Advertisement
ಜು.10ರಂದು ನಡೆದಿದ್ದ ಈ ದಾಳಿಯನ್ನು ಪಾಕಿಸ್ಥಾನ ಮೂಲದ ಲಷ್ಕರ್ ಎ ತೋಯ್ಬಾ ಭಯೋತ್ಪಾದಕ ಸಂಘಟನೆ ನಡೆಸಿರುವುದು ಖಚಿತಪಟ್ಟಿದೆ. ಬಂಧಿತ ಆರೋಪಿಗಳು ಬಿಲಾಲ್ ಅಹ್ಮದ್ ರಾಶಿ, ಅಜೀಜ್ ಅಹ್ಮದ್ ವಾಗೈ ಮತ್ತು ಝರೂರ್ ಅಹ್ಮದ್ ಶಾ ಎಂಬುವವರಾಗಿದ್ದಾರೆ. ಈ ಆರೋಪಿಗಳು ಲಷ್ಕರ್‌ನ ಉಗ್ರರಾಗಿದ್ದು, ದಾಳಿಗೆ ಬೆಂಬಲ ನೀಡಿದ್ದಾರೆ. ಇವರು ಸಂಘಟನೆಯ ಸ್ಲಿàಪರ್ ಸೆಲ್‌ಗೆ ಸೇರಿದವರಾಗಿದ್ದಾರೆ ಎಂದು ಕಾಶ್ಮೀರ ವಿಭಾಗದ ಪೊಲೀಸ್ ಐಜಿ ಮುನೀರ್ ಖಾನ್ ಅವರು ತಿಳಿಸಿದ್ದಾರೆ.
Related Articles
Advertisement
ರಜೌರಿಯಲ್ಲಿ ಅಪಾರ ಶಸ್ತ್ರಾಸ್ತ್ರ ಪತ್ತೆ: ರಜೌರಿ-ರಾಸಿ ವಲಯದಲ್ಲಿ ಸೇನೆ, ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. “ಆಪರೇಷನ್ ಕ್ಲೀನ್ ಅಪ್’ ಕಾರ್ಯಾಚರಣೆ ವೇಳೆ ತರಬೇತಿ ಹೊಂದಿದ ಶ್ವಾನಗಳು ಇವುಗಳನ್ನು ಪತ್ತೆ ಮಾಡಿವೆ. ಸ್ಥಳದಿಂದ ಎಕೆ-47, ಎಕೆ-56 ರೈಫಲ್‌ಗಳು, ಚೀನಾ ಪಿಸ್ತೂಲ್, ಎರಡು ಸುತ್ತಿಗಾಗುವಷ್ಟು ಬುಲೆಟ್‌ಗಳು, 5 ಗ್ರೆನೇಡ್‌ಗಳು, 2 ಮ್ಯಾಗಝೀನ್‌ಗಳು, 639 ರೌಂಡ್‌ಗಾಗುವಷ್ಟು ಬುಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಗೆ ಕೋಡ್‌ವರ್ಡ್ ಬಳಸಿದ್ದರು!ಅಮರನಾಥ ಯಾತ್ರಿಗಳ ಮೇಲಿನ ದಾಳಿ ಸಾಕಷ್ಟು ಪೂರ್ವ ನಿಯೋಜಿತ ಕೃತ್ಯ. ಇದಕ್ಕಾಗಿ ಉಗ್ರರು ಕೋಡ್‌ವರ್ಡ್ ಬಳಕೆ ಮಾಡಿದ್ದರು. ಯಾತ್ರಿ ಬಸ್ ಅನ್ನು ಶೌಕತ್ ಎಂದು ಬೆಂಗಾವಲಿಗಿದ್ದ ಸಿಆರ್‌ಪಿಎಫ್ ಬಸ್ಸನ್ನು ಬಿಲಾಲ್ ಎಂದು ಕೋರ್ಡ್‌ವರ್ಡ್ ಬಳಸಿದ್ದರು. ಜು.9ರಂದೇ ದಾಳಿ ಮಾಡಲು ಯೋಜಿಸಿದ್ದರಾದರೂ ಆ ದಿನ ಸಿಆರ್‌ಪಿಎಫ್ ವಾಹನವಾಗಲಿ, ಯಾತ್ರಿಕರ ವಾಹನವಾಗಲಿ ಪ್ರತ್ಯೇಕ ಪ್ರತ್ಯೇಕವಾಗಿ ಸಂಚರಿಸಿರಲಿಲ್ಲ. ಮರುದಿನ ಉಗ್ರರು ದಾಳಿಗೆ ಯೋಜಿಸಿದ್ದ ಸ್ಥಳದಲ್ಲಿ ಸಿಆರ್‌ಪಿಎಫ್ ವಾಹನದ ಮೇಲೆ ಗುಂಡಿನ ಮಳೆಗೆರೆಯಲು ಸಿದ್ಧತೆ ಮಾಡಿದ್ದರು. ಆದರೆ ಸಿಕ್ಕಿದ್ದು ಯಾತ್ರಿಗಳಿದ್ದ ವಾಹನವಾಗಿತ್ತು ಎಂದು ಪೊಲೀಸ್ ಐಜಿ ತಿಳಿಸಿದ್ದಾರೆ. ಆಯ್ದ ಉಗ್ರರಿಗೆ ಬೆಂಬಲ ಕೊಡದಿರಿ: ಪಾಕ್‌ಗೆ ಟ್ರಂಪ್
ಪಾಕಿಸ್ಥಾನ ಆಯ್ದ ಉಗ್ರರಿಗೆ ಬೆಂಬಲ ಕೊಡು ವುದು ಬೇಡ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ ದೇಶಕ್ಕೆ ಸೂಚಿಸಿರುವುದಾಗಿ ಅಮೆರಿಕದ ಭದ್ರತಾ ಸಲಹೆಗಾರ ಜ.ಎಚ್.ಆರ್.ಮ್ಯಾಕ್‌ಮಾಸ್ಟರ್ ಹೇಳಿದ್ದಾರೆ. ಒಂದೆಡೆಯಲ್ಲಿ ಪಾಕ್ ತಾನು ಭಯೋತ್ಪಾದಕರ ವಿರುದ್ಧ ಹೋರಾಟ ನಡೆಸುವುದಾಗಿ ಹೇಳುತ್ತಿದೆ. ಮತ್ತೂಂದೆಡೆಸ ಉಗ್ರರು ಭಾರತ, ಆಫ್ಘಾನಿಸ್ತಾನದಲ್ಲಿ ನಡೆಸುವ ವಿಧ್ವಂಸಕ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುವುದನ್ನು ಮಾಡುತ್ತಿದೆ ಎಂದು ಬೊಟ್ಟು ಮಾಡಿದ್ದಾರೆ.