Advertisement
ಕೋವಿಡ್ ಲಾಕ್‌ಡೌನ್ ಹಂತ ಹಂತವಾಗಿ ತೆರವುಗೊಂಡು ಎಲ್ಲ ಔದ್ಯೋಗಿಕ ರಂಗಗಳಲ್ಲಿ ಚಟುವಟಿಕೆ ಚುರುಕುಗೊಳ್ಳುತ್ತಿವೆ. ಆದರೆ ಸರ್ಕಾರಿಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಬದುಕಿನಲ್ಲಿ ಮಾತ್ರ ಯಾವ ಚೇತರಿಕೆಯೂ ಕಂಡು ಬಂದಿಲ್ಲ. ಸರ್ಕಾರದ ಕಠೊರ ನಡೆಯಿಂದ ಸಾವಿರಾರು ಅತಿಥಿ ಉಪನ್ಯಾಸಕರು ಇರುವ ಕೆಲಸವನ್ನುಕಳೆದುಕೊಂಡು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಸರ್ಕಾರಿ ಪದವಿ ಕಾಲೇಜುಗಳು ಕಾರ್ಯಾರಂಭ ಮಾಡಿದ್ದು ಪ್ರಸಕ್ತ ಸಾಲಿನಲ್ಲಿ ಶೇ.50ರಷ್ಟು ಮಾತ್ರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ, ಅನುಮತಿ ನೀಡಿದ್ದರಿಂದ ಇನ್ನುಳಿದ ಅರ್ಧದಷ್ಟು ಉಪನ್ಯಾಸಕರ ಕೆಲಸಕ್ಕೆ ಕತ್ತರಿ ಬಿದ್ದಿದೆ.
Related Articles
Advertisement
ಈ ಆದೇಶದ ಪ್ರಕಾರ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಎಂಜಿನಿಯರಿಂಗ್ ಕಾಲೇಜುಗಳು ನವೆಂಬರ್‌ನಿಂದಲೇ ಅತಿಥಿ ಉಪನ್ಯಾಸಕರನ್ನು ಮುಂದುವರಿಸಿ ಸೇವೆ ಪಡೆಯುತ್ತಿವೆ. ಆದರೆ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳಲ್ಲಿ ಶೇ.50ರಷ್ಟು ಮಾತ್ರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದ್ದರಿಂದ ಈ ಆದೇಶ ಪಾಲನೆಗೆ ಅಡ್ಡಿಯಾಗಿದೆ. ಸಚಿವರ ಆದೇಶಕ್ಕೆ ಆರ್ಥಿಕಇಲಾಖೆ ಸಮ್ಮತಿ ನೀಡಿಲ್ಲ ಎಂಬ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಆಯುಕ್ತರು ಜ.19ರಂದು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅಧ್ಯಯನಕ್ಕೂ ಅಡ್ಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ.70ರಷ್ಟು ಅತಿಥಿ ಉಪನ್ಯಾಸಕರಿದ್ದು ಶೇ.30ರಷ್ಟು ಮಾತ್ರ ಕಾಯಂ ಉಪನ್ಯಾಸಕರಿದ್ದಾರೆ.ಪ್ರಾಂಶುಪಾಲರು ಹಾಗೂ ಕಾಯಂ ಉಪನ್ಯಾಸಕರಿಗ ಎನ್‌ಸಿಸಿ, ಎನ್‌ಎಸ್‌ಎಸ್, ಕಾಲೇಜು ಶಿಕ್ಷಣ ಇಲಾಖೆ ಹಾಗೂ ನ್ಯಾಕ್ ಚಟುವಟಿಕೆ ಕಾರ್ಯಭಾರ ಹೆಚ್ಚಾಗಿರುವುದರಿಂದ ಬಹುತೇಕ ಕಾಲೇಜುಗಳು ಬೋಧನೆಗೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಈಗಾಗಲೇ ಇಲಾಖೆ ಪಠ್ಯಕ್ರಮ ಪೂರ್ಣಗೊಳಿಸಲು ಸಹ ಗಡುವು ನಿಗದಿಪಡಿಸಿದೆ. ಹೀಗಾಗಿ ಅತಿಥಿ ಉಪನ್ಯಾಸಕರನ್ನು ಕಡಿತಗೊಳಿಸಿದಷ್ಟು ವಿದ್ಯಾರ್ಥಿಗಳ ಅಧ್ಯಯನಕ್ಕೆ ಹೊಡೆತ ಬೀಳಲಿದೆ.
ಎಚ್.ಕೆ. ನಟರಾಜ