Advertisement
ಇಂತಹ ಸಂಕಷ್ಟಗಳ ಸರಮಾಲೆ ಹೊತ್ತು ಮಳೆಗಾಲದ ಅವಧಿ ಕಳೆಯುವವರು ನಾಲ್ಕೂರು ಗ್ರಾಮದ ಉಜಿರಡ್ಕ ನಿವಾಸಿಗಳು. ತಮ್ಮೂರಿಗೆ ತೆರಳುವ ರಸ್ತೆ ಮಧ್ಯೆ ಹರಿಯುವ ಹೊಳೆಗೆ ಸೇತುವೆ ನಿರ್ಮಿಸಿ ಕೊಡುವಂತೆ ಅವರು ಬೇಡಿಕೆ ಇರಿಸಿ ದಶಕಗಳೇ ಕಳೆದಿವೆ. ಇದುವರೆಗೆ ಈಡೇರಿಲ್ಲ. ಭರವಸೆಗಳ ಮಹಾಪೂರವೇ ಹರಿದು ಬಂದಿದ್ದರೂ ಅವೆಲ್ಲವೂ ಇಲ್ಲಿ ಹುಸಿಯಾಗಿವೆ.
ಗುತ್ತಿಗಾರು ಗ್ರಾ.ಪಂ. ವ್ಯಾಪ್ತಿಯಲ್ಲಿದೆ ಉಜಿರಡ್ಕ ಪ್ರದೇಶ. ಇಲ್ಲಿ ದಶಕಗಳಿಂದ ಹಲವಾರು ಬಡ ಕುಟುಂಬಗಳು ವಾಸಿಸುತ್ತಿವೆ. ಪರಿಶಿಷ್ಟ ಜಾತಿ ಜತೆ ಇತರ ವರ್ಗದ ಕುಟುಂಬಗಳು ಇಲ್ಲಿವೆ. ಕೂಲಿ ಕೆಲಸವೇ ಇವರಿಗೆ ಜೀವನಾಧಾರ. ದಿನ ನಿತ್ಯದ ವ್ಯಾವಹಾರಿಕ ಚಟುವಟಿಕೆಗಳಿಗೆ ಸಮೀಪದ ಯೇನೆಕಲ್ಲು, ಸುಬ್ರಹ್ಮಣ್ಯಕ್ಕೆ ತೆರಳಲು ಇಲ್ಲಿಯ ನಾಗರಿಕರು ಸೇತುವೆ ಇಲ್ಲದ ಕಾರಣ 1 ಕಿ.ಮೀ. ಸಂಚಾರಕ್ಕೆ ಸುತ್ತು ಬಳಸಿ 20 ಕಿ.ಮೀ. ದೂರವಾಗಿ ತೆರಳಬೇಕು.
Related Articles
ನಿವಾಸಿಗಳು ತೆರಳುವ ರಸ್ತೆಗೆ ಅಡ್ಡಲಾಗಿ ಹರಿಯುವ ಕಲ್ಲಾಜೆ ಹೊಳೆ ದಾಟಬೇಕು. ಮಳೆಗಾಲದಲ್ಲಿ ಈ ಹೊಳೆ ತುಂಬಿ ಹರಿಯುತ್ತದೆ. ಮಹಿಳೆಯರು, ಮಕ್ಕಳು, ವೃದ್ಧರು ಸಹಿತ ನಾಗರಿಕರು ಇಲ್ಲಿ ಸಂಚಾರದ ವೇಳೆ ನರಕಯಾತನೆ ಅನುಭವಿಸುತ್ತಾರೆ. ಸ್ಥಳೀಯರು ಸೇರಿಕೊಂಡು ಮಳೆಗಾಲದ ವೇಳೆ ಇಲ್ಲಿ ತಮ್ಮ ಅನುಕೂಲಕ್ಕಾಗಿ ತಾತ್ಕಾಲಿಕ ಮರದ ಸೇತುವೆ ನಿರ್ಮಿಸಿಕೊಳ್ಳುತ್ತಾರೆ. ಈ ಬಾರಿ ಅದೂ ಆಗಿಲ್ಲ. ಇಲ್ಲಿ ಸೇತುವೆ ನಿರ್ಮಾಣದ ಅಗತ್ಯವಿದೆ. ಇದರಿಂದ ಸುತ್ತು¤ ಬಳಸಿ ಸಾಗುವ ಸಂಕಟ ದೂರವಾಗುತ್ತದೆ. ಜತೆಗೆ ಸಮಯ ಉಳಿತಾಯವೂ ಆಗುತ್ತದೆ. ಮಳೆಗಾಲದಲ್ಲಿ ಮಕ್ಕಳು ಶಾಲೆಗೆ ತೆರಳುವಾಗ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ಮರದ ತೂಗುಸೇತುವೆ ಮೇಲೆ ದಾಟುವ ಪ್ರಯತ್ನ ನಡೆಸಿ ಅನೇಕ ಸಂದರ್ಭ ಅನಾಹುತ ಸಂಭವಿಸಿದ್ದೂ ಉಂಟು.
Advertisement
ದೇಗುಲಕ್ಕೂ ಹತ್ತಿರ ದಾರಿಮಂಜೇಶ್ವರ – ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಯೇನೆಕಲ್ಲು ಬೂದಿಪಳ್ಳ ಎನ್ನುವಲ್ಲಿ ಬಲ ಭಾಗಕ್ಕೆ ರಸ್ತೆ ಕವಲೊಡೆಯುತ್ತದೆ. ಸೇತುವೆ ಆಗಬೇಕಿರುವ ರಸ್ತೆ ಮೂಲಕ ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೂ ತೆರಳಲು ಅನುಕೂಲವಿದೆ. ಐತಿಹಾಸಿಕ ಹಿನ್ನೆಲೆ ಹೊಂದಿದ ಈ ದೇವಸ್ಥಾನಕ್ಕೆ ಸುಬ್ರಹ್ಮಣ್ಯ, ಪಂಜ, ಯೇನೆಕಲ್ಲು, ಬಳ್ಪ, ಕಡಬ ಭಾಗದಿಂದ ಬರುವ ಭಕ್ತರಿಗೆ ವರ್ಷವಿಡೀ ತುಂಬಿ ಹರಿಯುವ ಕಲ್ಲಾಜೆ ಹೊಳೆ ಅಡ್ಡಿಯಾಗುತ್ತಿದೆ. ಹೀಗಾಗಿ ಸೇತುವೆ ನಿರ್ಮಾಣದ ಕೂಗು ಹಿಂದಿನಿಂದಲೇ ಇದೆ. ಹೇಳಿದರೂ ಪ್ರಯೋಜನವಿಲ್ಲ
ಭರವಸೆ ನೀಡಿ ಸೇತುವೆ ನಿರ್ಮಾಣ ಕೈ ಬಿಡುತ್ತಿರುವುದು ಬೇಸರ ತಂದಿದೆ. ಇದರಿಂದ ನಾವು ವಂಚಿತರಾಗಿದ್ದೇವೆ. ಮಳೆಗಾಲದಲ್ಲಿ ನಾವು ತುಂಬಾ ತೊಂದರೆ ಅನುಭವಿಸುತ್ತಿರುತ್ತೇವೆ. ನಮ್ಮ ಕಷ್ಟ ಯಾರಲ್ಲಿ ಹೇಳಿದರೂ ಸುಖವಿಲ್ಲ ಎಂದು ಚಿನ್ನಮ್ಮ ಉಜಿರಡ್ಕ ತಿಳಿಸಿದ್ದಾರೆ. ಓಡಾಡಿದ್ದೆ ಬಂತು
ಸೇತುವೆ ಇಲ್ಲದೆ ಇಲ್ಲಿಯ ನಿವಾಸಿ ಗಳು ಜನಪ್ರತಿನಿಧಿಗಳ ಮುಂದೆ ಅಳಲು ತೋಡಿಕೊಂಡಿದ್ದರು. ಪ್ರತಿ ಚುನಾವಣೆ ವೇಳೆ ಪಕ್ಷಗಳ ಮುಖಂಡರು ಭರವಸೆ ನೀಡಿದ್ದರು. ಸ್ಥಳೀಯರು ಬೆಂಗಳೂರಿಗೆ ತೆರಳಿ ಶಾಸಕರು, ಸಂಸದರು, ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಹತ್ತಾರು ಬಾರಿ ಓಡಾಟ ನಡೆಸಿದ್ದರೂ, ಸೇತುವೆ ಕನಸು ಮಾತ್ರ. ಗಮನಕ್ಕೆ ತಂದಿದ್ದೇವೆ
ಅಲ್ಲಿ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಆವಶ್ಯಕತೆ ಇದೆ. ಗ್ರಾ.ಪಂ. ಕಡೆಯಿಂದ ಅಷ್ಟು ಹಣ ಹೊಂದಿಸಲು ಸಾಧ್ಯವಾ ಗದು. ಶಾಸಕ, ಸಂಸದರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅನುದಾನ ಬರಬಹುದೆನ್ನುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
– ಅಚ್ಯುತ ಗುತ್ತಿಗಾರು
ಅಧ್ಯಕ್ಷರು, ಗುತ್ತಿಗಾರು ಗ್ರಾ.ಪಂ. ಬಾಲಕೃಷ್ಣ ಭೀಮಗುಳಿ