Advertisement

ಕೊನೆಗೂ ನೆಲಸಮವಾದ ಜಿಲ್ಲಾಸ್ಪತ್ರೆ ಕ್ಯಾಂಟೀನ್‌

05:02 PM Sep 01, 2021 | Team Udayavani |

ಮಂಡ್ಯ: ಕಳೆದ ಹಲವು ವರ್ಷಗಳಿಂದ ವಿವಾದಕ್ಕೆಡೆ ಮಾಡಿಕೊಟ್ಟಿದ್ದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನ ಮುಂಭಾಗದಲ್ಲಿದ್ದ ಕ್ಯಾಂಟೀನ್‌ನ್ನು ನ್ಯಾಯಾಲಯದ ಆದೇಶದಂತೆ ಕೊನೆಗೂ ತೆರವುಗೊಳಿಸಲಾಗಿದೆ. ಕ್ಯಾಂಟಿನ್‌ ತೆರವು ಮಾಡಿ ರೋಗಿಗಳ ಸಂಬಂಧಿಕರು ಉಳಿದುಕೊಳ್ಳಲು
ಉತ್ತಮ ತಂಗುದಾಣ ನಿರ್ಮಾಣ ಮಾಡಬೇಕು ಎಂಬ ಕೂಗು ಕೇಳಿ ಬಂದಿತ್ತು.ಅದರಂತೆಮಂಗಳವಾರ ಪೊಲೀಸ್‌ ಬಿಗಿ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.

Advertisement

ತಂಗುದಾಣ ಇದ್ದ ಜಾಗ: ಹೆರಿಗೆ ವಾರ್ಡ್‌ನ ಮುಂಭಾಗದಲ್ಲಿಯೇ ಮೊದಲು ತಂಗುದಾಣ ಇತ್ತು. ಹೆರಿಗೆಗೆ ಬರುವ ಗರ್ಭಿಣಿಯರು, ರೋಗಿಗಳ ಸಂಬಂಧಿ ಕರಿಗೆ ಆಶ್ರಯತಾಣವಾಗಿತ್ತು. ಆದರೆ ನಂತರ ಅದನ್ನು ಕ್ಯಾಂಟೀನ್‌ ಆಗಿ ಬದಲಾವಣೆ ಮಾಡಲಾಗಿತ್ತು.

ಟೆಂಡರ್‌ ಮುಗಿದ್ದಿದ್ದರೂ ಖಾಲಿ ಮಾಡದ ಕ್ಯಾಂಟೀನ್‌: ಮೂರು ವರ್ಷಗಳ ಅವಧಿಗೆ ಟೆಂಡರ್‌ ನೀಡಲಾಗಿತ್ತು. ಅದರಂತೆ ಕಳೆದ 2020ರ ಮಾರ್ಚ್‌ಗೆ ಟೆಂಡರ್‌ ಅವಧಿ ಮುಗಿದಿತ್ತು. ಆದರೂ ಟೆಂಡರ್‌ ಪಡೆದಿದ್ದ ವ್ಯಕ್ತಿ ಖಾಲಿ ಮಾಡಿರಲಿಲ್ಲ. ಖಾಲಿ ಮಾಡುವಂತೆ ಹಲವು ಬಾರಿ ನೋಟಿಸ್‌ ನೀಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿತ್ತು. ಟೆಂಡರ್‌ ಪಡೆದಿದ್ದ ವ್ಯಕ್ತಿಯೇ ಕೋರ್ಟ್‌ ಮೆಟ್ಟಿಲೇರಿದ್ದರು. ಅದರಂತೆ ಒಂದೂವರೆ ವರ್ಷಗಳ ಕಾಲ ವಿಚಾರಣೆನಡೆದಿದೆ. ಮಂಗಳವಾರ ಪೊಲೀಸ್‌ ಬಿಗಿ ಭದ್ರತೆ ಹಾಗೂವಿರೋಧದ ನಡುವೆಯೂ ತೆರವುಗೊಳಿಸಲಾಗಿದೆ.

ಇದನ್ನೂ ಓದಿ:ಕೈಗಾರಿಕಾ ಪ್ರದೇಶದಲ್ಲಿ ವಿಶ್ವದರ್ಜೆಯ ಮೂಲಭೂತ ಸೌಕರ್ಯ ಕಲ್ಪಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ

ಅಕ್ರಮವಾಗಿ ಕ್ಯಾಂಟೀನ್‌ ಆಗಿ ಬದಲಾವಣೆ: ಕ್ಯಾಂಟೀನ್‌ ಸ್ಥಾಪನೆಗೆ ಆಸ್ಪತ್ರೆಯ ಆವರಣದಲ್ಲಿಯೇ ಇರುವ ರಕ್ತನಿಧಿ ಕೇಂದ್ರದ ಬಳಿ ಸ್ಥಳಾವಕಾಶ ನೀಡಲಾಗಿತ್ತು. ಆದರೆ ರಾಜಕೀಯ ಪ್ರಭಾವ ಬಳಸಿ ತಂಗುದಾಣವನ್ನೇ ಕ್ಯಾಂಟೀನ್‌ ಆಗಿ ಪರಿವರ್ತನೆ ಮಾಡಿಕೊಳ್ಳಲಾಗಿತ್ತು.
ರೋಗಿಗಳಿಗೆ ತೊಂದರೆ: ತಂಗುದಾಣ ಕ್ಯಾಂಟೀನ್‌ ಆಗಿ ಬದಲಾಗಿದ್ದರಿಂದ ರೋಗಿಗಳು ಹಾಗೂ ಸಂಬಂಧಿಕರು ಮಳೆ, ಬಿಸಿಲು, ಚಳಿಯಿಂದ ನರಳಾಡುವಂತಾಗಿತ್ತು. ರಾತ್ರಿ ವೇಳೆ ರೋಗಿಗಳ ಸಂಬಂಧಿಕರು ಮಲಗಲು ಸ್ಥಳವೇ ಇರಲಿಲ್ಲ. ಮಳೆ ಬಂದರೆ ರೋಗಿಗಳು ಹಾಗೂ ಅವರ ಕಡೆಯವರ ಪರಿಸ್ಥಿತಿ ಹೇಳತೀರದಾಗಿತ್ತು. ಆಸ್ಪತ್ರೆಯ ಪಡಸಾಲೆಗಳಲ್ಲಿಯೇ ಮಲಗುವ ಪರಿಸ್ಥಿತಿ ಎದುರಾಗಿತ್ತು. ಕ್ಯಾಂಟೀನ್‌ ತೆರವುಗೊಳಿಸಿ ರೋಗಿಗಳು ಹಾಗೂ ಸಂಬಂಧಿಕರಿಗೆ ತಂಗುದಾಣ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದರು.

Advertisement

ದಿಶಾ ಸಭೆಯಲ್ಲೂ ಚರ್ಚೆ
ಸಚಿವ ಕೆ.ಸಿ.ನಾರಾಯಣಗೌಡ ಅವರ ಪ್ರಗತಿ ಪರಿಶೀಲನೆ ಸಭೆ ಹಾಗೂ ಸಂಸದೆ ಸುಮಲತಾ ಅಂಬರೀಶ್‌ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ದಿಶಾ
ಸಭೆಗಳಲ್ಲೂ  ಕ್ಯಾಂಟೀನ್‌ ತೆರವುಗೊಳಿಸುವಂತೆ ಒತ್ತಾಯಕೇಳಿ ಬಂದಿದ್ದವು. ಪ್ರತಿ ದಿಶಾ ಸಭೆಯಲ್ಲೂ ಸಮಿತಿ ಸದಸ್ಯೆ ಅರುಣಕುಮಾರಿ ಧ್ವನಿ
ಎತ್ತಿದ್ದರು. ಅದರಂತೆಕಳೆದ ಬಾರಿ ನಡೆದ ದಿಶಾ ಸಭೆಯಲ್ಲಿ ಮಿಮ್ಸ್‌ ನಿರ್ದೇಶಕ ಡಾ.ಎಂ.ಆರ್‌. ಹರೀಶ್‌ ತೆರವುಗೊಳಿಸುವ ಭರವಸೆ ನೀಡಿದ್ದರು.

ಆಸ್ಪತ್ರೆ ಆವರಣದಲ್ಲಿ ತಂಗುದಾಣ ಇಲ್ಲದೇ ರೋಗಿಗಳು, ಸಂಬಂಧಿಕರು ಪರಿತಪಿಸುವಂತಾಗಿತ್ತು. ಮಳೆಗಾಲ, ಚಳಿಗಾಲ, ಬೇಸಿಗೆಯಲ್ಲೂ ರೋಗಿಗಳು ಹಾಗೂ ಸಂಬಂಧಿಕರು ಸೂಕ್ತ ಸೌಲಭ್ಯವಿಲ್ಲದೆ, ನರಳುತ್ತಿದ್ದರು. ಮಳೆಗಾಲದಲ್ಲಿ ಮಳೆಯಲ್ಲಿಯೇ ನೆನೆಯುತ್ತಾ ಹೊರಗೆ ಕೂರ ಬೇಕಿತ್ತು. ಈ ಬಗ್ಗೆ ದಿಶಾ ಸಭೆಗಳಲ್ಲೂ ಒತ್ತಾಯ ಮಾಡಿದ್ದರಿಂದ ಇಂದು(ಮಂಗಳವಾರ) ತೆರವುಗೊಳಿಸಲಾಗಿದೆ.
-ಅರುಣಕುಮಾರಿ, ದಿಶಾ ಸಮಿತಿ ಸದಸ್ಯೆ, ಮಂಗಲ

ಕ್ಯಾಂಟೀನ್‌ ತೆರವುಗೊಳಿಸಲಾಗಿದೆ. ಹಿಂದೆ ಇದ್ದ ಹಾಗೆ ಉತ್ತಮ ತಂಗುದಾಣ ಮಾಡಿ ರೋಗಿಗಳಿಗೆ ಅನುಕೂಲ ಮಾಡಿಕೊಡಲಾಗುವುದು. 24
ಗಂಟೆಗಳಕಾಲ ಶುದ್ಧಕುಡಿಯುವ ನೀರು ಹಾಗೂ ಬಿಸಿ ನೀರು ಸೌಲಭ್ಯ ಕಲ್ಪಿಸಲಾಗುವುದು.
-ಡಾ.ಎಂ.ಆರ್‌.ಹರೀಶ್‌, ನಿರ್ದೇಶಕರು,
ಮಿಮ್ಸ್‌, ಮಂಡ್ಯ

 

Advertisement

Udayavani is now on Telegram. Click here to join our channel and stay updated with the latest news.

Next