Advertisement

ಯಶಸ್ಸಿನ ಹಿಂದೆ ಪತ್ರಿಕೆ

09:30 AM Feb 28, 2020 | mahesh |

ಉದಯವಾಣಿ ನನ್ನ ಹೃದಯವಾಣಿ ಆಗಿದೆ. 50 ವರ್ಷಗಳಿಂದ ಓದುವ ಉದಯವಾಣಿ ನಾನು ಮೆಚ್ಚಿದ ಪತ್ರಿಕೆ. ನನ್ನನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದು, ಬರಹಗಾ ರರನ್ನಾಗಿ ಮಾಡಿದ್ದೇ ಉದಯವಾಣಿ. ಅಳಿಸಲಾಗದ ಬಾಂಧವ್ಯ ಇದು. ನನ್ನ ಹಲವು ಲೇಖನ, ಕಥೆ, ಕವನಗಳನ್ನು ಪತ್ರಿಕೆ ಪ್ರಕಟಿಸಿದೆ.

Advertisement

ನನ್ನ ಬಾಂಧವ್ಯ ಸುಮಾರು 50 ವರ್ಷಗಳದ್ದು. ನಾನು ನೋಡಿದ ಓದಿದ ಪ್ರಕಾರ ಉತ್ತಮ ಮುದ್ರಣ, ಸು#ಟವಾದ ಅಕ್ಷರ, ಸೊಗಸಾದ ವಿನ್ಯಾಸ, ಸಾಮಾಜಿಕ ಕಳಕಳಿ, ಸಮಸ್ಯೆಗಳಿಗೆ ಸ್ಪಂದಿಸುವ ವರದಿಗಳು, ಎಲ್ಲ ಕ್ಷೇತ್ರಗಳಿಗೂ ನೀಡಲಾದ ಅವಕಾಶ, ಪತ್ರಿಕಾ ಶಿಸ್ತು, ಚೌಕಟ್ಟು, ಮುಖ್ಯವಾಗಿ ಪ್ರಬುದ್ಧ ಬರಹಗಾರರ ಲೇಖನಗಳು ಇವೆಲ್ಲವೂ ನಾನು ಮೆಚ್ಚಿಕೊಂಡ ಹಲವು ಅಂಶಗಳಲ್ಲಿ ಪ್ರಮುಖವಾದವುಗಳು. ಹೌದು, ಬಾಲ್ಯದ ಮಧುರ ನೆನಪುಗಳಲ್ಲಿ ಉದಯವಾಣಿಯ ಪಾತ್ರವೂ ಬಹಳಷ್ಟಿದೆ. ನಮ್ಮ ಮನೆಯಲ್ಲಿ ರೇಡಿಯೋ, ಟಿ.ವಿ., ಮೊಬೈಲ್‌ ಇಲ್ಲದ ಕಾಲದಲ್ಲಿ ಜಗತ್ತಿನ ಎಲ್ಲ ಸುದ್ದಿ – ವಿಚಾರಗಳು ನಮ್ಮನ್ನು ತಲುಪುತ್ತಿದ್ದವು.
ಅಂದಿನಿಂದ ನಾನು ಗಮನಿಸಿದಂತೆ ಅನುಭವಿ ಸಂಪಾದಕ ಮಂಡಳಿ, ಬರಹಗಳ ಮೇಲೆ ಸ್ಪಷ್ಟ ನಿಲುವು, ಒಳ್ಳೆಯ ಭಾಷಾ ಸಂಪತ್ತು, ಮುಖ್ಯ ಸುದ್ದಿಗಳನ್ನು ಪ್ರಸ್ತುತ ಪಡಿಸುವ ನಿಖರತೆ, ಸಂಪಾದಕೀ ಯದಲ್ಲಿನ ಮೌಲ್ಯಯುತ ನಿಲುವು ಹೊಂದಿದೆ. ದೇಶ, ವಿದೇಶ ಸುದ್ದಿಗಳು ಓದಲು ಖುಷಿಯಾಗುತ್ತವೆೆ. ಸ್ಥಳಿಯ ಪ್ರಮುಖ ಸುದ್ದಿಗಳು, ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾರ್ಗದರ್ಶಿ ಹಾಗೂ ಪ್ರಾದೇಶಿಕ ಸುದ್ದಿಗಳ ಮಾಹಿತಿ ಓದುವ ಹಂಬಲ ಅಂದಿನಿಂದ ಇಂದಿನ ತನಕ ಕುಗ್ಗಿಲ್ಲ. ವಿನ್ಯಾಸ, ಗುಣಮಟ್ಟ, ಪ್ರಸಾರ ಎಲ್ಲವೂ ಸೊಗಸಾಗಿದೆ. ಪತ್ರಿಕಾರಂಗದಲ್ಲಿ ಅಗ್ರಮಾ ನ್ಯವಾಗಿರುವ ಪತ್ರಿಕೆಯನ್ನು ಈ ಮಟ್ಟದಲ್ಲಿ ಬೆಳೆಸಲು ಹಗಲಿರುಳೆನ್ನದೆ ಶ್ರಮಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು. 50 ವರ್ಷಗಳ ಉದಯವಾಣಿ ಎಲ್ಲ ಮನೆಗಳಲ್ಲಿಯೂ ಉದಯವಾಗಲಿ.
ದೋನಾತ್‌ ಡಿ’ ಆಲ್ಮೇಡಾ, ಮಲ್ಪೆ

ಸಾಧನೆಗೆ ಪತ್ರಿಕೆಯ ಸಹಕಾರ
ನನ್ನ ಯಶಸ್ಸಿನ ಹಿಂದೆ ಉದಯವಾಣಿ ಪತ್ರಿಕೆಯ ಸಹಕಾರ ಮರೆಯಲಾಗದು. ವಿದ್ಯಾ ರ್ಥಿಗಳಿಗೆ ಬೋಧಿಸುವ ವಿಷಯಗಳನ್ನು ಉದಯವಾಣಿಯಿಂದ ಬಳಸಿಕೊಂಡಿದ್ದೇನೆ. ಕನ್ನಡ, ವಿಜ್ಞಾನ, ಸಮಾಜ, ದೈಹಿಕ ಶಿಕ್ಷಣ, ಯೋಗ ಮತ್ತು ಮೌಲ್ಯ ಶಿಕ್ಷಣಕ್ಕೆ ಅವಶ್ಯವಾದ ಮಾಹಿತಿ ಪತ್ರಿಕೆಯಿಂದ ದೊರೆತಿದೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದೇನೆ. ನನ್ನ ಈ ಸಾಧನೆಯಲ್ಲಿ ಉದಯವಾಣಿಯ ಪಾಲು ಅಧಿಕ.

ರವಿವಾರದ ಪುರವಣಿ ಮಕ್ಕಳಿಗೆ ಕತೆ ಹೇಳಲು ಅನುಕೂಲವಾಗಿದೆ. ವಿಶೇಷಾಂಕ, ದೀಪಾವಳಿ ಸಂಚಿಕೆ ಅತ್ಯುನ್ನತವಾಗಿ ಮೂಡಿಬರುತ್ತಿದೆ. ನಮ್ಮ ಶಾಲೆಯಲ್ಲಿ ಬೆಳಗ್ಗಿನ ಪ್ರಾರ್ಥನೆ ಬಳಿಕ ಉದ ಯವಾಣಿಯಲ್ಲಿನ ಪ್ರಮುಖ ಸುದ್ದಿಗಳನ್ನು ವಿದ್ಯಾರ್ಥಿಗಳು ಓದುತ್ತಾರೆ. ಶಾಲಾ ವಾಚನಾ ಲಯದಲ್ಲಿ ಉದಯವಾಣಿ ಸ್ಥಾನ ಪಡೆದಿದೆ. ಶಿಕ್ಷಕ ವೃತ್ತಿಯ ಯಶಸ್ಸಿಗೆ ಕಾರಣವಾದ ಉದಯ ವಾಣಿ ಪತ್ರಿಕೆಯ ಸುವರ್ಣ ಸಂಭ್ರಮಕ್ಕೆ ಆತ್ಮೀಯ ಅಭಿನಂದನೆಗಳು.
-ಗುರುರಾಜ, ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next