Advertisement

ಫ್ಯಾಶನ್‌ ಫೋಟೋಗ್ರಫಿಯ ಬೆಳಕು

03:44 PM Sep 11, 2020 | mahesh |

ಥರಹೇವಾರಿ ಉಡುಪು ಧರಿಸಿ ಸ್ನೋ-ಪೌಡರ್‌, ರಂಗಾದ ಕನ್ನಡಕ, ಹ್ಯಾಟು ಹಾಕಿ ಫ್ಯಾಶನ್‌ ಮಾಡಿಕೊಂಡು ಕ್ಯಾಮೆರಾಕ್ಕೆ ಪೋಸ್‌ ಕೊಡುವುದಷ್ಟೇ ಫ್ಯಾಶನ್‌ ಫೋಟೋಗ್ರಫಿಯಲ್ಲ. ಇಂದು ಜಾಹೀರಾತು ಪ್ರಪಂಚದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ. ಅವುಗಳ ಪ್ರಚಾರಕ್ಕೆಂದೇ ಅನೇಕ ಸಂಸ್ಥೆಗಳು ಕಾರ್ಯನಿರತವಾಗಿವೆ. ಪ್ರತಿದಿನ ನಾವು ನೋಡುವ ಪತ್ರಿಕೆ, ಮ್ಯಾಗಜೀನ್‌, ಟಿ.ವಿ, ಸಿನಿಮಾ ಥಿಯೇಟರ್‌ಗಳಲ್ಲಿ, ಸೋಶಿಯಲ್‌ ಮೀಡಿಯಾಗಳಲ್ಲಿ ಜಾಹೀರಾತುಗಳ ಪೈಪೋಟಿ ಇದೆ. ಹೀಗಾಗಿ, ಆ ಕ್ಷೇತ್ರಕ್ಕೆ ಪರಿಣಿತರಾದ, ಕ್ರಿಯೇಟಿವ್‌ ಛಾಯಾಗ್ರಾಹಕರ ಅವಶ್ಯಕತೆ ಹೆಚ್ಚುತ್ತಿದೆ. ಆಕರ್ಷಕ ರೂಪದರ್ಶಿಗಳ ಬೇಡಿಕೆಯಂತೂ ಇದ್ದದ್ದೇ. ವಿಶ್ವದಾದ್ಯಂತ ನಡೆಯುವ ಫ್ಯಾಶನ್‌ ಶೋ ಸಂದರ್ಭದಲ್ಲಿ ವಿವಿಧ ವಾಣಿಜ್ಯ, ಜಾಹೀರಾತು ಸಂಸ್ಥೆಗಳು, ತಮ್ಮ ಅಭಿರುಚಿಗೆ, ಅವಶ್ಯಕತೆಗಳಿಗೆ ಬೇಕಾದ ರೂಪದರ್ಶಿಗಳ ಮತ್ತು ಛಾಯಾಗ್ರಾಹಕರ ಆಯ್ಕೆ ಮಾಡಿಕೊಳ್ಳುತ್ತವೆ. ಇಲ್ಲಿ ನಾನು ತೆರೆಯುತ್ತಿರುವುದು ಆ ವಿಶಿಷ್ಟ ಲೋಕಕ್ಕೆ ಇಣುಕಲು ಬೇಕಾದ ಪುಟ್ಟದಾದ ಕಿಟಕಿಯನ್ನು ಮಾತ್ರ. ಅದರ ಬೃಹತ್‌ ದ್ವಾರದ ಹುಡುಕಾಟ ನಿಮ್ಮದು.

Advertisement

ಇಲ್ಲಿ ಕೂಡಾ ಬೆಳಕಿನ ಪಾತ್ರವೇ ದೊಡ್ಡದು. ಸಹಜ ಸೂರ್ಯನ ಬೆಳಕು, ಎಲೆಕ್ಟ್ರಾನಿಕ್‌ ಫ್ಲಾಶ್‌- ಬೌನ್‌ಸರ್ಸ್‌, ಅಂಬ್ರೆಲ್ಲಾ, ಸಾಫ್ಟ್ ಬಾಕ್ಸ್‌, ಬೀಂ ಲೈಟ್‌, ವಿವಿಧ ಬಗೆಯ ಎಲ್ಇ.ಡಿ. ದೀಪಗಳು, ವಿವಿಧ ಬಗೆಯಲ್ಲಿ ಪೂರಕ ಬೆಳಕನ್ನು ನೀಡುವ ಪ್ರತಿಫ‌ಲನಗಳು (Refl ectors), ವರ್ಣಮಯವಾದ ಬೇರೆ ಬೇರೆ ತರಹದ ಬೆಳಕಿನ ಮೂಲಗಳು, ಸಹಜ ಕ್ಯಾಂಡಲ್‌ ಲೈಟ್‌ಗಳು, ರಾತ್ರಿ ಚಂದ್ರನ ಬೆಳಕು, ಜೊತೆಗೆ ಕೆಲವು ರಂಗು ರಂಗಿನ ಶೋಧಕಗಳೂ( ಫಿಲ್ಟರ್ಸ್‌) ಉಪಯೋಗಕ್ಕೆ ಬರುತ್ತವೆ. ಇತರೆಬೇಕಾದ್ದು, ಕ್ಯಾಮೆರಾ ಉಪಕರಣಗಳು, ಟ್ರೈಪಾಡ್‌, ಲೈಟ್‌ ಕಂಟ್ರೋಲ್‌, ರಿಮೋಟ್‌ ಕಂಟ್ರೋಲ್‌ಗ‌ಳು, ಹೀಗೆಯೇ ಪಟ್ಟಿ ಬೆಳೆಯುತ್ತದೆ.

ಇದನ್ನೂ ಓದಿ: ಟ್ಯಾಟು ಹಾಕುವಾಗ ಇರಲಿ ನಿಮ್ಮಲ್ಲಿ ಎಚ್ಚರ!

ಇಲ್ಲಿ ನಾವು ಎರಡು ಬಗೆಯ ಸರಳವಾದ ಬೆಳಕಿನ ವ್ಯವಸ್ಥೆಯ ಬಗ್ಗೆ ತಿಳಿಯೋಣ. ಮೊದಲನೆಯ ಚಿತ್ರ, ಸಾಗರ ಪಟ್ಟಣದಲ್ಲಿದ್ದೂ ತಮ್ಮದೇ ಕಲಾತ್ಮಕ ಛಾಯಾಗ್ರಹಣದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರಕಾರನೆಂಬ ಬಿರುದು ಪಡೆದಿರುವ, ಈಗತಾನೇ ಅಂಚೆ ವಿಭಾಗದಿಂದ ಸ್ವಯಂ ನಿವೃತ್ತಿ ಪಡೆದಿರುವ ಜಿ.ಆರ್‌. ಪಂಡಿತ್‌ ಅವರು ಸೆರೆಹಿಡಿದಿರುವ ಸುಂದರ ರೂಪದರ್ಶಿಯ ಭಂಗಿ. ಇದರಲ್ಲಿ ಯಾವುದೋ ಶೃಂಗಾರ ಸಾಮಗ್ರಿಯ ಜಾಹೀರಾತಿಗೆ ಉಪಯೋಗವಾಗಬಲ್ಲ ಭಂಗಿಯನ್ನು ಗಮನಿಸಬಹುದು. ರೂಪದರ್ಶಿಯ ಕೈ ಬೆರಳುಗಳನ್ನೂ ಆಕರ್ಷಕವಾಗಿ ಬಳಸಿ, ಆಕೆಯ ಕಣ್ಣೋಟದ ತೀಕ್ಷ್ಣತೆಯನ್ನೂ ವೃದ್ಧಿಸಿ, ಪೂರಕವಾದ ಮುಖಭಾವವನ್ನು ಹೊಮ್ಮಿಸಿ, ಉತ್ತಮವಾದ ಬೆಳಕಿನ ಸಂಯೋಜನೆಯಲ್ಲಿ ಕ್ಯಾಮೆರಾದ ಕೋನವನ್ನೂ ಅಳವಡಿಸಿಕೊಂಡು, ಟ್ರೈಪಾಡ್‌ ಬಳಸಿ ಚಿತ್ರಗ್ರಹಣ ಮಾಡಿದ್ದಾರೆ. ಇದು ಫೋಟೋಗ್ರಾಫ‌ರ್‌ನ ಪ್ರಾವೀಣ್ಯತೆಯನ್ನು ದೃಢೀಕರಿಸುತ್ತವೆ. ಅಂತೆಯೇ, ಕಲಾತ್ಮಕ ಛಾಯಾಗ್ರಹಣ ಸ್ಪರ್ಧೆಗಳಲ್ಲೂ ಈ ಚಿತ್ರ ನಿರ್ಣಾಯಕರ ಮನ ಗೆದ್ದಿದೆ.

ಇಲ್ಲಿ ಬಳಸಿದ ಬೆಳಕು, ಆಚೀಚೆ ಬದಿಯ ಎರಡು ನಿಯಂತ್ರಿತ ಎಲೆಕ್ಟ್ರಾನಿಕ್‌ (Flash) ಸಾಫ್ಟ್ ಬಾಕ್ಸ್‌ಗಳು, ತಲೆಕೂದಲನ್ನು ಕೊಂಚವಾಗಿ ಹಿನ್ನೆಲೆಯಿಂದ ಬೇರ್ಪಡಿಸಲು ಬೇಕಾಗುವಷ್ಟು ತೆಳುವಾದ ಅಂಚು ಬೆಳಗಿಸುವ (Rim Light ) ಮತ್ತು ಕಂದುಬಣ್ಣದ ಹಿನ್ನೆಲೆಗಾಗಿಯಷ್ಟೇ ಮತ್ತೂಂದು ತೆಳುವಾದ ಪೂರಕ ಬೆಳಕು.

Advertisement

ಇದನ್ನೂ ಓದಿ: ದುಬಾರಿ ವಸ್ತುಗಳು : ಅಟೋಮ್ಯಾಟಿಕ್‌ ಲೇಸ್‌ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!

ಮತ್ತೂಂದು, ಸೆಮಿ ಪೊ›ಫೆಶನಲ್‌ ಮಾಡೆಲ್‌ ಚಿತ್ರಣ ನನ್ನದೇ ಸೆರೆ. ಬೆಳಕಿನ ಮೂಲ, ಎರಡು ಆಚೀಚೆ ಬದಿಗೆ ಒಂದೊಂದು ಟಂಗ್‌ ಸ್ಟನ್‌ ಎಲೆಕ್ಟ್ರಿಕ್‌ ಬಲ್ಬ್ ಗಳು. ಒಂದು 200 ವ್ಯಾಟ್ಸ್‌, ಮತ್ತೂಂದು 75 ವ್ಯಾಟ್ಸ್‌. ರೂಪದರ್ಶಿಯ ಮುಖದ ನೇರಕ್ಕೆ ಸುಮಾರು 20 ಡಿಗ್ರಿ ಎತ್ತರದಿಂದ. ಮುಖಭಾವದ ಗಾಂಭೀರ್ಯಕ್ಕೆ ಹೊಂದಿಕೊಳ್ಳುವ ಕಂದುಬಣ್ಣದ ದಪ್ಪ ಉಣ್ಣೆ ಬಟ್ಟೆಯನ್ನು 5-6 ಅಡಿ ದೂರದಲ್ಲಿ ಇಳೆಬಿಡಲಾಗಿತ್ತು. ಅದನ್ನೂ ಮತ್ತೂಂದು 75 ವ್ಯಾಟ್ಸ್‌ ಬಲ್ಬ್ ಬಳಸಿ ಮಂದವಾಗಿ ಕಾಣುವಂತೆ ಮಾಡಿದೆ. ರೂಪದರ್ಶಿಯ ತಲೆಗೂದಲಿನ ಜೊತೆ ಸಮ್ಮಿಳನವಾಗದಂತೆ (Merge) ಎಚ್ಚರವಹಿಸಲಾಗಿದೆ. ಟ್ರೈಪಾಡ್‌ ಮೇಲೆ ಕ್ಯಾಮೆರಾವನ್ನು ಭದ್ರಪಡಿಸಿಕೊಳ್ಳಲಾಗಿತ್ತು.

ಕೆ.ಎಸ್‌.ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next