Advertisement

ಎಡಪಕ್ಷಕ್ಕೆ ಕೇವಲ 5 ಕ್ಷೇತ್ರ

12:39 AM May 25, 2019 | Team Udayavani |
ನವದೆಹಲಿ: ದೇಶದ ಎಡಪಕ್ಷಗಳು ಈ ಬಾರಿ ಅತ್ಯಂತ ಹೀನಾಯ ಸೋಲು ಕಂಡಿವೆ. ಕಳೆದ ಆರು ದಶಕಗಳಲ್ಲಿ ಕುಸಿಯುತ್ತಲೇ ಬಂದ ಎಡಪಕ್ಷಗಳ ಅಸ್ತಿತ್ವವೇ 2019ರ ಚುನಾವಣೆಯಲ್ಲಿ ಅಲುಗಾಡುವಂತಾಗಿದೆ. ಈ ಬಾರಿ ಕೇವಲ 5 ಕ್ಷೇತ್ರಗಳಲ್ಲಿ ಎಡಪಕ್ಷಗಳು ಗೆಲುವು ಸಾಧಿಸಲು ಸಾಧ್ಯವಾಗಿದೆ. ಹಿಂದೊಮ್ಮೆ ಎಡಪಕ್ಷಗಳ ಕೇಂದ್ರೀಯ ಸ್ಥಾನವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಒಂದೇ ಒಂದು ಕ್ಷೇತ್ರವನ್ನೂ ಗೆಲ್ಲಲು ಸಧ್ಯವಾಗಿಲ್ಲ. ಅಷ್ಟೇ ಅಲ್ಲ ಮತಗಳ ಪ್ರಮಾಣವೂ 2014ರಲ್ಲಿ ಶೇ. 23 ರಿಂದ ಶೇ. 7ಕ್ಕೆ ಕುಸಿದಿದೆ. ಕೇರಳದಲ್ಲಿ ಒಂದು ಕ್ಷೇತ್ರಕ್ಕೆ ಎಡಪಕ್ಷ ತೃಪ್ತಿಪಟ್ಟುಕೊಂಡಿದೆ. ಎಡಪಕ್ಷ ಚುನಾವಣೆಯನ್ನು ಎದುರಿಸಲು ಆರಂಭಿಸಿದಾಗಿನಿಂದ ಇದೇ ಮೊದಲ ಬಾರಿಗೆ ಒಂದಂಕಿಗೆ ಸಿಪಿಎಂ ಹಾಗೂ ಇತರ ಎಡಪಂಥದ ಪಕ್ಷಗಳು ಕುಸಿದಿವೆ. 1960 ಸಮಯದಲ್ಲಿ ಪ್ರಮುಖ ವಿಪಕ್ಷವಾಗಿದ್ದ ಇವು, ಕಾಲಕ್ರಮೇಣ ಕುಸಿಯುತ್ತ ಸಾಗಿದ್ದವು.ಆದರೆ 2004ರಲ್ಲಿ ಅತ್ಯಧಿಕ ಅಂದರೆ 59 ಕ್ಷೇತ್ರಗಳಲ್ಲಿ ಗೆದ್ದಿತ್ತಾದರೂ, ಅಲ್ಲಿಂದ ನಂತರ ನೆಲಕಚ್ಚುತ್ತಲೇ ಸಾಗಿತ್ತು.
Advertisement

Udayavani is now on Telegram. Click here to join our channel and stay updated with the latest news.

Next