Advertisement
ಶ್ರೀಲಂಕಾದಲ್ಲಿ ಸಂಭವಿಸಿರುವ ಸರಣಿ ಸ್ಫೋಟದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಮೂಲದ ಡಾ| ಕೇಶವ ರಾಜ್-ಶ್ರೀದೇವಿ ದಂಪತಿ, ಆ ದಿನದ ಭಯಾನಕ ಸನ್ನಿವೇಶವನ್ನು “ಉದಯವಾಣಿ’ ಜತೆಗೆ ಹಂಚಿಕೊಂಡಿದ್ದು ಹೀಗೆ.
Related Articles
Advertisement
“ನಾನು ಮತ್ತು ಪತ್ನಿ ಟೂರ್ ಪ್ಯಾಕೇಜ್ ಮೂಲಕ ಪ್ರವಾಸ ಕೈಗೊಂಡಿದ್ದು, ಎ. 20ರಂದು ಮಂಗಳೂರಿನಿಂದ ಬೆಂಗಳೂ ರಿಗೆ ಹೋಗಿ ಅಲ್ಲಿಂದ ವಿಮಾನದಲ್ಲಿ ಚೆನ್ನೆ ç ಮಾರ್ಗವಾಗಿ ಕೊಲಂ ಬೋಕ್ಕೆ ಪ್ರಯಾ ಣಿಸಿದ್ದೆವು. ರವಿವಾರ ಬೆಳಗ್ಗೆ 4.30ಕ್ಕೆ ಕೊಲಂಬೊ ವಿಮಾನ ನಿಲ್ದಾಣ ತಲು ಪಿದೆವು. “ದಿ ಸಿನೆಮನ್ ಗ್ರಾÂಂಡ್ ಹೊಟೇಲ್’ನಲ್ಲೇ ತಂಗಬೇಕಿದ್ದ ನಾವು ಕೊನೆಯ ಕ್ಷಣದಲ್ಲಿ ವಾಸ್ತವ್ಯ ಬದಲಾಯಿಸಿದ್ದರಿಂದ ಬಚಾವಾದೆವು. ಆ ದೇವರೇ ನಮ್ಮನ್ನು ರಕ್ಷಿಸಿದ್ದು’ ಎನ್ನುತ್ತಾರೆ ಡಾ| ಕೇಶವ ರಾಜ್.
“9 ಗಂಟೆ ಸುಮಾರಿಗೆ ದೂರ ದಿಂದ ಭೀಕರ ಶಬ್ದ ಕೇಳಿಸಿತು. ಕೆಲವೇ ನಿಮಿಷಗಳಲ್ಲಿ ರಸ್ತೆಯಲ್ಲಿ ಆ್ಯಂಬು ಲೆನ್ಸ್, ಪೊಲೀಸ್ ವಾಹನಗಳು ಧಾವಿಸುವುದನ್ನು ಗಮನಿಸಿದೆವು. ಪ್ರವಾಸಿ ಮಾರ್ಗದರ್ಶಿಯ ಮೂಲಕ ಬಾಂಬ್ ಸ್ಫೋಟದ ವಿಷಯ ತಿಳಿಯಿತು’ ಎಂದರು.
ಊರಿನಲ್ಲಿ ಆತಂಕಸರಣಿ ಸ್ಫೋಟದ ಬಳಿಕ ಡಾ| ಕೇಶವ ರಾಜ್ ಇದ್ದ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಇಂಟರ್‌ನೆಟ್ ರದ್ದುಗೊಳಿಸಲಾಗಿತ್ತು. ಇದರಿಂದ ವಾಟ್ಸ್‌ಆ್ಯಪ್, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದ ವೀಕ್ಷಣೆ ಸಾಧ್ಯವಾಗುತ್ತಿರಲಿಲ್ಲ. ಇತ್ತ ಮಾಧ್ಯಮಗಳ ಮೂಲಕ ವಿಷಯ ತಿಳಿದ ಊರಿನಲ್ಲಿರುವ ಕೇಶವ ರಾಜ್ ಅವರ ಮನೆ ಮಂದಿ, ಸಂಬಂಧಿಕರು ಗಾಬರಿಯಲ್ಲಿದ್ದರು. ಮೊಬೈಲ್ ಸಂಪರ್ಕ ಕಡಿತ
ಮೊಬೈಲ್ ಸಂಪರ್ಕವೂ ಸಾಧ್ಯವಾ ಗುತ್ತಿರಲಿಲ್ಲ. ಕೊನೆಗೆ ರವಿವಾರ ಸಂಜೆ ವೇಳೆಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಿತ್ತು. ಅಣ್ಣ ಮತ್ತು ಅತ್ತಿಗೆ ಕ್ಷೇಮವಾಗಿದ್ದಾರೆ ಅಂದಾಗ ಆತಂಕ ಸ್ವಲ್ಪ ದೂರವಾಯಿತು’ ಎನ್ನುತ್ತಾರೆ ಡಾ| ಕೇಶವ ರಾಜ್ ಅವರ ತಮ್ಮ ಕಾರ್ತಿಕ್ ರಾಜ್. ಇಂದು ಭಾರತಕ್ಕೆ
ಶ್ರೀಲಂಕಾದ ಪ್ರವಾಸಿ ತಾಣ ಗಳನ್ನು ವೀಕ್ಷಿಸಿ ಎ. 24ರಂದು ಭಾರತಕ್ಕೆ ವಾಪಸ್ ಬರುವುದೆಂದು ಯೋಜಿಸಿದ್ದೆವು. ಆದರೆ ಪರಿಸ್ಥಿತಿ ಬೇರೆಯದೇ ಆಯಿತು. ದೇವರ ದಯದಿಂದ ನಾವು ಬದುಕಿದ್ದೇವೆ. ಕೊಲಂಬೋದಿಂದ ಭಾರತಕ್ಕೆ ಸೋಮವಾರ ವಿಮಾನ ಹಾರಾಟವಿಲ್ಲ. ಮಂಗಳವಾರ ಸ್ವದೇಶಕ್ಕೆ ವಾಪಸಾಗುತ್ತಿದ್ದೇವೆ.
– ಡಾ| ಕೇಶವ ರಾಜ್ ಸ್ಫೋಟ ಘಟನೆ ತಿಳಿದು ಗಾಬರಿಯಾದೆವು. ಕೂಡಲೇ ಅಣ್ಣನನ್ನು ಸಂಪರ್ಕಿಸಲು ಪ್ರಯತ್ನಿಸಿ ದೆವಾದರೂ ಸಾಧ್ಯವಾಗಿಲ್ಲ. ಕೊನೆಗೂ ಸಂಜೆ ವೇಳೆಗೆ ಅಣ್ಣನಿಗೆ ಕರೆ ಸಿಕ್ಕಿ ಅವರು ಕ್ಷೇಮವಾಗಿದ್ದಾನೆ ಎಂದು ತಿಳಿದು ನಿರಾಳವಾಯಿತು.
– ಕಾರ್ತಿಕ್ ರಾಜ್, ಸಹೋದರ