Advertisement

“ದಾಡಿ’ತಪ್ಪಿಸು ದೇವರೇ!

06:02 PM Jun 17, 2019 | mahesh |

ಕೇವಲ ಎಂಟು ದಿನ ಗಡ್ಡ ಬಿಟ್ಟರೇನೇ ಗಡ್ಡದ ಭೂತದಂತೆ ಕಾಣ್ತಿನಿ. ಅಂಥದ್ದರಲ್ಲಿ, ತಿಂಗಳುಗಳ ಗಟ್ಟಲೆ ಅಂದ್ರೆ..? ಒಬ್ಬ ಮಠಾಧಿಪತಿಗೆ ಬರಬೇಕಾದ ಸರ್ವ ಲಕ್ಷಣಗಳೂ ಮುಖದಲ್ಲಿ ನಿಧಾನಕ್ಕೆ ಮೂಡುತ್ತಿದ್ದವು. ಕೆಲವು ಗೆಳೆಯರಂತೂ, “ತಮ್ಮಾ… ಮಠ ಸೇರ್ಕೊ ಮಠ…’ ಅಂತ ಪುಕ್ಕಟೆ ಸಲಹೆ ನೀಡುತ್ತಿದ್ದರು…

Advertisement

ಆಗ, ಅವಳು
ಕೈಕೊಟ್ಟಳೆಂದು
ಗಡ್ಡ ಬಿಟ್ಟೆ…
ಈಗ, ಇವಳು ಗಡ್ಡ
“ನನಗಡ್ಡ’ ಎನ್ನುತ್ತಿರುವಳಲ್ಲಾ..?
ಸುಮ್ಮನೆ ಬೇಜಾರಾಗಿದ್ದಕ್ಕೆ ಗಡ್ಡ ಬಿಟ್ಟಿದ್ದೆ. ಬಹುಶಃ ನನ್ನ ಸೋಮಾರಿತನವೇ ಅದಕ್ಕೆ ಗೊಬ್ಬರವಾಗಿತ್ತೋ ಏನೋ. ಎಲ್ಲರೂ ಕೇಳಿಯೇ ಕೇಳುತ್ತಿದ್ದರು, “ಯಾರಾದರೂ ಕೈ ಕೊಟ್ಟರಾ..?’ ಎಂದು. ಇಲ್ಲ, ಇಲ್ಲ ಎಂದು ಗೋಣು ಅತ್ತಿತ್ತ ಮಾಡುತ್ತಾ, ನನಗೂ ಸಾಕಾಗಿ ಹೋಗಿತ್ತು. ಸ್ವಲ್ಪ ಬರೆಯೋ ಚಟ ಇದ್ದಿದ್ದರಿಂದ, ಗಡ್ಡಬಿಟ್ಟು ಸಾಹಿತಿಯಂತೆ ಕಾಣಬೇಕು ಅಂತ ಅಂದುಕೊಂಡಿದ್ದೆ. “ವೃಶ್ಚಿಕ ಮುನಿ’ ಅಂತಲೂ ಕಾವ್ಯನಾಮ ಇಟ್ಟುಕೊಂಡಿದ್ದೆ. “ಕೆಲಸವಿಲ್ಲದಿದ್ದಾಗ ಗಡ್ಡ ಕೆರೆದರೆ ಹೊಸ ಕವಿತೆ ಹುಟ್ಟುತ್ತೆ’ ಅಂತ ಎಲ್ಲೋ ಓದಿದ್ದ ನೆನಪು. ಗಡ್ಡ ಬಿಟ್ಟಿದ್ದೇ ಬಂತು, ಒಂದೂ ಕವಿತೆ ಹುಟ್ಟಲಿಲ್ಲ.

ಗಡ್ಡ ಬಿಡುವುದು ದೊಡ್ಡ ಮಾತಲ್ಲ. ಅದನ್ನು ಮೆಂಟೇನ್‌ ಮಾಡುವುದು ಇದೆಯಲ್ಲ, ಅದು ನಿಜವಾದ ಕಲೆ. ಮತ್ತೆ ಅದು ಕಷ್ಟ ಕೂಡ. ಹೇಗೋ ಒಬ್ಬಳು, ಗರ್ಭಿಣಿ ತನ್ನೊಡಲಿನ ಕೊಸನ್ನು ಪೊರೆಯುವಂತೆ, ನಾನು ಕೆಲವು ತಿಂಗಳ ಮಟ್ಟಿಗೆ ಗಡ್ಡ ಕಾಪಾಡಿಕೊಂಡಿದ್ದೆ. ಕೇವಲ ಎಂಟು ದಿನ ಗಡ್ಡ ಬಿಟ್ಟರೇನೇ ಗಡ್ಡದ ಭೂತದಂತೆ ಕಾಣಿ¤àನಿ. ಅಂಥದ್ದರಲ್ಲಿ, ತಿಂಗಳುಗಳ ಗಟ್ಟಲೆ ಅಂದ್ರೆ..? ಒಬ್ಬ ಮಠಾಧಿಪತಿಗೆ ಬರಬೇಕಾದ ಸರ್ವ ಲಕ್ಷಣಗಳೂ ಮುಖದಲ್ಲಿ ನಿಧಾನಕ್ಕೆ ಮೂಡುತ್ತಿದ್ದವು. ಕೆಲವು ಗೆಳೆಯರಂತೂ, “ತಮ್ಮಾ… ಮಠ ಸೇರ್ಕೊ ಮಠ…’ ಅಂತ ಪುಕ್ಕಟೆ ಸಲಹೆ ನೀಡುತ್ತಿದ್ದರು. ಅಯ್ಯೋ, ದೇವರೇ! ನನ್ನಮನದಾಳದ ಇಂಗಿತವನ್ನು ಯಾರೂ ಅರ್ಥನೇ ಮಾಡಿಕೊಳ್ಳುತ್ತಿಲ್ವಲ್ಲ ಎಂಬ ಬೇಸರ ಯಾಕೋ ಬೆನ್ನೇರಿ ಕೂತಿತು.

ಗಡ್ಡ ಮುಂದುವರಿಸಲು ಇಷ್ಟವೇ ಇತ್ತು. ಆದರೆ, ಈ ಬೇಸಿಗೆ ಕೊಡುವ ಕಾಟ ತಾಳಲಾರದೇ, ಕೊನೆಗೂ ಒಂದು ಶುಭ ಮುಹೂರ್ತ ನೋಡಿ, ûೌರಿಕನ ಅಂಗಡಿಗೆ ಹೋಗಿದ್ದೆ. ಅಷ್ಟುದ್ದ ಗಡ್ಡ ಬಿಟ್ಟಿದ್ದನ್ನು ನೋಡಿಯೂ ಆ ಕೌÒರಿಕ, “ಏನ್‌ ಸರ, ಏನ್‌ ಆಗ್ಬೇಕಿತ್ರೀ?’ ಅಂತ ಕೇಳಿದ. “ಗಡ್ಡ ತೆಗೀಯಪ್ಪಾ…’ ಅಂದೆ. “ಸರ ಬ್ಯಾಡ್ರೀ… ನಿಮ್ಮ ಮಾÌರೆ, ಗಡ್ಡ ಇದ್ರೇನೆ ಚೊಲೊ ಕಾಣೆôತ್ರೀ… ಥೇಟ್‌ ಬುದ್ಧಿಜೀವಿ ಥರನಾ ಕಾಣತೀರಿ ಸರ…’ ಅಂತ ರಾಗ ಎಳೆದ. ಬಾಗಿಲೊಳಗೆ ಕಾಲಿಟ್ಟರೆ ಸಾಕು, ಫ‌ುಲ್‌ ಶೇವ್‌ ಮಾಡೋಣ ಅಂತ ಕಾಯುವ ಈ ಬ್ಯೂಟಿಪಾರ್ಲರ್‌ಗಳ ಯುಗದಲ್ಲಿ, ಈತ ಬಹಳ ಆಶ್ಚರ್ಯಕರವಾಗಿ ಕಂಡ.

ಗಡ್ಡ ಬಿಟ್ಟು ತುಂಬಾ ನೊಂದಿದ್ದರಿಂದ, ಕೇಳಬಾರದ ಮಾತನ್ನೆಲ್ಲ ಕೇಳಿದ್ದರಿಂದ, ನಾನು ಪಟ್ಟು ಬಿಡಲಿಲ್ಲ. ಗಡ್ಡ ತೆಗೆಯುವಂತೆ, ಅವನನ್ನೇ ಕನ್ವಿನ್ಸ್‌ ಮಾಡತೊಡಗಿದೆ. “ಅಲ್ಲಪ್ಪಾ, ಎಲ್ಲರೂ ನಂಗ ಏನಾಗೈತಿ, ಹಿಂಗ್ಯಾಕ ಗಡ್ಡ ಬಿಟ್ಟಿ ಅಂತ ಕೇಳಾಕಹತ್ಯಾರ. ಅವರಿಗೆ ಉತ್ತರ ಹೇಳಿ ಹೇಳಿ ಸಾಕಾಗಿ ಹೋಗೈತಿ. ತೆಗೆದುಬಿಟ್ಟು, ಪುಣ್ಯ ಕಟ್ಕೊರಿಯಪ್ಪಾ…’ ಅಂತ ನಮ್ಮದೇ ಉತ್ತರ ಕರ್ನಾಟಕ ಶೈಲಿಯಲ್ಲಿ ಹೇಳಿದೆ. ಕೌÒರಿಕ ಕೊನೆಗೂ ಒಪ್ಪಿ, ಒಲ್ಲದ ಮನಸ್ಸಿನಿಂದ ನನ್ನ ಗಡ್ಡಕ್ಕೆ ಕೈಹಾಕಿದ. ಕನ್ನಡಿ ಮುಂದೆ ನಿಂತು, ತಾಸುಗಟ್ಟಲೆ ತಿದ್ದಿ ತೀಡಿ, ಒಂದು ರೂಪಕ್ಕೆ ತಂದು ನಿಲ್ಲಿಸಿದ ಗಡ್ಡಕ್ಕೆ ಅದೇ ಕೊನೆಯ ದಿನವಾಗಿತ್ತು. ಕಾಲುಬುಡದಲ್ಲಿ ಬಿದ್ದ ಗಡ್ಡದ ರಾಶಿಯನ್ನು ನೋಡಲಾಗದೇ, ಅಲ್ಲಿಂದ ದುಃಖದಲ್ಲಿ ಬಂದಿದ್ದೆ.

Advertisement

ಮಾರನೇ ದಿನ ಕಾಲೇಜು ಆರಂಭವಿತ್ತು. ಹೊಸ ಹುಡಗರು, ಹೊರ ಹುರುಪು, ಹೊಸ ರೂಪ… ಅವೆಲ್ಲವೂ ಅದ್ಭುತವೇ. ನಾನೂ ಅದೇ ಹುರುಪಿನಿಂದಲೇ ಕಾಲೇಜಿಗೆ ಪಾಠ ಮಾಡಲು ಹೋಗಿದ್ದೆ. ಕಾರಿಡಾರ್‌ನಲ್ಲಿ ಹೊರಟಿರಬೇಕಾದರೆ, ಯಾರೋ ಹಿಂಬಾಲಿಸಿದಂತೆ, ಕೂಗಿ ಕರೆದಂತೆ ಅನ್ನಿಸಿತು. ತಿರುಗಿ ನೋಡಿದರೆ, ಒಂದಿಷ್ಟು ಸೀನಿಯರ್‌ ವಿದ್ಯಾರ್ಥಿಗಳು ಓಡೋಡಿ ಬರುತ್ತಿದ್ದರು. “ಯಾಕ್ರಪ್ಪಾ, ಕ್ಲಾಸಿಗೆ ಹೋಗ್ಲಿಲ್ವಾ?’ ಅಂತಂದಾಗ, “ಸರ… ಬೆಳಗ್ಗಿಂದ ಒಂದು ಮಾತು ಹೇಳಾಕಹತ್ತಿವಿರೀ… ಮೊನ್ನೆ ದಿನ ನಿಮ್ಮ ಮುಖದಲ್ಲಿ ಇದ್ದ ಗಡ್ಡ, ಇವತ್ತು ಕಾಣಾ ಇಲ್ಲ. ಸರ, ಯಾಕೋ ನಿಮ್ಮ ಮುಖದಾಗ ಕಳೇನೇ ಇಲ್ಲದಂಗೆ ಆಗೈತ್ರಿ. ಆ ಗಡ್ಡ ನಿಮಗ ಚಂದೊಪ್ಪಿತ್ರಿ’ ಅಂದರು. ಅದನ್ನು ಕೇಳುತ್ತಲೇ, ಸ್ಟಾಫ್ರೂಮ್‌ ಕಡೆಗೆ ನಡೆದುಬಂದೆ…

ಅಲ್ಲೂ ಎದುರಿಗೆ ಬರುತ್ತಿದ್ದ ಇನ್ನೆರಡು ಕಂಗಳಲ್ಲಿ, ಅಚ್ಚರಿಯ ನೋಟ… ಜೊತೆಗೊಂದು ಮುಗುಳು…

– ವೃಶ್ಚಿಕ ಮುನಿ

Advertisement

Udayavani is now on Telegram. Click here to join our channel and stay updated with the latest news.

Next