Advertisement
ಆದರೆ, ಅದೇ ಊರ ಜನ, ಅದೇ ಸಹೋದರರು ಅವನನ್ನು ಕೀಳಾಗಿ ಕಾಣುತ್ತಾರೆ. ಯಾಕೆ ಹಾಗೆ ನೋಡುತ್ತಾರೆ, ಕೊನೆಗೆ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಇದೊಂದು ಪಕ್ಕಾ ಹಳ್ಳಿಯ ಕಥೆ. ಅದರಲ್ಲೂ ರೈತರ ನೋವು-ನಲಿವಿನ ಅಂಶಗಳು ಇಲ್ಲಿವೆ. ಚಿತ್ರದ ಕಥೆಯ ಆಶಯ ಚೆನ್ನಾಗಿದೆ. ಹಾಗಂತ, ಹೊಸ ಕಥೆಯಂತೂ ಅಲ್ಲ. ಆದರೆ, ನಿರೂಪಿಸಿರುವ ರೀತಿ ಹೊಸದು. ಈಗಿನ ವಾಸ್ತವ ಚಿತ್ರಣವನ್ನು ಕಟ್ಟಿಕೊಡುವ ಪ್ರಯತ್ನ ಸಾರ್ಥಕ ಎನಿಸಿದೆ. ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ, “ರಾಜೀವ’ ಎಲ್ಲರಿಗೂ ಇಷ್ಟವಾಗುತ್ತಾನೆ. ಇಲ್ಲೊಂದು ಗಂಭೀರ ವಿಷಯವಿದೆ. ಅದನ್ನು ಇನ್ನಷ್ಟು ಬಿಗಿಯಾಗಿ ನಿರೂಪಿಸಬಹುದಿತ್ತು.
Related Articles
Advertisement
ಅಂತೆಯೇ ಚಿತ್ರದಲ್ಲಿ ಯಶಸ್ವಿ ರೈತನೊಬ್ಬ ತನ್ನ ನಾಲ್ಕು ಜನ ಮಕ್ಕಳನ್ನು ಚೆನ್ನಾಗಿ ಓದಿಸುತ್ತಾನೆ. ಊರಿನ ರೈತರ ಸುಖಕ್ಕಾಗಿ ಅವರ ಕಷ್ಟಗಳಿಗೆ ಸ್ಪಂದಿಸಲು ಹೋಗಿ, ತಾನೇ ಸಂಕಷ್ಟಕ್ಕೆ ಸಿಲುಕುತ್ತಾನೆ. ಕೊನೆಗೆ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಅವನ ಮಕ್ಕಳ ಪೈಕಿ ಹಿರಿಯ ಮಗ ರಾಜೀವ ಐಎಎಸ್ ಓದಿದ್ದರೂ, ತನ್ನೂರಿನ ರೈತರ ಸಮಸ್ಯೆಗೆ ಸ್ಪಂದಿಸಲು ಹಳ್ಳಿಗೆ ಹಿಂದಿರುಗುತ್ತಾನೆ. ತನ್ನ ಪರಿಶ್ರಮದ ಮೂಲಕ ಇಡೀ ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತಾನೆ. ಅವನ ಮೂವರು ಸಹೋದರರ ಪೈಕಿ ಶಾಸಕ ಒಬ್ಬನಾದರೆ, ಇನ್ನೊಬ್ಬ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ.
ಅದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅವರು, ತನ್ನ ಅಣ್ಣ ರಾಜೀವನ ಮಾತಿಗೆ ಸದಾ ತಲೆಬಾಗುತ್ತಿರುತ್ತಾರೆ. ಒಂದು ಕೆಟ್ಟ ಘಟನೆಯಲ್ಲಿ ಅವರೆಲ್ಲರೂ ರಾಜೀವನ ಮೇಲೆ ತಿರುಗಿ ಬೀಳುತ್ತಾರೆ. ಊರ ಜನರು ಸಹ ರಾಜೀವನನ್ನು ದೂರುತ್ತಾರೆ. ತನ್ನ ಊರಿನ ರೈತರಿಗಾಗಿ ಅಷ್ಟೆಲ್ಲಾ ಕಷ್ಟಪಟ್ಟ ರಾಜೀವ ಕೊನೆಗೆ ಆ ಘಟನೆಯಿಂದ ಯಾವ ನಿರ್ಧಾರ ತೆಗೆದುಕೊಳ್ಳುತ್ತಾನೆ ಎಂಬ ಕುತೂಹಲವಿದ್ದರೆ, ರಾಜೀವನ ಹೋರಾಟ ನೋಡಿಬರಬಹುದು.
ಮಯೂರ್ ಪಟೇಲ್, ಈ ಬಾರಿ ಕಮರ್ಷಿಯಲ್‌ಗೆ ಅಂಟಿಕೊಳ್ಳದೆ ಒಂದು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅವರಿಲ್ಲಿ ಮೂರು ಶೇಡ್ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಯುವಕನಾಗಿ, ಅಪ್ಪನಾಗಿ ನಟನೆಯಲ್ಲಿ ಇಷ್ಟವಾಗುತ್ತಾರೆ. ಉಳಿ ದಂತೆ ತೆರೆ ಮೇಲೆ ಕಾಣುವ ಪಾತ್ರಗಳಿಗೂ ಆದ್ಯತೆ ಕೊಡಲಾಗಿದೆ. ಎಲ್ಲರೂ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ರೋಹಿತ್ ಸೋವರ್ ಸಂಗೀತದ ಒಂದು ಹಾಡು ಪರವಾಗಿಲ್ಲ. ಹಿನ್ನೆಲೆ ಸಂಗೀತಕ್ಕಿನ್ನಷ್ಟು ಸ್ವಾದ ಇರಬೇಕಿತ್ತು. ಆನಂದ್ ಇಳೆಯರಾಜ ಅವರ ಛಾಯಾಗ್ರಹಣದಲ್ಲಿ ಹಳ್ಳಿ ಸೊಗಡು ತುಂಬಿದೆ. ಕಾಕೋಳು ರಾಮಯ್ಯ ಬರೆದ ಮಾತುಗಳಲ್ಲಿ ತೂಕವಿದೆ.
ಚಿತ್ರ: ರಾಜೀವನಿರ್ಮಾಣ: ಬಿ.ಎಂ.ರಮೇಶ್, ಕಿರಣ್
ನಿರ್ದೇಶನ: ಫ್ಲೈಯಿಂಗ್ ಕಿಂಗ್ ಮಂಜು
ತಾರಾಗಣ: ಮಯೂರ್ ಪಟೇಲ್, ಅಕ್ಷತಾ ಶಾಸ್ತ್ರಿ, ಮದನ್ ಪಟೇಲ್ ಇತರರು. * ವಿಭ