Advertisement
ಈಗ ಸ್ವಾತಂತ್ರ್ಯಚಳವಳಿಯ ಸ್ಫೂರ್ತಿಯ ಚಿಲುಮೆ ರಾಣಿ ಚೆನ್ನಮ್ಮಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮತ್ತು ಕಿತ್ತೂರನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸುವ ಸಲುವಾಗಿ ಅಲ್ಲಿ ಭವ್ಯವಾದ ಮರದ ಮಾದರಿ ಅರಮನೆ ತಲೆ ಎತ್ತಲಿದೆ.
ಕಿತ್ತೂರು ಅರಮನೆ ದ. ಭಾರತದಲ್ಲಿಯೇ ಅತೀ ದೊಡ್ಡ, ಸಾಗುವಾನಿ ಮರದ ಭವ್ಯ ಕೆತ್ತನೆಗಳುಳ್ಳ ಅರಮನೆಯಾಗಿತ್ತು. ಹುಬ್ಬಳ್ಳಿಯ ಮೂರುಸಾವಿರ ಮಠ ಇದೇ ಮಾದರಿಯಲ್ಲಿದೆ. ಈ ಸಂಬಂಧ ಇತಿಹಾಸ ತಜ್ಞರು ಅಧ್ಯಯನ ನಡೆಸಿ ಅರಮನೆ ನಿರ್ಮಾಣಕ್ಕೆ ನೀಲನಕ್ಷೆ ರೂಪಿಸಿದ್ದಾರೆ. ಎಲ್ಲಿ ನಿರ್ಮಾಣ?
ಕಿತ್ತೂರು ಕೋಟೆಗೆ ಹೊಂದಿಕೊಂಡಂತೆ ಪೂರ್ವ ಭಾಗದಲ್ಲಿ ಮಾದರಿ ಅರಮನೆ ನಿರ್ಮಾಣವಾಗಲಿದೆ. ಇಲ್ಲಿ 15 ಎಕರೆ ಜಾಗ ಪಡೆದು ನೂತನ ಕೋಟೆ, ನಡುವೆ ಅರಮನೆ ತಲೆ ಎತ್ತಲಿದೆ. ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿಯಿಂದ ಕಿತ್ತೂರು ಕೋಟೆ ಮತ್ತು ಅರಮನೆಗೆ ತೆರಳಲು ಪ್ರತ್ಯೇಕ ಸುಂದರ ರಸ್ತೆ ನಿರ್ಮಾಣಗೊಳ್ಳಲಿದೆ.
Related Articles
ಇತಿಹಾಸ, ವಾಸ್ತುಶಿಲ್ಪ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಪ್ರವಾಸೋದ್ಯಮಕ್ಕೆ ಪೂರಕ ವ್ಯವಸ್ಥೆ- ಈ 3 ಅಂಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಇತಿಹಾಸ ತಜ್ಞರು, ಸಲಹೆ ಮಂಡಳಿ ಸರಕಾರದ ಗಮನ ಸೆಳೆದಿದ್ದಾರೆ.
Advertisement
15ನೇ ಶತಮಾನ ದಿಂದ 18ನೇ ಶತಮಾನದ ವರೆಗೆ ವಿಭಿನ್ನ ಹಂತಗಳಲ್ಲಿ ಕಿತ್ತೂರು ಅರಮನೆ ನಿರ್ಮಾಣಗೊಂಡಿದೆ. ಆ ಕಾಲದ ವಾಸ್ತುಶಿಲ್ಪ ವಿಸ್ಮಯಕಾರಿ. ಅಂದಿನ ಅರಮನೆಯಂತೆಯೇ ನಿರ್ಮಾಣಕ್ಕೆ ಸಲಹೆ ನೀಡಿದ್ದೇವೆ.-ಡಾ| ಷಡಕ್ಷರಯ್ಯ,
ಇತಿಹಾಸ ತಜ್ಞರು, ಧಾರವಾಡ -ಬಸವರಾಜ ಹೊಂಗಲ್