Advertisement
ಮಂಜುಗಡ್ಡೆಯಲ್ಲಿ ಆಟವಾಡುವುದು, ಹಿಮದ ಮಳೆ, ಕೊರೆಯುವ ಚಳಿ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ!? ಈಗೆಲ್ಲಾ ದೊಡ್ಡದೊಡ್ಡ ನಗರಿಗಳಲ್ಲಿ “ಸ್ನೋ ಸಿಟಿ’ ಎನ್ನುವಕೃತಕ ಹಿಮದ ಥೀಮ್ ಪಾರ್ಕ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈಗಲಾದರೆ ಚಳಿಗಾಲ ನಮಗೆ ವರ್ಷಕ್ಕೊಮ್ಮೆ ಬಂದು ಹೋಗುವ ಅತಿಥಿ. ಆದರೆ ಹಿಂದೊಮ್ಮೆ ಭೂಮಿ
ಮೇಲೆ ಹಿಮಯುಗವೇ ಬಂದಿತ್ತು ಎಂದರೆ ಯಾರಿಗೇ ಆದರೂ ಊಹಿಸಿಕೊಳ್ಳುವುದು ಕಷ್ಟ. ಹಿಮ ಯುಗವೆಂದರೆ, ಸಾವಿರಾರು ವರ್ಷಗಳ ಕಾಲ ಭೂಮಿ ಪೂರ್ತಿ
ಹಿಮದ ಉಂಡೆಯಂತಿತ್ತು.
ಭೂಮಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿತ್ತು. 1840ರಲ್ಲಿ ಲೂಯಿಸ್
ಅಗಾಸಿಜ್ ಅನ್ನೋ ಸ್ವಿಸ್‌ನ ಪರಿಸರ ವಿಜ್ಞಾನಿಹಲವಾರು ಸಾಕ್ಷಿ, ಪುರಾವೆಗಳ ಮುಖಾಂತರ ಭೂಮಿಯಲ್ಲಿ ಅನೇಕ ಹಿಮಯುಗಗಳು ಉಂಟಾಗಿವೆ ಎಂಬುದಪತ್ತೆ ಹಚ್ಚಿದರು. ಅದಾನಂತರ ಆಕ್ಸ್‌ಫರ್ಡ್ ಕಾಲೇಜಿನ ಸಹ ಪ್ರಾಧ್ಯಾಪಕಿ ಹಾಗೂ ವಿಜ್ಞಾನಿ ಮೆಲಿಸ್ಸಾ ಹೇಗ್, ಉತ್ತರಾರ್ಧ ಗೋಳದಿಂದ ದಕ್ಷಿಣಾರ್ಧ ಗೋಳದವರೆಗೆ ಭೂಮಿಯ ಮೇಲ್ಮೈ, ಸಮುದ್ರವೂ ಸೇರಿ ಸಂಪೂರ್ಣವಾಗಿ ಹಿಮದಿಂದ ಆವೃತವಾಗಿತ್ತು ಎಂಬುದನ್ನು ಸಂಶೋಧನೆ ಮುಖಾಂತರ ಸಾಬೀತುಪಡಿಸಿದ್ದರು. ಅದರಂತೆ
ತಿಳಿದು ಬಂದಿದ್ದೇನೆಂದರೆ, ಭೂಮಿ ತನ್ನ ಇತಿಹಾಸದಲ್ಲಿ ಕನಿಷ್ಠವೆಂದರೂ ನಾಲ್ಕು ಹಿಮಯುಗಗಳನ್ನು ಕಂಡಿದೆ. 2.7 ಬಿಲಿಯನ್‌ನಿಂದ 2.5 ಬಿಲಿಯನ್ ವರ್ಷಗಳ ಹಿಂದೆ
ಹಿಮಯುಗ ಪ್ರಾರಂಭವಾಗಿತ್ತು. ಮತ್ತೆ ಬರುತ್ತಾ ಹಿಮಯುಗ?
ಹಿಮಯುಗದ ಸಮಯದಲ್ಲಿ ಭೂಮಿ ಮೇಲಿನ ತಾಪಮಾನ ಅಪಾಯಕಾರಿ ಹಂತದಲ್ಲಿತ್ತು. ಎಷ್ಟೆಂದರೆ ಅಂದಾಜು ಮೈನಸ್ 50 ಡಿಗ್ರಿ ಸೆಲ್ಸಿಯಸ್‌ನಷ್ಟು! ಹಿಮ
ಯುಗದ ಕುರಿತಾದ ಚರ್ಚೆ ವಿಜ್ಞಾನಿಗಳ ವಲಯದಲ್ಲಿ ಆಗಾಗ್ಗೆ ಆಗುವುದುಂಟು. ಏಕೆಂದರೆ
ಹಿಂದೊಮ್ಮೆ ಘಟಿಸಿದ್ದ ಹಿಮ ಯುಗ ಮತ್ತೆ ಭೂಮಿ ಮೇಲೆ ಬರಲಿದೆ ಎಂಬ ಕೆಲ ವಿಜ್ಞಾನಿಗಳ ಲೆಕ್ಕಾಚಾರವೇ ಅದಕ್ಕೆ ಕಾರಣ. 16ನೇ ಶತಮಾನದಲ್ಲಿ ಹಿಮಯುಗದ
ಲಕ್ಷಣಗಳು ಕಂಡುಬಂದಿದ್ದವು ಎಂದು ವಿಜ್ಞಾನಿಗಳು ನುಡಿಯುತ್ತಾರೆ. ಈ ಬಾರಿಯ ಹಿಮಯುಗ ನಾಲ್ಕೈದು ದಶಕಗಳ ನಂತರ ಮತ್ತೆ ಭೂಮಿ ಮೇಲೆ ಕಾಲಿಡಲಿದೆ ಎನ್ನುವುದು ಈ ವಿಜ್ಞಾನಿಗಳ ಊಹೆ. ಆದರೆ ವಿಜ್ಞಾನ ಬರೀ ಊಹೆಗಳ ಆಧಾರದ
ಮೇಲೆ ಕೆಲಸ ಮಾಡುವುದಿಲ್ಲ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು.
Related Articles
ಭೂಮಿಯಲ್ಲಿ ಹಿಮಯುಗ ಇದ್ದಾಗಿನ ಕಥಾನಕವನ್ನೇ ಡಿಸ್ನಿ ಸಂಸ್ಥೆ “ಐಸ್ ಏಜ್’ ಸಿನಿಮಾ
ಮೂಲಕ ತೆರೆ ಮೇಲೆ ತಂದಿತ್ತು. ಈ ಸಿನಿಮಾದ ಹಲವು ಅವತರಣಿಕೆಗಳು ತೆರೆಕಂಡು ಮೆಚ್ಚುಗೆ ಗಳಿಸಿದ್ದವು. ಆಗಿನ ಯುಗದಲ್ಲಿ ಜೀವಂತವಿದ್ದ ಪ್ರಾಣಿಗಳ ಪಾತ್ರಗಳನ್ನು ಸಿನಿಮಾದಲ್ಲಿ ಕಾಣಬಹುದು.
Advertisement
ಆಗಲೂ ಬದುಕಿದ್ದವು ಪ್ರಾಣಿಗಳು ಹಿಮ ಯುಗವಿದ್ದಾಗಲೂ ಭೂಮಿ ಮೇಲೆ ಪ್ರಾಣಿಗಳು ನೆಲೆಸಿದ್ದವು. ಅವು ಹಿಮಯುಗಕ್ಕೆ ಹೊಂದಿಕೊಂಡಿದ್ದವು. ಅವುಗಳ ಮೈ ದಪ್ಪ ಚರ್ಮ ಹಾಗೂ ತುಪ್ಪಳವನ್ನು ಹೊಂದಿದ್ದವು. ತೋಳಗಳು, ಕೋರೆ ಹಲ್ಲುಳ್ಳ ಹುಲಿ ಮ್ಯಾಮತ್ಆನೆ ಸೇರಿದಂತೆ ಹಲವು ಜೀವಿಗಳು ಆ ಕಾಲದಲ್ಲಿ ಬದುಕಿದ್ದವು ಎನ್ನುವುದು ಪಳೆಯುಳಿಕೆಗಳಿಂದ ತಿಳಿದುಬಂದಿದೆ. ಅರ್ಚನಾ ಹೆಚ್.