Advertisement

ಲೋಕಾ ಗಡುವು ಮುಗಿದ್ರೂ ಆಸ್ತಿ ವಿವರ ಸಲ್ಲಿಸಿಲ್ಲ

07:25 AM Aug 09, 2017 | Team Udayavani |

ಬೆಂಗಳೂರು: ವಿಧಾನಸಭೆ ಹಾಗೂ ವಿಧಾನಪರಿಷತ್ತಿನ 67 ಸದಸ್ಯರು ಜೂನ್‌ 30ರ ಗಡುವು ಮೀರಿದರೂ ಲೋಕಾಯುಕ್ತಕ್ಕೆ ಆಸ್ತಿ-ಪಾಸ್ತಿ ವಿವರ ನೀಡದೇ ಇರುವುದು ಬೆಳಕಿಗೆ ಬಂದಿದೆ. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ, ಮಾಜಿ ಸಚಿವ ಬಾಬೂರಾವ್‌ ಚಿಂಚನ  ಸೂರು, ನೈಸ್‌ ಕಂಪೆನಿ ಮುಖ್ಯಸ್ಥ ಅಶೋಕ್‌ ಖೇಣಿ, ಜೆಡಿಎಸ್‌ ಬಂಡಾಯ ನಾಯಕ ಜಮೀರ್‌ ಅಹ್ಮದ್‌, ವಿಧಾನಪರಿಷತ್‌ ಸದಸ್ಯೆ ಮೋಟಮ್ಮ, ಪರಿಷತ್‌ ಮುಖ್ಯ ಸಚೇತ ಐವಾನ್‌ ಡಿಸೋಜಾ ಸೇರಿ ಉಳಿದ ನಾಯಕರು ಆಸ್ತಿ ಮತ್ತು ಋಣಭಾರ ಸಲ್ಲಿಸದ ಪಟ್ಟಿಯಲ್ಲಿದ್ದಾರೆ.

Advertisement

ಆಡಳಿತರೂಢ ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿಯಾದಿ ಯಾಗಿ ಎಲ್ಲಾ ಸಚಿವರು ನಿಗದಿತ ಅವಧಿಯಲ್ಲಿ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಿದ್ದಾರೆ. ಪ್ರತಿಪಕ್ಷ ಬಿಜೆಪಿಯ ಎಲ್ಲ ಶಾಸಕರೂ ಕೂಡ ತಮ್ಮ ಆಸ್ತಿ ವಿವರದ ಮಾಹಿತಿ ನೀಡಿದ್ದಾರೆ. ಆದರೆ ಜೆಡಿಎಸ್‌ನ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ 23 (ಬಂಡಾಯ ಶಾಸಕರು ಸೇರಿ) ಶಾಸಕರೂ ಆಸ್ತಿ ವಿವರಸಲ್ಲಿಕೆಗೆ ಆಸಕ್ತಿ ತೋರಿದಂತಿಲ್ಲ. ಜೂನ್‌ 30ರೊಳಗೆ ಹಾಲಿ ಶಾಸಕರು ಹಾಗೂ ವಿಧಾನಪರಿಷತ್‌ ಸದಸ್ಯರು 2016-17ನೇ ಸಾಲಿನ ತಮ್ಮ ಆಸ್ತಿ ಹಾಗೂ ಋಣಭಾರ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ಹೇಳಲಾಗಿತ್ತು. ಆದರೆ ಈ ನಿಯಮವನ್ನು 67 ಮಂದಿ ಶಾಸಕರು ಪಾಲಿಸದಿರುವುದು ಲೋಕಾಯುಕ್ತರು ಗಂಭೀರವಾಗಿಯೇ ಪರಿಗಣಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ. ಅಷ್ಟೇ ಅಲ್ಲ, ಆಗಸ್ಟ್‌ 5ರವರೆಗೂ ಆಸ್ತಿ ವಿವರ ಸಲ್ಲಿಸದ ಶಾಸಕರ ಪಟ್ಟಿ ಈಗ “ಉದಯವಾಣಿ’ಗೆ ಲಭ್ಯವಾಗಿದೆ.

ನೋಟಿಸ್‌ ನೀಡಲು ಸಿದ್ಧತೆ: ಲೋಕಾಯುಕ್ತ ಕಾಯ್ದೆ ಸೆಕ್ಷನ್‌ 22(1)(2)ರ ಪ್ರಕಾರ ಜೂನ್‌ 30ರೊಳಗೆ ಆಸ್ತಿ ಪ್ರಮಾಣಪತ್ರ ಸಲ್ಲಿಸಬೇಕು. ಜೂನ್‌ ತಿಂಗಳು ಮುಗಿದು, ಜುಲೈ ಅಂತ್ಯವಾದರೂ ಆಸ್ತಿ ವಿವರ ಸಲ್ಲಿ  ಸದ ಶಾಸಕರಿಗೆ ನೋಟೀಸ್‌ ಜಾರಿಗೊಳಿಸಿ ವಿವರಣೆ ಕೇಳಲು ಲೋಕಾಯುಕ್ತರು ಚಿಂತನೆ ನಡೆಸಿದ್ದಾರೆ. ಈ ಪೈಕಿ ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ. ಶಿವಮೂರ್ತಿ 2015 -16ನೇ ಸಾಲಿನ ಆಸ್ತಿ ವಿವರ ಸಲ್ಲಿಸಿಲ್ಲ, ಈ ವರ್ಷವೂ ಇದುವರೆಗೂ ಸಲ್ಲಿಸಿಲ್ಲ. ಕಳೆದ ವರ್ಷ ಹಲವು ಬಾರಿ ನೋಟಿಸ್‌ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲದೇ ಇರುವ ಬಗ್ಗೆ
ಮೂಲಗಳಿಂದ ತಿಳಿದುಬಂದಿದೆ.

ಆಸ್ತಿವಿವರ ಸಲ್ಲಿಸದವರ ಪಟ್ಟಿ
ಕಾಂಗ್ರೆಸ್‌
1. ಕೆ.ಬಿ ಕೋಳಿವಾಡ, ವಿಧಾನಸಭಾಧ್ಯಕ್ಷ
2. ಫಿರೋಜ್‌ ನೂರುದ್ದೀನ್‌ ಸೇಠ್
3. ಬಿ.ಜಿ ಗೋವಿಂದಪ್ಪ
4. ಸಿ.ಪುಟ್ಟರಂಗಶೆಟ್ಟಿ
5. ಇ.ತುಕಾರಂ
6. ಸಿದ್ದು ಬಿ. ನ್ಯಾಮಗೌಡ
7. ರಾಜ ವೆಂಕಟಪ್ಪ ನಾಯಕ
8. ಬಾಬುರಾವ ಚಿಂಚನಸೂರ
9. ರಹೀಮ್‌ ಖಾನ್‌
10. ಸಿ.ಎಸ್‌. ಶಿವಳ್ಳಿ
11. ಬಿ.ಎಂ.ನಾಗರಾಜ
12. ಅನಿಲ್ ಲಾಡ್‌
13. ಡಿ.ಸುಧಾಕರ
14. ಎಚ್‌.ಪಿ. ರಾಜೇಶ್‌
15. ಕೆ. ಶಿವಮೂರ್ತಿ
16. ಜಿ.ಎಚ್‌.ಶ್ರೀನಿವಾಸ
17. ಟಿ. ವೆಂಕಟರಾಮಯ್ಯ
18. ಬಿ.ಎ. ಮೊಯಿದ್ದೀನ್‌ ಬಾವಾ
19. ಸಿ.ಪಿ. ಯೋಗೇಶ್ವರ
20. ಎಸ್‌. ಜಯಣ್ಣ
21. ಜಿ. ರಾಮಕೃಷ್ಣ
22. ಕೆ.ವೆಂಕಟೇಶ್‌
23. ಮುನಿರತ್ನ
24. ಎನ್‌.ವೈ ಗೋಪಾಲಕೃಷ್ಣ
25. ಆರ್‌.ನರೇಂದ್ರ
26. ಶಿವಣ್ಣ ಬಿ

ಜೆಡಿಎಸ್‌
1. ಎಚ್‌.ಡಿ ಕುಮಾರಸ್ವಾಮಿ
2. ಎಚ್‌.ಡಿ ರೇವಣ್ಣ
3. ಮಲ್ಲಿಕಾರ್ಜುನ ಖೂಬಾ
4. ಜಮೀರ್‌ ಅಹಮದ್‌ ಖಾನ್‌
5. ಎಚ್‌.ಸಿ ಬಾಲಕೃಷ್ಣ
6. ಕೆ. ಗೋಪಾಲಯ್ಯ
7. ಶಾರದಾ ಪೂರ್ಯಾ ನಾಯ್ಕ
8. ಮಧು ಬಂಗಾರಪ್ಪ
9. ಬಿ.ಬಿ. ನಿಂಗಯ್ಯ
10. ಎಂ.ಟಿ. ಕೃಷ್ಣಪ್ಪ
11. ಡಿ. ನಾಗರಾಜಯ್ಯ
12. ಪಿ.ಆರ್‌. ಸುಧಾಕರ ಲಾಲ್‌
13. ಕೆ.ಎಂ. ತಿಮ್ಮರಾಯಪ್ಪ
14. ಕೆ.ಎಸ್‌. ಮಂಜುನಾಥಗೌಡ
15. ಡಿ.ಸಿ. ತಮ್ಮಣ್ಣ
16. ಸಿ. ಎನ್‌ ಬಾಲಕೃಷ್ಣ
17. ಕೆ.ಎಂ. ಶಿವಲಿಂಗೇಗೌಡ
18. ಎಚ್‌.ಕೆ. ಕುಮಾರಸ್ವಾಮಿ
19. ಅಪ್ಪಾಜಿ ಎಂ.ಜೆ
20. ಇಕ್ಬಾಲ್‌ ಅನ್ಸಾರಿ
21. ಎಂ.ರಾಜಣ್ಣ
22. ಎನ್‌.ಎಚ್‌ ಕೋನರೆಡ್ಡಿ
23. ಎಸ್‌.ಭೀಮಾನಾಯ್ಕ

Advertisement

ಪಕ್ಷೇತರ
1. ಅರವಿಂದ ಪಾಟೀಲ
2. ಅಶೋಕ್‌ ಖೇಣಿ
3. ಸತೀಶ್‌ ಸೈಲ್‌
4. ವರ್ತೂರು ಪ್ರಕಾಶ್‌

ವಿಧಾನ ಪರಿಷತ್‌ ಸದಸ್ಯರು
ಕಾಂಗ್ರೆಸ್‌: 
ಮೋಟಮ್ಮ, ಕೆ.ಅಬ್ದುಲ್‌ ಜಬ್ಟಾರ್‌, ಐವಾನ್‌ ಡಿಸೋಜಾ,
ಎಂ. ನಾರಾಯಣ ಸ್ವಾಮಿ, ರಾಮಪ್ಪ ತಿಮ್ಮಾಪುರ

ಜೆಡಿಎಸ್‌: ಆರ್‌.ಚೌಡರೆಡ್ಡಿ ತೂಪಲ್ಲಿ, ಟಿ.ಎ ಶರವಣ, ಸಯದ್‌ ಅದೀರ್‌ ಆಗಾ, ಎನ್‌. ಅಪ್ಪಾಜಿಗೌಡ, ಸಿ.ಆರ್‌ ಮನೋಹರ್‌, ಕೆ.ಟಿ ಶ್ರೀಕಂಠೇಗೌಡ

ಪಕ್ಷೇತರರು: ಬಸವನಗೌಡ ಪಾಟೀಲ್‌ ಯತ್ನಾಳ್‌, ಡಿ.ಯು. ಮಲ್ಲಿಕಾರ್ಜುನ

ಬಿಜೆಪಿ: ವಿಮಲಾಗೌಡ (ನಿಧನರಾಗಿದ್ದಾರೆ)

ರಾಜ್ಯಪಾಲರಿಗೆ ವರದಿ ಸಲ್ಲಿಕೆ? 
ಲೋಕಾಯುಕ್ತರಿಗೆ ಪ್ರತಿ ವರ್ಷ ಆಸ್ತಿವಿವರ ಸಲ್ಲಿಸದ ಶಾಸಕರ ಬಗ್ಗೆ ಲೋಕಾಯುಕ್ತರು ರಾಜ್ಯಪಾಲರಿಗೆ ವರದಿ ನೀಡಲಿದ್ದು, ಸಂಬಂಧಪಟ್ಟ ಶಾಸಕರ ವೇತನ, ಭತ್ಯೆ ಸ್ಥಗಿತಗೊಳಿಸಬೇಕು ಎಂದು ಶಿಫಾರಸು ಮಾಡಲು ಅಧಿಕಾರವಿದೆ. ಸದ್ಯ  ಲೋಕಾಯುಕ್ತರ ನೋಟಿಸ್‌ ಬಳಿಕ ಬಹುತೇಕ ಶಾಸಕರು ಸಲ್ಲಿಸುವ ಸಾಧ್ಯತೆಯಿದ್ದು, ರಾಜ್ಯಪಾಲರಿಗೆ ವರದಿ ಕಳುಹಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next