Advertisement
ಹೃದಯಬಡಿತ ಜೋರಾಗುತ್ತಲೇ ಇದೆ, ಬೆವೆತು ಆ ತಕ್ಷಣಕ್ಕೆ ಎದ್ದು ಬಿಟ್ಟೆ. ನೋಡಿದರೆ ಬರಿ ಕನಸಷ್ಟೇ. ಈ ಕನಸು ಎಷ್ಟು ಮಾಯೆ, ನಾನಿಲ್ಲೇ ಇದ್ದರೂ ದೂರದ ಮನೆಗೆ ಅರೆಗಳಿಗೆಯಲ್ಲಿ ಹೋಗಿ ಬರುತ್ತೇನೆ.
Related Articles
ನಾವು ಕಾಣುವ ಕನಸ್ಸೆಲ್ಲವು ನೆನಪುಳಿಯಲಾರದು ಬದಲಾಗಿ ಕೆಲವೊಂದು ಘಟನೆ, ಸನ್ನಿವೇಷವಷ್ಟೇ ನೆನಪುಳಿಯುತ್ತದೆ. ಆದರೆ ಬೆಳಗ್ಗೆ ಕನಸು ನೆನಪಾದರೆ ಈಡೀ ರಾತ್ರಿ ಅದೇ ಕನಸು ಬಿದ್ದಿರಬೇಕೆಂದು ಪರಿಭ್ರಮಿಸುತ್ತಾರೆ. ಆದರೆ ನಾವು ಕಾಣುವ ಕನಸಿನಲ್ಲಿ ಶೇ. 10ರಷ್ಟು ಮಾತ್ರ ನಮಗೆ ನೆನಪಿರುತ್ತದೆ ಉಳಿದವುಗಳೆಲ್ಲ ನಾವು ಮರೆತುಬಿಡುತ್ತೇವೆ. ಆದರೆ ತೀರ ಮಾನಸಿಕ ಸಮಸ್ಯೆಗೆ ಒಳಪಟ್ಟಿದ್ದರೆ ನಿಮಗೆ ಕನಸು ಬಿದ್ದರೂ ಅದು ನೆನಪಿರಲಾರದು. ಮರೆಯಬೇಕೆಂದ ವ್ಯಕ್ತಿ ಮತ್ತು ತುಂಬಾ ಇಷ್ಟ ಪಡುವವರು ನಮ್ಮೊಂದಿಗಿಲ್ಲದಾಗ ಅವರ ಕನಸೇ ಬೀಳುತ್ತದೆ. ಕೆಲವರು ಬಲವಂತವಾಗಿ ಕನಸು ಕಾಣಲು ಪ್ರಯತ್ನಿಸುತ್ತಾರೆ.
Advertisement
ಕುರುಡರಿಗೂ ಕನಸುಬೀಳುತ್ತಾಬಹುತೇಕರಿಗೆ ಇಂತಹದೊಂದು ಪ್ರಶ್ನೆ ಕಾಡಿರುತ್ತದೆ. ಕನಸು ಎಲ್ಲರಿಗೂ ಬೀಳುವುದು ಸಹಜ, ಆದರೆ ಬೀಳುವ ರೀತಿಯಲ್ಲಿ ವ್ಯತ್ಯಾಸವಿರುತ್ತದೆ. ಅವರು ಹುಟ್ಟು ಕುರುಡರಾದರೆ ಧ್ವನಿ, ಸ್ಪರ್ಷ, ವಾಸನೆಯ ಗ್ರಹಿಕೆಯೊಂದಿಗೆ ಕನಸು ಬೀಳುತ್ತದೆ. ಅರೆ ಕುರುಡ (ಒಂದೇ ಕಣ್ಣಿರುವ)ರಿಗೆ ಸಾಮಾನ್ಯರಂತೆ ಕನಸು ಬೀಳುತ್ತದೆ. ಕನಸಿಗೆ ಕಾರಣವೇನು?
ಕನಸು ಬೀಳಲು ಇದೇ ಕಾರಣ ಎಂದು ಬಹುತೇಕರಿಗೆ ತಿಳಿದಿರಲಾರದು. ಕೆಲಸದೊತ್ತಡ, ಕೌಟಂಬಿಕ ಸಮಸ್ಯೆ ಇತರ ಮಾನಸಿಕ ಒತ್ತಡದಿಂದ ಭಯ ಮಿಶ್ರಿತ ಕನಸು ಬೀಳುತ್ತದೆ. ಯಾರೊ ನಮ್ಮನ್ನು ದೂಡಿದಂತಾಗುವುದು, ಮೇಲಿಂದ ಕೆಳಬಿದ್ದಂತೆ ಕನಸು ಬೀಳಲು ಇದೇ ಒತ್ತಡಗಳೇ ಕಾರಣವಾಗಿದೆ. ಹಗಲಿನಲ್ಲಿ ನಾವು ಆಡಬೇಕೆಂದ ಮಾತುಗಳು ಹಾಗೇ ಉಳಿದಾಗಲೂ ಅದೇ ಸನ್ನಿವೇಶ ಮರುಕಳಿಸಿದಂತಾಗಿ ಬಾಯಿಬಿಟ್ಟು ಕನಸಿನಲ್ಲಿಯೇ ಗೊಣಗಾಡುತ್ತೇವೆ. ನಿದ್ದೆಯಲ್ಲಿ ಮಾತನಾಡಲು ಸಹ ಇದೇ ಕಾರಣ ಎನ್ನಬಹುದು. ಭಯ, ನಿರುತ್ಸಾಹ, ಒಂಟಿತನ ಕಾಡುತ್ತಿದ್ದರೆ ನಾವು ಕಾಡಿನ ನಡುವೇ ಒಬ್ಬಂಟಿಯಾದಂತೆ ಅಥವಾ ಯಾರೋ ನನ್ನನ್ನು ಅಟ್ಟಿಸಿಕೊಂಡು ಬಂದಂತೆ ಕನಸು ಬೀಳುತ್ತದೆ. ಕೆಲವೊಂದು ಮರೆಯಲಾರದ ಘಟನೆ, ಹೇಳಿಕೊಳ್ಳಲಾಗದ ವಿಷಯಗಳು ವಿಚಿತ್ರ ಕನಸಿಗೆ ಕಾರಣವಾಗುತ್ತದೆ. ಪರಿಹಾರ: ಕನಸಿಗೂ ಮಾನಸಿಕ ಒತ್ತಡಕ್ಕೂ ಸಂಬಂಧವಿದ್ದು ಅದನ್ನು ಸರಿಪಡಿಸಲು ನೀವು ನಿತ್ಯ ಯೋಗ, ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ಮಲಗುವ ಮುನ್ನ ಕಂಪ್ಯೂಟರ್, ಮೊಬೈಲ್‌ಬಳಕೆಯನ್ನು ಕನಿಷ್ಠ ಅರ್ಧ ಗಂಟೆಗೆ ಮೊದಲು ನಿಲ್ಲಿಸುವುದು ಉತ್ತಮ. -ರಾಧಿಕಾ, ಕುಂದಾಪುರ