Advertisement

ಯಂತ್ರ ಪ್ರೀತಿಯನ್ನು ಗ್ರಹಿಸಿದ್ದ ಅಡಿಗರು: ಚಂದ್ರಕಲಾ

03:45 AM Jul 09, 2017 | Team Udayavani |

ಉರ್ವಸ್ಟೋರ್‌: ಜಗತ್ತಿನ ವಿವಿಧೆಡೆಯ ಒಳ್ಳೆಯ ಚಿಂತನೆಯನ್ನು ಪೂರ್ವಗ್ರಹವಿಲ್ಲದೆ ಸ್ವೀಕರಿಸುವ ಮನೋಭಾವ ಅಡಿಗರದ್ದಾಗಿತ್ತು.  ಅವರ ಸಾಹಿತ್ಯದಲ್ಲಿ ಅಂತಹ ಚಿಂತನೆಗಳನ್ನು ಕಾಣಬಹುದು ಎಂದು ಹಿರಿಯ ಲೇಖಕಿ ಚಂದ್ರಕಲಾ ನಂದಾವರ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಮತ್ತು ತಾಲೂಕು ಹಾಗೂ  ಮಂಗಳೂರು  ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ  ಶನಿವಾರ ಡಾ| ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಭಾಷಣ ಮಾಡಿದರು. 

ಪಾಶ್ಚಾತ್ಯರಲ್ಲಿ ಯಂತ್ರ ಪ್ರೀತಿಯನ್ನು ಕಂಡು ಮುಂದೊಂದು ದಿನ ಭಾರತದಲ್ಲಿಯೂ ಇದೇ ಪರಿಸ್ಥಿತಿ ಬರಬಹುದು ಎಂಬುದನ್ನು  ಅಡಿಗರು ಗ್ರಹಿಸಿದ್ದರು ಎಂದೆನಿಸುತ್ತದೆ. ಯಾಕೆಂದರ ಅವರ ಹಲವು ಕವನಗಳಲ್ಲಿ ಅಂತಹ ಭಾವ ಕಾಣಿಸುತ್ತದೆ ಎಂದು  ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next