Advertisement

ಕೋವಿಡ್ ಜಾಗೃತಿ : ಶ್ರೀಶೈಲ ಪಾದಯಾತ್ರೆಯಲ್ಲಿ ಅತಿ ದೊಡ್ಡ ಮಾಸ್ಕ್ ಅನಾವರಣ

10:27 PM Mar 29, 2021 | Team Udayavani |

ಅಮೀನಗಡ: ಶ್ರೀಶೈಲ ಪಾದಯಾತ್ರೆಯಲ್ಲಿ ಮಲ್ಲಯ್ಯನ ಭಕ್ತರು ಅತಿ ದೊಡ್ಡ ಮಾಸ್ಕ್ ಮೆರವಣಿಗೆ ಮಾಡಿ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಅಭಿಯಾನ ಮಾಡುವುದರ ಮೂಲಕ ಕೊರೊನಾ ಜಾಗೃತಿ ಮೂಡಿಸಿದರು.

Advertisement

ಬೆಂಗಳೂರಿನ ಅಮ್ಮ ಪೌಂಡೇಶನ್ ಮತ್ತು ಪಟ್ಟಣದ ಶ್ರೀಶೈಲ ಭಕ್ತರ ಸಹಯೋಗದಲ್ಲಿ 8 ಅಡಿ ಉದ್ದದ 6 ಅಡಿ ಅಗಲದ ದೇಶದ ಅತಿ ದೊಡ್ಡ ಮಾಸ್ಕ್ ಮೆರವಣಿಗೆಯು ಪಟ್ಟಣದ ಬಸವೇಶ್ವರ ದೇವಸ್ಥಾನದಿಂದ ಹೊರಟು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಂಚರಿಸಿತು.ಮೆರವಣಿಗೆಯಲ್ಲಿ ರಸ್ತೆಯುದ್ದಕ್ಕೂ ಮಾಸ್ಕ್ ವಿತರಣೆ ಮಾಡಲಾಯಿತು ಹಾಗೂ ಮೈಕ್ ಮುಖಾಂತರ ಕೊರೊನಾ ಜಾಗೃತಿ ಮಾಡಲಾಯಿತು ಇದು ಎಲ್ಲರ ಗಮನ ಸೆಳೆಯಿತು.

ಇದಕ್ಕೂ ಮುನ್ನಾ ಬಸವೇಶ್ವರ ದೇವಸ್ಥಾನದಲ್ಲಿ ತಾಲೂಕ ವೈದ್ಯಾಧಿಕಾರಿ ಡಾ.ಪ್ರಶಾಂತ ತುಂಬಗಿ ದೇಶದ ಅತಿ ದೊಡ್ಡ ಮಾಸ್ಕ್ ಅನಾವರಣಗೊಳಿಸಿ ಮಾತನಾಡಿದ ಅವರು,ದೇಶದಲ್ಲಿ ಕೊರೊನಾ ಎರಡನೇ ಅಲೆ ಹಾವಳಿ ಹೆಚ್ಚಾಗಿದ್ದು ಇಂತಹ ಸಂದರ್ಭದಲ್ಲಿ ಶ್ರೀಶೈಲ ಪಾದಯಾತ್ರೆ ಮಾಡುತ್ತಿರುವ ಭಕ್ತರು ಧಾರ್ಮಿಕ ಭಕ್ತಿಯ ಜೊತೆಗೆ ಸಮಾಜದ ಎಲ್ಲರ ಆರೋಗ್ಯದ ಹಿತದೃಷ್ಟಿಯಿಂದ ಅತಿ ದೊಡ್ಡ ಮಾಸ್ಕ್ ಸಿದ್ದಪಡಿಸಿ ಅದನ್ನು ಪಾದಯಾತ್ರೆಯಲ್ಲಿ ಮೆರವಣಿಗೆ ಮಾಡುವುದರ ಮೂಲಕ ಮಾಸ್ಕ್ ಮತ್ತು ಸಾಮಾಜಿಕ ಅಂತರದ ಅಭಿಯಾನ ಮಾಡಿ ಸಾರ್ವಜನಿಕರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಇದನ್ನೂ ಓದಿ :ಕೊನೆಗೂ ಕದಲಿದ “ಎವರ್‌ಗಿವನ್‌’ : ಸುಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿದ್ದ ಸಮಸ್ಯೆ ನಿವಾರಣೆ

ಶ್ರೀಶೈಲ ಪಾದಯಾತ್ರೆಯಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಅತಿ ದೊಡ್ಡ ಮಾಸ್ಕ್ ಮೆರವಣಿಗೆ ಮಾಡಿ ಕೊರೊನಾ ಜಾಗೃತಿ ಮಾಡುತ್ತಿರುವ ಶ್ರೀಶೈಲ ಭಕ್ತರ ಕಾರ್ಯವನ್ನು ಕಂಡು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯ ಮಾತುಗಳು ಕೇಳಿಬಂದವು.

Advertisement

ಮೆರವಣಿಗೆಯಲ್ಲಿ ಬೆಂಗಳೂರಿನ ನಾಗಾರ್ಜುನ ವಿವಿಯ ನಿದೇರ್ಶಕ ಮನೋಹರ ಸರೋಜಿ,ರಾಷ್ಟ್ರೀಯ ಆಟಗಾರ ರೋಹಿತ ಕೆಂಪೇಗೌಡ, ರಾಷ್ಟ್ರೀಯ ಆಟಗಾರ್ತಿ ಪ್ರಮೀಳಾ ಗಟ್ಟಿ,ಸಂಪನ್ಮೂಲ ವ್ಯಕ್ತಿ ರಮೇಶ ಉಮ್ರಾಣಿ,ಉದ್ಯಮಿ ಮಂಜುನಾಥ ಬಂಡಿ,ವಕೀಲ ಸಿದ್ದು ಸಜ್ಜನ,ಸುರೇಶ ಕಾಯಿ,ಕಂದಾಯ ನಿರೀಕ್ಷಕ ಜೆ.ಸಿ.ಚಿನಿವಾಲರ,ಪಪಂ ಆರೋಗ್ಯ ಇಲಾಖೆ ನಿರೀಕ್ಷಕ ಸಂತೋಷ ವ್ಯಾಪಾರಿಮಠ,ಹಿರಿಯರಾದ ಮಲ್ಲೇಶಪ್ಪ ಹೊದ್ಲೂರ,ಬಿಜೆಪಿ ಮುಖಂಡ ಮಲ್ಲೇಶ ವಿಜಾಪೂರ,ಕಲಾವಿದ ಅಸ್ಲಂ ಕಲಾದಗಿ ಸೇರಿದಂತೆ ನೂರಾರು ಶ್ರಿಶೈಲ ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next