Advertisement

ವೈಯಕ್ತಿಕ ಪ್ರತಿಷ್ಠೆಯೇ ಸೋಲಿಗೆ ಕಾರಣ

09:40 AM May 27, 2019 | Suhan S |

ಹುಣಸೂರು: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಮೈತ್ರಿಪಕ್ಷಗಳ ನಡುವಿನ ಸಮನ್ವಯಕ್ಕಿಂತ ವೈಯಕ್ತಿಕ ಪ್ರತಿಷ್ಠೆಯೇ ಹೆಚ್ಚಾಗಿದ್ದರಿಂದ ಮೈತ್ರಿ ಅಭ್ಯರ್ಥಿಗೆ ಕಡಿಮೆ ಪ್ರಮಾಣದ ಲೀಡ್‌ ಸಿಗಲು ಕಾರಣವಾಗಿದೆ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಹರಳಹಳ್ಳಿ ಮಾದೇಗೌಡ ಅಭಿಪ್ರಾಯಪಟ್ಟರು.

Advertisement

ಸುದ್ದಿಗೋಷ್ಟಿಯಲ್ಲಿ ಮೈತ್ರಿ ಅಭ್ಯರ್ಥಿ ಸೋಲಿನ ಪರಾಮರ್ಶೆಮಾಡಿದ ಅವರು ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್‌ ಪರ ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಈ ಕ್ಷೇತ್ರದ ಶಾಸಕ ಎಚ್.ವಿಶ್ವನಾಥ್‌ರನ್ನು ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡರು ಗಣನೆಗೆ ತೆಗೆದುಕೊಳ್ಳದೆ ಸೋಲನುಭವಿಸು ವಂತಾಗಿದೆ. ಮೈತ್ತಿ ಅಭ್ಯರ್ಥಿಯ ಬೆಂಬಲವಾಗಿ ನಿಂತಿದ್ದ ಕಾಂಗ್ರೆಸ್‌ ವರಿಷ್ಠರಾದ ಸಿದ್ಧರಾಮಯ್ಯ ಮತ್ತವರ ತಂಡ ಜೆಡಿಎಸ್‌ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದಿರುವುದು ಕೂಡ ಅಭ್ಯರ್ಥಿ ಕೇವಲ 3,798 ಮತಗಳ ಮುನ್ನಡೆ ಪಡೆಯು ವಂತಾಯಿತು ಎಂದರು.

ಪಕ್ಷದ ಮುಖಂಡ ಹಾಗೂ ತಾಲೂಕು ಕುರುಬರ ಕ್ಷೇಮಾಬಿವೃದ್ಧಿ ಸಂಘದ ಅಧ್ಯಕ್ಷ ಡಿ.ಕೆ. ಕುನ್ನೇಗೌಡ ಮಾತನಾಡಿ, ಚುನಾವಣೆಯಲ್ಲಿ ತಾಲೂಕಿನ ಒಕ್ಕಲಿಗ ಸಮುದಾಯದ ಪಕ್ಷದ ಕುರುಬ ಸಮುದಾಯದ ಮತದಾರರು ಮೈತ್ರಿ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಇನ್ನು ಪಕ್ಷದ ಕಾರ್ಯಕರ್ತರು ಮೈತ್ರಿ ಧರ್ಮ ವನ್ನು ಪಾಲಿಸಿದ್ದಾರೆಂದರು.

ಬಿಜೆಪಿ ಭ್ರಮೆ: ಮುಖಂಡ ಹರಿಹರಾ ನಂದಸ್ವಾಮಿ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಯುವ ಮತದಾರರ ಮನಸ್ಸಿನಲ್ಲಿ ಮೋದಿ ಮತ್ತು ಬಿಜೆಪಿ ಎಂಬ ಭ್ರಮೆ ಹೊಕ್ಕ ಪರಿಣಾಮ ಎಲ್ಲ ಸಮುದಾಯದ ಶೇ.30ರಷ್ಟು ಮತಗಳು ಬಿಜೆಪಿಗೆ ಹೋಗಿದೆ. ಮುಂದಿನ ದಿನಗಳಲ್ಲಿ ಮೋದಿ ಯುವ ಮತದಾರರ ಮನಸ್ಸನ್ನು ಅರಿತು ಮುನ್ನಡೆಯಲೆಂದು ಆಶಿಸಿದರು. ಈ ಬಾರಿ ಬಿಜೆಪಿಯವರು ಸಹ ಹಣ ಹಂಚಿದ್ದರು. ಮೈತ್ರಿ ಪಕ್ಷದಲ್ಲಿ ದೈನಂದಿನ ಖರ್ಚಿಗೆ ಹಣದ ಕೊರತೆಯಿಂದಾಗಿ ಜೊತೆಗೆ ಮುಖಂಡರನ್ನು ಕಡೆಗಣಿಸಿದ್ದರಿಂದ ಕೊನೆಗಳಿಗೆಯಲ್ಲಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ ಹಾಗೂ ಮೈತ್ರಿ ಅಭ್ಯರ್ಥಿ ತಾಲೂಕಿನಲ್ಲಿ ಮತಯಾಚನೆ ಮಾಡದಿರು ವುದೂ ಕೂಡ ಹಿನ್ನಡೆಗೆ ಕಾರಣವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡ ಹಾಗೂ ನಗರಸಭಾ ಸದಸ್ಯ ಸತೀಶ್‌ ಕುಮಾರ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next