Advertisement

ಕೇಂದ್ರ ಮಾದರಿ ವೇತನ ಪಡೆಯುವುದೇ ಮುಖ್ಯ ಗುರಿ; ಸಿ.ಎಸ್‌. ಷಡಕ್ಷರಿ

06:45 PM Jan 19, 2021 | Team Udayavani |

ಯಾದಗಿರಿ: ದೇಶದ 22 ರಾಜ್ಯ ಸೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಿ ನೌಕರರು ಕೇಂದ್ರ ಮಾದರಿ ವೇತನ ಪಡೆಯುತ್ತಿದ್ದು, ರಾಜ್ಯದಲ್ಲಿ ಮಾತ್ರ ಬೇರೆ
ನೀತಿ ಇರುವುದರಿಂದ ವೇತನ ತಾರತಮ್ಯವಾಗಿದೆ. 2022ಕ್ಕೆ ರಾಜ್ಯದ ಸರ್ಕಾರಿ ನೌಕರರು ಕೇಂದ್ರ ಮಾದರಿ ವೇತನ ಪಡೆಯುವುದು ಪ್ರಮುಖ
ಗುರಿಯಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಧ್ಯಕ್ಷ ಸಿ.ಎಸ್‌. ಷಡಕ್ಷರಿ ಹೇಳಿದರು.

Advertisement

ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ
ಜಿಲ್ಲಾ ಶೈಕ್ಷಣಿಕ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 2022ರ ವೇಳೆ ರಾಜ್ಯ ಸರ್ಕಾರ ವೇತನ
ತಾರತಮ್ಯವನ್ನು ಸರಿಪಡಿಸದಿದ್ದರೇ ಕುಟುಂಬ ಸಮೇತ ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟ ಮಾಡಿಯಾದರೂ ಪಡೆಯಬೇಕಿದೆ.

ಸರ್ಕಾರಿ ನೌಕರರಿಗೆ ಎನ್‌ಎಸ್‌ಪಿ ಮಾರಕವಾಗಿದ್ದು, ಇದಕ್ಕೆ ಶಿಕ್ಷಕರು ಮಾತ್ರ ಸಕ್ರಿಯ ಹೋರಾಟ ನಡೆಸುತ್ತಿದ್ದು, ನೌಕರರೆಲ್ಲ ಹಳೆಯ ಪಿಂಚಣಿಗಾಗಿ
ಒಟ್ಟಾಗಿ ಹೋರಾಟಕ್ಕೆ ಕರೆ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳು ಜಟಿಲವಾಗಿದ್ದು, ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಬಗ್ಗೆ ಕಾಳಜಿ ಹೊಂದಿದ್ದಾರೆ. ಸರ್ಕಾರದಿಂದ ಶಿಕ್ಷಕರಿಗೆ ನ್ಯಾಯಯುತವಾಗಿ ದೊರೆಯುವ ಸೌಕರ್ಯಗಳನ್ನು ಕೊಡಿಸುವ ಜವಾಬ್ದಾರಿ ತಮ್ಮ ಮೇಲಿದೆ. ಗ್ರಾಮೀಣ ಕೃಪಾಂಕ, ವೇತನ ತಾರತಮ್ಯ, ಸಮಗ್ರ ಶಿಕ್ಷಣ ನೇಮಕ ತಿದ್ದುಪಡಿ, ಗುರುಭವನ, ವರ್ಗಾವಣೆ ಸೇರಿದಂತೆ ಹಲವು ಸಮಸ್ಯೆಗಳಿದ್ದು, ಎಲ್ಲದಕ್ಕೂ ಒಂದೆರಡು ವರ್ಷದಲ್ಲಿ ಪರಿಹಾರ ಸಿಗಲಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್‌ ಮಾತನಾಡಿ, ಶಿಕ್ಷಕರ ವರ್ಗಾವಣೆ ಸಮಸ್ಯೆಯಾಗಿದೆ. ವರ್ಗಾವಣೆ
ಪ್ರಕ್ರಿಯೆಯನ್ನು ನಡೆಸುವ ಕುರಿತು ಸರ್ಕಾರದ ಮಟ್ಟದಲ್ಲಿ ಅಧಿ ಕಾರಿಗಳನ್ನು ಭೇಟಿಯಾಗಿ ಮನವರಿಕೆ ಮಾಡಲಾಗಿದೆ. ಶಿಕ್ಷಕರ ಸಮಸ್ಯೆಗಳನ್ನು ನೀಗಿಸುವುದು
ಸರ್ಕಾರದ ಜವಾಬ್ದಾರಿ. ಆದರೂ ಮಕ್ಕಳ ಭವಿಷ್ಯದ ಹಿತದೃಷ್ಟಿ ಹಿನ್ನೆಲೆ ತಾಳ್ಮೆಯಿಂದಿದ್ದೇವೆ ಎಂದರು. ರಾಜ್ಯ ಪ್ರಾ.ಶಿ. ಸಂಘದ ಮಹಿಳಾ ಸಂಘಟನಾ
ಕಾರ್ಯದರ್ಶಿ ಪಿ,ಟಿ.ಕಾಮನಹಳ್ಳಿ, ರಾಜ್ಯ ಸರ್ಕಾರಿ ನೌಕರರ ಸಂಘದ ಮಹಾಪ್ರಧಾನ ಕಾರ್ಯದರ್ಶಿ ಜಗದೀಶಗೌಡಪ್ಪ ಪಾಟೀಲ್‌, ರಾಜ್ಯ ಪ್ರಾಥಮಿಕ
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಚೇತನ್‌ ಎಚ್‌.
ಎಸ್‌. ಮಾತನಾಡಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮಾಲಿ ಪಾಟೀಲ್‌ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಗುರಿಕಾರ, ಶಿವರುದ್ಯಯ್ಯ, ಮಲ್ಲಿಕಾರ್ಜುನ ಬಳ್ಳಾರಿ, ಸುರೇಶ ಶಡಶ್ಯಾಳ, ಆರ್‌.ಮೋಹನಕುಮಾರ, ಪದ್ಮಲತಾ ಜಿ, ಸುಮತಿ ಬಿ, ನಾಗನಗೌಡ ಎಂ.ಎ ಮತ್ತು ರಾಜು ಲೆಂಗಟಿ, ರಾಜೇಂದ್ರ ಕುಮಾರ ಗಂದಗೆ, ಮಲ್ಲಯ್ಯ ಗುತ್ತೇದಾರ, ರಾಘವೇಂದ್ರ ಅಳ್ಳಳ್ಳಿ, ಸಂತೋಷ ನೀರೆಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next