್ದರಿಂದ ನನಗೆ ಅಧ್ಯಕ್ಷರ ಪಕ್ಕದ ಕುರ್ಚಿಯಲ್ಲಿ ಕೂರಲು ಹೇಳಿದರು. ಎರಡು ನಿಮಿಷ ಕಳೆದಿರಬಹುದು ಇಬ್ಬರು ಮಹಿಳಾ ಸದಸ್ಯರು ಆಗಮಿಸಿದರು. ಒಬ್ಬರು ನನ್ನ ಬಳಿ ಬಂದು,””ನಾನು ಈ ಕಾಲೇಜ್‌ ಮೆಂಬರು. ನೀವು ಇಂದುಗಡೆ ಸಾಲಾಗೆ ಕುಂತ್ಕಳ್ಳಿ” ಎಂದರು. ಆಗ ಉಪನ್ಯಾಸಕರೊಬ್ಬರು, “”ನೀವು ಇಲ್ಲಿ ಕುಳಿತರೆ ಭಾಷಣಮಾಡಬೇಕಾಗುತ್ತದೆ. ಮಾಡ್ತೀರಾ?” ಎಂದು ಕೇಳಿದರು. “”ನಾಒÇÉೇಪ್ಪ” ಎಂದು ಆಕೆ ಹಿಂದುಗಡೆ ಸಾಲಿನಲ್ಲಿ ಆಸೀನರಾದರು. “”ನಮ್ಮ ಬೆಟರ್‌ವೆುಂಟ್‌ ಕಮಿಟಿಯವರು ಕಾಲೇಜಿಗೆ ತುಂಬಾ ಸಹಾಯ ಮಾಡ್ತಾರೆ ಮ್ಯಾಡಂ. ಎಲ್ಲರೂ ಸೇರಿ ಈ ಸಮಾರಂಭದ ಖರ್ಚು ಕೊಟ್ಟಿ¨ªಾರೆ. ಅವರು ಹೇಳಿದಂತೆ ನಾವು ಕೇಳಲೇಬೇಕಾಗುತ್ತದೆ” ಎಂದು ಪಕ್ಕದಲ್ಲಿದ್ದ ಪ್ರಾಚಾರ್ಯರು ಹೇಳಿದರು. ಬೆಟರ್‌ವೆುಂಟ್‌ ಕಮಿಟಿಯ ಸದಸ್ಯರನ್ನು  ಸ್ವಾಗತಿಸಿ, ಗೌರವಿಸಲು ಒಂದೂವರೆ ಗಂಟೆ ಮೀಸಲಾಗಿಟ್ಟರು. ನಂತರ ಅತಿಥಿಗಳ ಪರಿಚಯ, ಕಾಲೇಜಿನ ವರದಿ, ಬಹುಮಾನ ವಿತರಣೆ ಇತ್ಯಾದಿ. ಭಾಷಣ ಕೇಳುವವರ್ಯಾರು? ನಾಲ್ಕು ಮಾತುಗಳನ್ನಾಡಿ ಭಾಷಣ ಮುಗಿಸಿದೆ. 

Advertisement

ರಾತ್ರಿ ಮಲಗಿದಾಗ ನನಗೆ ನನ್ನ ಶಾಲಾದಿನಗಳು, ನಮ್ಮ ತಂದೆ ನೆನಪಾದರು. ನಮ್ಮ ತಂದೆ ತಾಲೂಕು ಬೋರ್ಡ್‌ ಪ್ರೌಢಶಾಲೆಗಳಲ್ಲಿ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದರು. ಹಳ್ಳಿಗಳÇÉೇ ನಮ್ಮ ವಾಸ, ಹಳ್ಳಿಯ ಶಾಲೆಗಳÇÉೇ ಓದು. ನಮ್ಮ ತಂದೆ ಶಾಲೆಯ ಯಾವುದೇ ಕಾರ್ಯಕ್ರಮಗಳನ್ನಾಗಲೀ ಸಹೋದ್ಯೋಗಿಗಳ ಜೊತೆ ಸೇರಿ ಬಹಳ ವ್ಯವಸ್ಥಿತವಾಗಿ ಆಯೋಜಿಸುತ್ತಿದ್ದರು. ಮುಖ್ಯವಾಗಿ ಶಾಲಾ  “ಯೂನಿಯನ್‌ ಡೇ’  ತುಂಬಾ ಚೆನ್ನಾಗಿ, ಎರಡು ದಿನ ನಡೆಯುತ್ತಿತ್ತು. ಮೊದಲನೆಯ ದಿನ ಶಾಲಾ ಮಕ್ಕಳಿಗೆ ಭರ್ಜರಿ ಊಟವಿರುತ್ತಿತ್ತು. ನಮ್ಮ ತಂದೆ ಮುಖ್ಯ ಅತಿಥಿಗಳನ್ನಾಗಿ ತ.ರಾ.ಸು, ಅ.ನ.ಕೃ, ಬೀಚಿ, ಚದುರಂಗ, ಕಾಳಿಂಗರಾಯರು ಮುಂತಾದವರನ್ನು ಕರೆಸುತ್ತಿದ್ದರು. ಆ ದಿನ ಆಟ-ಪಾಠಗಳಲ್ಲಿ, ಸಾಂಸ್ಕƒತಿಕ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ, ಮುಖ್ಯ ಅತಿಥಿಗಳ ಭಾಷಣವಿರುತ್ತಿದ್ದವು. ಶಿಕ್ಷಣ ಇಲಾಖೆಯವರೊಬ್ಬರಿಗೆ ಆಹ್ವಾನವಿರುತ್ತಿತ್ತು. ಸಭಿಕರ ಸಂಖ್ಯೆಯೂ ಕಡಿಮೆಯಿರುತ್ತಿತ್ತು.

ಸಾಹಿತ್ಯಾಸಕ್ತರು, ಪೋಷಕರು ಬರುತ್ತಿದ್ದರು. ಸಾಹಿತಿಗಳ ಭಾಷಣಗಳ ರಸದೌತಣ ಸವಿಯುವ ಭಾಗ್ಯ ನಮ್ಮದಾಗಿರುತ್ತಿತ್ತು. ಸಭಾಂಗಣದಲ್ಲೂ ಶಿಸ್ತಿರುತ್ತಿತ್ತು. ನಾನು ಹತ್ತನೇ ತರಗತಿಯಲ್ಲಿ¨ªಾಗ, ತ.ರಾ.ಸು ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯರೊಬ್ಬರು ಬಂದಿದ್ದರು. ಮುಖ್ಯೋಪಾಧ್ಯಾಯರು ಮಾತಾಡುವಾಗ, “ನಿಮ್ಮಲ್ಲಿ ಎಷ್ಟು ಮಂದಿ ಡಾಕ್ಟರ್‌ ಆಗಲು ಬಯಸುತ್ತೀರಾ? ಎಷ್ಟು ಮಂದಿ ಇಂಜಿನಿಯರ್‌ ಆಗಲು ಬಯಸುತ್ತೀರಾ? ಯಾರ್ಯಾರಿಗೆ ಲಾಯರ್‌, ಟೀಚರ್‌ ಆಗ‌ಲು ಇಷ್ಟ?’ ಎಂದೆÇÉಾ ಕೇಳಿದರು. ನಾವು ಅವರ ಪ್ರಶ್ನೆಗಳಿಗೆಲ್ಲ ಕೈ ಎತ್ತಿದ್ದು ಬೇರೆ ವಿಚಾರ ಬಿಡಿ. ಅವರು ಒಂದು ಮಾತು ಹೇಳಿದರು, “”ನೀವು ಡಾಕ್ಟರ್‌, ಇಂಜಿನಿಯರ್‌, ಟೀಚರ್‌, ಲಾಯರ್‌ ಆಗದಿದ್ದರೂ ನಷ್ಟವಿಲ್ಲ. ಮೊದಲು ಮನುಷ್ಯರಾಗಿ, ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ” 

ಈ ಭಾಷಣ ನಾನು ಕೇಳಿದ್ದು 1965ನೇ ಇಸವಿಯಲ್ಲಿ. ಈಗಲೂ ಆ ಮಾತುಗಳು ನನ್ನ ಕಿವಿಯಲ್ಲಿ ಗುಂಯ್‌ಗಾಡುತ್ತಿವೆ. ನಾವು ಆಗ ಗ್ರಾಮೀಣ ಪ್ರದೇಶದ ಮಕ್ಕಳಾಗಿದ್ದರೂ ನಮ್ಮಲ್ಲಿ ಶಿಸ್ತಿತ್ತು. ಸಮಾರಂಭಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಗೊತ್ತಿತ್ತು. ನಮ್ಮ ನಡವಳಿಕೆಗೆ ನಮ್ಮ ಗುರುವೃಂದವೇ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ಯೂನಿಯನ್‌ ಡೇ- ಎರಡನೇ ದಿನ ಶಾಲಾ ಶಿಕ್ಷಕರಿಂದ, ಹುಡುಗರಿಂದ, ಹುಡುಗಿಯರಿಂದ ನಾಟಕಗಳು, ಹಾಡು, ನೃತ್ಯ ಇತ್ಯಾದಿ ಕಾರ್ಯಕ್ರಮಗಳಿರುತ್ತಿದ್ದವು. ಸಭಾಂಗಣ ಸಭಿಕರಿಂದ ತುಂಬಿತುಳುಕುತ್ತಿತ್ತು. ಈಗೆÇÉಾ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯುತ್ತವೆ.

ಮತ್ತೂಮ್ಮೆ ನನ್ನ ಗೆಳತಿಯ ಒತ್ತಾಯಕ್ಕೆ ಮಣಿದು ಮುಖ್ಯಅತಿಥಿಯಾಗಲು ಒಪ್ಪಿಕೊಂಡೆ. ಬೆಳಗ್ಗೆ ಹತ್ತೂವರೆಗೆ ಸಮಾರಂಭವಿತ್ತು. ಶಾಲೆ ಇರುವ ಸ್ಥಳ ನನಗೆ ಗೊತ್ತಿರಲಿಲ್ಲ. ಶಾಲೆಯವರೇ ಒಬ್ಬರು ಬಂದು ನನ್ನನ್ನು ಕರೆದೊಯ್ದರು. ಆ ಶಾಲೆಯವರು, ತಮ್ಮ ಶಾಲೆಯ ಪಿ.ಯು.ಸಿ. ವಿಭಾಗದ ಜೊತೆ ಸೇರಿ ಯೂನಿಯನ್‌ ಡೇ ಆಯೋಜಿಸಿದ್ದರು. ಬಿ.ಇ.ಓ ಕಚೇರಿಯಿಂದ ಇಬ್ಬರು, ಪಿ.ಯು. ಕಾಲೇಜಿಗೆ ಬೇಕಾದವರಿಬ್ಬರು, ಮೇಯರ್‌, ಎಸ್‌.ಡಿ.ಎಂ.ಸಿ. ಕಮಿಟಿಯ ಅಧ್ಯಕ್ಷರು, ಸದಸ್ಯರೂ ಇದ್ದರು. ಜೊತೆಗೆ ಮುಖ್ಯ ಅತಿಥಿಯಾಗಿ ನಾನು-ನಮ್ಮೆಲ್ಲರಿಂದ ಕೊರೆಸಿಕೊಳ್ಳುವ ಭಾಗ್ಯ ಆ ವಿದ್ಯಾರ್ಥಿಗಳದ್ದು!  ಕಾರ್ಯಕ್ರಮ 11 ಗಂಟೆಗೆ ಪ್ರಾರಂಭವಾಯಿತು. ಪ್ರೌಢಶಾಲಾ ಶಿಕ್ಷಕರೂ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರೂ ಮುಂದಿನ ಸಾಲಿನಲ್ಲಿ ಆಸೀನರಾದರು. ಹಿಂದುಗಡೆ ಹುಡುಗ-ಹುಡುಗಿಯರು  ಮನಬಂದಂತೆ ಮಾತಾಡುತ್ತಿದ್ದರು. ಸ್ವಾಗತ, ಅತಿಥಿಗಳ ಪರಿಚಯವಾದ ಕೂಡಲೇ ನಾನು ಮಾತನಾಡಬೇಕಾಗಿತ್ತು. ಪಕ್ಕದಲ್ಲಿದ್ದ ಮೇಯರ್‌, “”ಮ್ಯಾಡಂ, ನಾನು ಬೇರೊಂದು ಸಮಾರಂಭಕ್ಕೆ ಹೋಗಬೇಕು. ನಾನು ಮೊದಲು ಮಾತನಾಡುತ್ತೇನೆ” ಎಂದರು. ನಾನು ಒಪ್ಪಿದೆ. ಅರ್ಧಗಂಟೆ ಕೊರೆದರು. ಅವರಿಗೆ ವಂದನೆಗಳನ್ನು ಅರ್ಪಿಸಿ ಬೀಳ್ಕೊಟ್ಟರು. ನಂತರ‌ ಬಿ.ಇ.ಓ. ಕಚೇರಿಯವರೂ, ಪಿ.ಯು. ಕಚೇರಿಗೆ ಸಂಬಂಧಿಸಿದವರೂ, ಬೆಟರ್‌ವೆುಂಟ್‌ ಕಮಿಟಿ ಅಧ್ಯಕ್ಷರೂ, ಸದಸ್ಯರುಗಳೂ ಡಿಟೋ ಕಾರಣ ಹೇಳಿ ಭಾಷಣ ಮಾಡಿದರು. ವಿಶೇಷತೆ ಏನೆಂದರೆ, ಯಾರೂ ಯಾರ ಭಾಷಣವನ್ನೂ ಕೇಳಿಸಿಕೊಳ್ಳಲಿಲ್ಲ. ನಾನು ಬೇರೆ ಯಾವ ಸಮಾರಂಭಕ್ಕೂ ಹೋಗಬೇಕಾಗಿರಲಿಲ್ಲವಾದ್ದರಿಂದ ನಾನೇ ಕೊನೆಯ ಭಾಷಣಕಾರಳಾದೆ.

ಮಾತನಾಡಲು ನನಗೂ ಉತ್ಸಾಹವಿರಲಿಲ್ಲ, ಕೇಳಿಸಿಕೊಳ್ಳಲು ಅವರೂ ಸಿದ್ಧರಿರಲಿಲ್ಲ. ಎರಡು ನಿಮಿಷ ಮಾತನಾಡಿ ಕುಳಿತೆ. “”ಮ್ಯಾಡಂ, ಇನ್ನೂ ಮಾತನಾಡಬೇಕಿತ್ತು” ಎಂದರು ನನ್ನ ಗೆಳತಿ. “”ಯಾರು ಕೇಳಿಸಿಕೊಳ್ಳಲು ಸಿದ್ಧರಿದ್ದರು?” ಎಂದು ಪ್ರಶ್ನಿಸಿದೆ. ಉತ್ತರ ಬರಲಿಲ್ಲ. ಪ್ರಾಚಾರ್ಯರು ಮಾತ್ರ, “”ನನ್ನ ಮಾತನ್ನು ಯಾರೂ ಕೇಳಲ್ಲ ಮ್ಯಾಡಂ. ನಾನು ಚಿಕ್ಕವಳೂಂತ ಉದಾಸೀನ ಮಾಡ್ತಾರೆ” ಎಂದು ಪೇಚಾಡಿದರು.

ಈ ಎರಡು ಪ್ರಸಂಗಗಳಿಂದ ನಾನು ಪಾಠ ಕಲಿತಿದ್ದೇನೆ. ಸಮಾರಂಭಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇನೆ. ಈಗಿನವರಿಗೆ ಬರಹಗಾರರು ಬೇಕಾಗಿಲ್ಲ. ರಾಜಕಾರಣಿಗಳು, ಸಿನಿಮಾ ನಟ-ನಟಿಯರು, ಕಿರುತೆರೆಯ ನಟರು, ರಿಯಾಲಟಿ ಶೋ ಪ್ರತಿಭೆಗಳಿಗೇ ಆದ್ಯತೆ. ರಾಜಕಾರಣಿಗಳು ಯಾವ ವೇದಿಕೆ ಸಿಗಲಿ ಆ ವೇದಿಕೆಯನ್ನು ತಮ್ಮ ಸಾಧನೆ ಕೊಚ್ಚಿಕೊಳ್ಳಲು, ವಿರೋಧ ಪಕ್ಷದವರನ್ನು ಜರಿಯಲು ಬಳಸಿಕೊಳ್ಳುತ್ತಾರೆ. ಸಭೆಯಲ್ಲಿ ಅವರ ಹಿಂಬಾಲಕರೇ ಇರುತ್ತಾರೆ. ಇನ್ನು ನಟ-ನಟಿಯರು ಬಂದರೆ ಹಾಡು ಕುಣಿತಕ್ಕೇ ಪ್ರಾಶಸ್ತÂ. ನಿಮ್ಮ ಬುದ್ಧಿಮಾತು, ಕನ್ನಡ ಉಳಿಸಿ ಎಂಬ ಕರೆ ಅವರಿಗೆ ಯಾಕೆ ಬೇಕು? ನಮಗೂ ಕಿರಿಕಿರಿ, ಅವರಿಗೂ ಕಿರಿಕಿರಿ. ಯಾವುದೇ ಸಮಾರಂಭ ಆಯೋಜಿಸಲಿ, ಪ್ರೇಕ್ಷಕರಿಗೆ ಏನು ಬೇಕು ಎಂಬುದರ ಅರಿವಿರಬೇಕು. ಶಾಲೆಗಳಲ್ಲಿ ಮುಖ್ಯ ಅತಿಥಿಗಳನ್ನು ಕರೆಯುವಾಗ ಅವರ ಮಾತುಗಳಿಂದ ಮಕ್ಕಳಿಗೆ ಉಪಯೋಗವಾಗುತ್ತದೆಯೆ? ಎಂದು ಯೋಚಿಸಬೇಕು. ಅತಿಥಿಗಳು ಚಿಕ್ಕದಾಗಿ-ಚೊಕ್ಕವಾಗಿ ಸಂದರ್ಭಕ್ಕೆ ತಕ್ಕ ಹಾಗೆ ಮಾತಾಡಬೇಕು. ಅವರ ಭಾಷಣದಲ್ಲಿ ಏನಾದರೊಂದು ಒಳ್ಳೆಯ ಸಂದೇಶವಿರಬೇಕು. ಮುಖ್ಯವಾಗಿ ಸಭಿಕರಲ್ಲಿ ಶಿಸ್ತಿರಬೇಕು. ಆಯೋಜಕರಿಗೆ ಕಾಲದ ಮಹತ್ವ ಗೊತ್ತಿರಬೇಕು.

ಒಮ್ಮೆ ಬೆಂಗಳೂರಿನಲ್ಲಿ ನನ್ನ ತಮ್ಮನ‌ ಮಗಳು ರಂಜಿತ  ಪ್ರೈಮರಿಶಾಲೆಯಲ್ಲಿ¨ªಾಗ ಅವಳ ಶಾಲಾ ಸಮಾರಂಭಕ್ಕೆ ಹೋಗಿ¨ªೆ. ಆ ಶಾಲೆಯಲ್ಲಿ ಒಂದರಿಂದ ಹತ್ತರವರೆಗೂ ತರಗತಿಗಳಿದ್ದವು. ಕವಿ ಬಿ. ಸಿ. ರಾಮಚಂದ್ರಶರ್ಮ ಹಾಗೂ ಶಿಕ್ಷಣ ಇಲಾಖೆಯವರೊಬ್ಬರು ಆಹ್ವಾನಿತ ಅತಿಥಿಗಳಾಗಿದ್ದರು. ಕಾರ್ಯಕ್ರಮದ ಪಟ್ಟಿಯನ್ನು ಕೊಟ್ಟಿದ್ದರು. ಆ ಪಟ್ಟಿಯಲ್ಲಿದ್ದ ವಿಶೇಷ ಸಂಗತಿಯೆಂದರೆ ಪ್ರತಿ ಕಾರ್ಯಕ್ರಮಕ್ಕೂ ಟೈಂ ನಿಗದಿಮಾಡಿದ್ದರು.

ಪ್ರತಿ ತರಗತಿಯಿಂದಲೂ ಒಂದು ಕಾರ್ಯಕ್ರಮವಿತ್ತು. ಮುಖ್ಯ ಅತಿಥಿಗಳು ಹನ್ನೊಂದು ನಿಮಿಷ ಮಾತನಾಡಿದರು. ಅಧ್ಯಕ್ಷರು ಮಾತನಾಡುವಾಗ ನಮಗೆ ಭಾಷಣ ಮಾಡಲು ಹತ್ತುನಿಮಿಷ ಕೊಟ್ಟಿದ್ದರು. ಆದರೆ, “”ಮುಖ್ಯ ಅತಿಥಿಗಳು ನನ್ನದೊಂದು ನಿಮಿಷ ತೆಗೆದುಕೊಂಡಿ¨ªಾರೆ. ಆದ್ದರಿಂದ ನಾನು ಒಂಬತ್ತು ನಿಮಿಷ ಮಾತ್ರ ಮಾತನಾಡುತ್ತೇನೆ” ಎಂದರು. ಇಡೀ ಕಾರ್ಯಕ್ರಮ ಒಂದು ಗಂಟೆಯಲ್ಲಿ ಮುಗಿಯಿತು. ವೇದಿಕೆ ಒಂದು ನಿಮಿಷವೂ ಖಾಲಿಯಿರಲಿಲ್ಲ. ಹ್ಯಾಟ್ಸ್‌ ಆಫ್ ಟು ದೆರ್‌ ಟೈಂಸೆನ್ಸ್‌!

ಸಭೆಯಲ್ಲಿ ಭಾಗವಹಿಸುವವರಿಗೆ ಸಭೆಯ ಮರ್ಯಾದೆ ತಿಳಿದಿರಬೇಕು. ಕೆಲವು ಮುಖ್ಯ ಅತಿಥಿಗಳು ಪತ್ರಿಕೆಯವರು ಬರುವವರೆಗೂ ಇದ್ದು, ಫೋಟೋಗಳಿಗೆ  ಮುಖಕೊಟ್ಟು, ಏನೋ ಕುಂಟುನೆಪ ಹೇಳಿ ಜಾಗ ಖಾಲಿ ಮಾಡುತ್ತಾರೆ. ಕೆಲವರಂತೂ ಸರಿಯಾದ ವೇಳೆಗೆ ಬರುವುದೇ ಇಲ್ಲ. ಕೆಲವರು ಬಂದು ತಮ್ಮ ಕೆಲಸ ಮುಗಿಯುತ್ತಿದ್ದಂತೆ ಹೊರಟುಹೋಗುತ್ತಾರೆ. ಇವರಿಗೆÇÉಾ  ಸಭಾಮರ್ಯಾದೆ ಕಲಿಸುವವರ್ಯಾರು? ಇಂತಹವರ ನಡುವೆ ಮುಖ್ಯ ಅತಿಥಿಗಳಪಟ್ಟವೂ ಬೇಡ, ಅದರಿಂದಾಗುವ ಫ‌ಜೀತಿಯೂ ಬೇಡ ಎನ್ನಿಸಿದರೆ ಆಶ್ಚರ್ಯವಿಲ್ಲ !

– ಸಿ. ಎನ್‌. ಮುಕ್ತಾ

Advertisement

Udayavani is now on Telegram. Click here to join our channel and stay updated with the latest news.

Next