Advertisement
ಮಧುರಂ-2019.ಪಡನ್ನಕ್ಕಾಡ್ ಕೃಷಿ ಕಾಲೇಜು ವೈವಿಧ್ಯಮಯ ಮಾವಿನ ಹಣ್ಣುಗಳ ಮಹೋತ್ಸವ ಮೂಲಕ ಹಣ್ಣುಗಳ ರಾಜನ ಲೋಕಕ್ಕೆ ಕದತೆರೆದು ನಾಡಿನ ಗಮನ ಸೆಳೆಯಿತು. ಮಲಬಾರ್ ಮ್ಯಾಂಗೋ ಫೆಸ್ಟ್ ಮಧುರಂ-2019 ಎಂಬ ಹೆಸರಿನಲ್ಲಿ ನಡೆಯುತ್ತಿರುವ ಮಾವಿನಹಣ್ಣುಗಳ ಮಹೋತ್ಸವದಲ್ಲಿ ಸ್ಥಳೀಯ ಮತ್ತು ವಿವಿಧ ಕಡೆಗಳ ವೈವಿಧ್ಯಮಯ ಮಾವಿನಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ನಡೆದಿದೆ. ಕೃಷಿ ಕಾಲೇಜಿನ ಉತ್ಪನ್ನವಾಗಿರುವ ಫಿರಂಗಿ ಲಡುವದಿಂದ ತೊಡಗಿ ಅತ್ಯಧಿಕ ಬೆಲೆ ಹೊಂದಿರುವ ಅಲೋನ್ಸಾ, ಸಿಂಧೂರಂ, ನೀಲಂ, ಮುಂಡಪ್ಪ, ಮೆರ್ಕ್ನೂರಿ, ಸುವರ್ಣ ರೇಖೆ, ಕರ್ಪೂರ, ಬಂಗೋರ ಸಹಿತ 20 ಕ್ಕೂ ಅಧಿಕ ಮಾವಿನಹಣ್ಣುಗಳು ಇಲ್ಲಿ ಹಣ್ಣು ಪ್ರಿಯರನ್ನು ಸೆಳೆಯುತ್ತಿವೆ. ಕಾಲೇಜು ವಿದ್ಯಾರ್ಥಿ ಯೂನಿಯನ್ ನೇತƒತ್ವದಲ್ಲಿ ಇಲ್ಲಿ ಮಾವಿನ ಹಣ್ಣುಗಳ ಮಹೋತ್ಸವ ನಡೆಯುತ್ತಿದೆ.
ಕಳೆದ ವರ್ಷ ನಡೆದಿದ್ದ ಮ್ಯಾಂಗೋ ಫೆಸ್ಟ್‌ನಲ್ಲಿ 7 ಟನ್ ಮಾವಿನ ಹಣ್ಣುಗಳ ಮಾರಾಟ ನಡೆದಿದೆ. ಕಾಲೇಜು ಆವರಣದಲ್ಲೇ ಸರಿಸುಮಾರು 150 ಕ್ಕೂ ಅಧಿಕ ಮಾವಿನ ಮರಗಳಿದ್ದು, 20 ಜಾತಿಯ ಮಾವಿನಹಣ್ಣುಗಳನ್ನು ಬೆಳೆಸಲಾಗುತ್ತಿದೆ. ಕಿಲೋಗೆ 60 ರೂ.ನಿಂದ 130 ರೂ. ಬೆಲೆಯಿರುವ ಅತ್ಯಧಿಕÀ ದೊಡ್ಡ ಗಾತ್ರದ ಗುದಾದ್ ಮಾವಿನಹಣ್ಣು ಇಲ್ಲಿ ಗಮನಾರ್ಹವಾಗಿದೆ. ಒಂದು ಹಣ್ಣು 600 ಗ್ರಾಂನಿಂದ 800 ಗ್ರಾಂ ತೂಕವಿರುತ್ತದೆ.
Related Articles
Advertisement
ಕೃಷಿ ಉತ್ಪನ್ನಗಳ ಪ್ರದರ್ಶನಕಾಲೇಜಿನ ಇತರ ವಿಭಾಗಗಳ ನೇತƒತ್ವದಲ್ಲಿ ವಿವಿಧ ಕೃಷಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿದೆ. ಬೇರೆ ಬೇರೆ ಹಣ್ಣುಗಳು, ಪುರಾತನ ಕೃಷಿ ಉಪಕರಣಗಳು, ಸಾಕು ಹಕ್ಕಿಗಳು, ಮೀನುಗಳು, ನರ್ಸರಿ ಸಸ್ಯಗಳು ಇತ್ಯಾದಿ ಗಮನ ಸೆಳೆದಿವೆ. ಪ್ರದರ್ಶನದ ಅಂಗವಾಗಿ ವಿಚಾರ ಸಂಕಿರಣ, ಸ್ಥಳೀಯ ಮಾವಿನ ಹಣ್ಣುಗಳ ಕುರಿತಾಗಿ ಸ್ಪರ್ಧೆಗಳು ಮೊದಲಾದುವು ನಡೆಯುತ್ತಿದೆ. ಪ್ರತಿದಿನ ನೂರಾರು ಮಂದಿ ಕೃಷಿ ಪ್ರೇಮಿಗಳು ಈ ಪ್ರದರ್ಶನ ವೀಕ್ಷಿಸಲು ಆಗಮಿಸುತ್ತಿದ್ದು ಫಿರಂಗಿ ಲಡುವ, ಸಿಂಧೂರಂ, ಮುಂಡಪ್ಪ ಜಾತಿಯ ಮಾವಿನಹಣ್ಣಗಳಿಗೆ ಇಲ್ಲಿ ಹೆಚ್ಚಿನ ಬೇಡಿಕೆ ಇದೆ ವಿದ್ಯಾರ್ಥಿಗಳನ್ನು ಕೃಷಿಯತ್ತ ಸೆಳೆಯಲು ಕೈಗೊಳ್ಳುವ ಇಂತಹ ಅನುಕರಣೀಯ ಮಾದರಿ ಕಾರ್ಯ. – ಅಖೀಲೇಶ್ ನಗುಮುಗಂ