Advertisement

ಕೆರೆಗಳ ಕಾಯಕಲ್ಪಕ್ಕೆ ಮುಂದಾದ ಪಾಲಿಕೆ

02:14 PM May 22, 2019 | Suhan S |

ಬೆಂಗಳೂರು: ಬಿಬಿಎಂಪಿ ಒಡೆತನದಲ್ಲಿರುವ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವ ಮೂಲಕ ಜಲಮೂಲಗಳನ್ನು ಸಂರಕ್ಷಿಸಲು ಪಾಲಿಕೆ ಯೋಜನೆ ರೂಪಿಸಿದೆ. ಅದರಂತೆ 31 ಕೆರೆಗಳ ಅಭಿವೃದ್ಧಿಗೆ ಟೆಂಡರ್‌ ಕರೆಯಲು ಸಜ್ಜಾಗಿದ್ದು, 14 ಕೆರೆಗಳಲ್ಲಿ ಕೊಳಚೆ ನೀರು ಸೇರದಂತೆ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ (ಎಸ್‌ಟಿಪಿ) ಅಳವಳಡಿಕೆಗೆ ಮುಂದಾಗಿದೆ.

Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 842 ಕಿ.ಮೀ. ಉದ್ದ ಬೃಹತ್‌ ಮಳೆನೀರು ಕಾಲುವೆಗಳಲ್ಲಿ ಮಳೆನೀರು ಬದಲಿಗೆ ಕೊಳಚೆಗೆ ನೀರು ಹರಿಯುತ್ತಿದೆ. ಇದರಿಂದಾಗಿ ನಗರದಲ್ಲಿನ ಕೆರೆಗಳು ಮಲೀನವಾಗುತ್ತಿದ್ದು, ಕೆರೆಗಳಲ್ಲಿ ಬೆಂಕಿ, ನೊರೆಯಂತಹ ಸಮಸ್ಯೆಗಳು ಸೃಷ್ಟಿಯಾಗಿವೆ. ಇನ್ನು ಕೆಲವೆಡೆಗಳಲ್ಲಿ ಅಂತರ್ಜಲವೂ ಕಲುಷಿತಗೊಂಡಿರುವುದು ಆತಂಕ ಮೂಡಿಸಿದೆ.

ಆ ಹಿನ್ನೆಲೆಯಲ್ಲಿ ಕೆರೆಗಳಿಗೆ ಕೊಳಚೆ ನೀರು ಪ್ರವೇಶಿಸುವುದುನ್ನು ತಪ್ಪಿಸಲು ಮುಂದಾಗಿರುವ ಪಾಲಿಕೆಯು, ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸುವ ಮೂಲಕ ಕೊಳಚೆ ನೀರು ಕೆರೆ ಸೇರಿದಂತೆ ಮಾಡಲು ಯೋಜನೆ ರೂಪಿಸಿದೆ. ಈಗಾಗಲೇ 5 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸಿರುವ ಪಾಲಿಕೆಯು ಇದೀಗ 14 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸುವ ಕಾರ್ಯ ಆರಂಭಿಸಿದೆ.

ಕಾರ್ಯ ಪ್ರಗತಿ:ಪಾಲಿಕೆಯ ಒಡೆತನದಲ್ಲಿರುವ 124 ಕೆರೆಗಳ ಪೈಕಿ ಈಗಾಗಲೇ 74 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, 19 ಕೆರೆಗಳು ಜೂನ್‌ ವೇಳೆಗೆ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲಿವೆ. ಆ ಹಿನ್ನೆಲೆಯಲ್ಲಿ ಪಾಲಿಕೆಯಿಂದ ಸದ್ಯ ಅಭಿವೃದ್ಧಿಪಡಿಸುತ್ತಿರುವ 19 ಕೆರೆಗಳ ಪೈಕಿ 14 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆಯಿಂದ ಅಭಿವೃದ್ಧಿಗೊಳಿಸುವ ಕೆರೆಗಳಲ್ಲಿಯೂ ಎಸ್‌ಟಿಪಿ ಅಳವಡಿಸಲು ಪಾಲಿಕೆ ಯೋಜನೆ ರೂಪಿಸಿದೆ.

31 ಕೆರೆಗಳ ಅಭಿವೃದ್ಧಿ ಟೆಂಡರ್‌ ಪಾಲಿಕೆಯ ವ್ಯಾಪ್ತಿಯಲ್ಲಿರುವ 31 ಕೆರೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಿರುವ ಕೆರೆ ವಿಭಾಗವು ತಿಂಗಳಾಂತ್ಯಕ್ಕೆ 31 ಕೆರೆಗಳ ಅಭಿವೃದ್ಧಿ ಅಭಿವೃದ್ಧಿಗೆ ಟೆಂಡರ್‌ ಆಹ್ವಾನಿಸಲು ಮುಂದಾಗಿವೆ. ಉಳಿದ 24 ಕೆರೆಗಳ ಅಭಿವೃದ್ಧಿಗೆ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿರುವ ಪಾಲಿಕೆಯು, ಸರ್ಕಾರದಿಂದ ಅನುದಾನ ಕೋರಲು ಸಿದ್ಧತೆ ನಡೆಸಿದೆ. ಆ ಮೂಲಕ ಪಾಲಿಕೆಯ ಒಡೆತನದಲ್ಲಿರುವ ಕೆರೆಗಳ ಕೆರೆಗಳನ್ನು ಅಭಿವೃದ್ಧಿಗೊಳಿಸಲು ಪಾಲಿಕೆ ನಿರ್ಧರಿಸಿದೆ.

Advertisement

ನಿತ್ಯ 11 ಎಂಎಲ್ಡಿ ಸಂಸ್ಕರಣೆ :ಪಾಲಿಕೆಯಿಂದ ಈಗಾಗಲೇ ಎಸ್‌ಟಿಪಿ ಅಳವಡಿಕೆ ಮಾಡಿರುವ ಕೆರೆಗಳಲ್ಲಿ ನಿತ್ಯ 4.5 ಎಂಎಲ್ಡಿ ತ್ಯಾಜ್ಯನೀರು ಶುದ್ಧೀಕರಿಸಲಾಗುತ್ತಿದೆ. ಜತೆಗೆ 14 ಕೆರೆಗಳಲ್ಲಿ ಎಸ್‌ಟಿಪಿ ಅಳವಡಿಕೆ ಕಾರ್ಯ ಪೂರ್ಣಗೊಂಡರೆ, ನಿತ್ಯ 11 ಎಂಎಲ್ಡಿ ತ್ಯಾಜ್ಯ ನೀರು ಶುದ್ಧವಾಗಲಿದೆ. ಆ ಮೂಲಕ ಕೆರೆಗೆ ಸೇರುವ ತ್ಯಾಜ್ಯನೀರಿನ ಪ್ರಮಾಣ ಕಡಿಮೆ ಮಾಡಬಹುದಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದರು.

30 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿ ನಗರದಲ್ಲಿರುವ ಕೆರೆಗಳ ವಿಸ್ತೀರ್ಣದ ಆಧಾರದ ಮೇಲೆ ಎಸ್‌ಟಿಪಿಗಳನ್ನು ಅಳವಡಿಸಲಾಗುತ್ತಿದೆ. ಅದರಂತೆ 10 ಎಕರೆಗಿಂತಲೂ ಕಡಿಮೆ ವಿಸ್ತೀರ್ಣವಿರುವ ಕೆರೆಗಳಲ್ಲಿ 500 ಕೆಎಲ್ಡಿ ಸಾಮರ್ಥಯದ ಎಸ್‌ಟಿಪಿ ಅಳವಡಿಸುತ್ತಿದ್ದು, 10 ರಿಂದ 20 ಎಕರೆ ವಿಸ್ತೀರ್ಣದ ಕೆರೆಗಳಲ್ಲಿ 1 ಎಂಎಲ್ಡಿ ಸಾಮರ್ಥಯದ ಎಸ್‌ಟಿಪಿ ಅಳವಡಿಸಲಾಗುತ್ತಿದೆ. ಅದರಂತೆ 500 ಕೆಎಲ್ಡಿ ಘಟಕ ನಿರ್ಮಾಣಕ್ಕೆ 1.50 ಕೋಟಿಯಾಗಲಿದ್ದು, 1 ಎಂಎಲ್ಡಿ ಘಟಕ ನಿರ್ಮಾಣಕ್ಕೆ 2.50 ರಿಂದ 3 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

● ವೆಂ. ಸುನೀಲ್ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next