Advertisement

ಬರದ ನಾಡಿಗೆ ಶಾಶ್ವತ ನೀರಾವರಿ ಅಗತ್ಯ 

07:35 AM Mar 22, 2019 | |

ದೊಡ್ಡಬಳ್ಳಾಪುರ: ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಸಮಸ್ಯೆ ಕಾಡುವುದು ಸಹಜ. ನದಿ ಮೂಲಗಳಿಲ್ಲದ ದೊಡ್ಡಬಳ್ಳಾಪುರ ತಾಲೂಕು ಸೇರಿದಂತೆ ಬಯಲುಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ರೂಪಿಸುವ ಅಗತ್ಯತೆ ಹೆಚ್ಚಾಗಿದೆ. ಜಲದಿನಾಚರಣೆ ಹಿನ್ನೆಲೆಯಲ್ಲಿ ನೀ ರಿನ ಸ್ಥಿ ತಿಗತಿಗಳ ಅವಲೋಕನವೂ ಅನಿವಾರ್ಯವಾಗಿದೆ.

Advertisement

ನೀರಿನ ಮೂಲ: ತಾಲೂಕಿನಲ್ಲಿ ಯಾವುದೇ ನದಿ ಮೂಲಗಳಿಲ್ಲ. ಶಾಶ್ವತ ನೀರಾವರಿ ಯೋಜನೆಗಳಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಂತರ್ಜಲ ಸ್ಥಿತಿಗತಿ ತೀರಾ ಚಿಂತಾಜನಕವಾಗಿದೆ. ನಗರದ ಸುತ್ತಮುತ್ತಲಿನ ಗ್ರಾಮಗಳ ಹಾಗೂ ನಗರಕ್ಕೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿನ ಬೋರ್‌ವೆಲ್‌ಗ‌ಳೇ ನೀರಿಗೆ ಆಧಾರವಾಗಿವೆ. ಅಂಕಿಅಂಶ ಗಳ ಪ್ರ ಕಾ ರ ಜಿ ಲ್ಲೆಯ ದೊಡ್ಡಬಳ್ಳಾಪುರದಲ್ಲಿ 9,467, ದೇವನಹಳ್ಳಿಯಲ್ಲಿ 11,170, ಹೊಸಕೋಟೆಯಲ್ಲಿ 9,308 ಹಾಗೂ ನೆಲಮಂಗಲದಲ್ಲಿ 5,077 ಸೇರಿ ಒಟ್ಟು 35,022 ಕೊ ಳವೆ ಬಾ ವಿ ಗ ಳಿವೆ. 

ಅಂತರ್ಜಲ ಲಭ್ಯತೆ: ಜಿಲ್ಲೆಯಲ್ಲಿ 23,864 ಹೆಕ್ಟೇರ್‌ ಮೀಟರ್‌ ವಾರ್ಷಿಕ ಅಂತರ್ಜಲ ಲಭ್ಯತೆಯಿದ್ದು, ನಿ ವ್ವಳ ನೀರಾವರಿಗಾಗಿ ದೊಡ್ಡಬಳ್ಳಾಪುರ-5561 ಹೆ., ದೇವನಹಳ್ಳಿ-6,408 ಹೆ., ಹೊಸಕೋಟೆ-4,917 ಹೆ. ಹಾಗೂ ನೆಲಮಂಗಲ-3,911 ಹೆ., 20,797 ಹೆಕ್ಟೇರ್‌ ಮೀಟರ್‌ ಬಳಕೆಯಾಗುತ್ತಿದೆ. ಗೃಹ ಮತ್ತು ಕೈಗಾರಿಕೆಗಳಲ್ಲಿ 3,239 ಹೆಕ್ಟೇರ್‌ ಮೀಟರ್‌ ಬಳಸುತ್ತಿದ್ದು, ಶೇ.127 ಅಂತರ್ಜಲ ಅಭಿವೃದ್ಧಿ ಹಂತ ತಲುಪಿದೆ. ರಾಜ್ಯದಲ್ಲಿ ಅಂತರ್ಜಲ ಅತಿ ಬಳಕೆಯ ತಾಲೂಕುಗಳಲ್ಲಿ ಜಿಲ್ಲೆಯ ನಾಲ್ಕು ತಾಲೂಕುಗಳು ಸ್ಥಾನ ಪಡೆದಿವೆ. ಜಿ ಲ್ಲೆಯ ವಾ ರ್ಷಿಕ ವಾ ಡಿಕೆ ಮಳೆ ಪ್ರ ಮಾಣ ಸ ರಾ ಸರಿ 838 ಮಿ.ಮೀ. ಇದೆ.

ನಗರದ ನೀರಿನ ಸ್ಥಿತಿಗತಿ: ದಿನೇ ದಿನೆ ಬೆಳೆಯುತ್ತಿರುವ ದೊಡ್ಡಬಳ್ಳಾಪುರದಲ್ಲಿ ವಾರ್ಷಿಕ ಸರಾಸರಿ 800 ಮಿ.ಮೀ. ಮಳೆ ಬೀಳುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೆ ಸರಾಸರಿ 150 ಲೀ.ನೀರಿನ ಅಗತ್ಯವಿದೆ. ನೀರನ್ನು ಎಚ್ಚರದಿಂದ ಬಳಸಿದರೆ 90 ರಿಂದ 100 ಲೀ. ಬೇಕಾಗುತ್ತದೆ. ಆದರೆ, ಈಗ ದೊಡ್ಡಬಳ್ಳಾಪುರದ ಪ್ರತಿ ವ್ಯಕ್ತಿಗೆ ಸಿಗುತ್ತಿರುವುದು 70 ಲೀಟರ್‌ಗಿಂತ ಕಡಿಮೆ ನೀರು. 

ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, ಜನಸಂಖ್ಯೆ 1 ಲಕ್ಷ ದಾ ಟಿ ದೆ. ನಗರಕ್ಕೆ 13.50 ಎಂಎ ಲ್‌ ಡಿ ಅವಶ್ಯಕತೆಯಿದ್ದು, ಹಾಲಿ 5.10 ಎಂಎ ಲ್‌ ಡಿ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಬಾಕಿ 8.40 ಎಂಎಲ್‌ಡಿ ಕೊರತೆಯಿದೆ. ದೊಡ್ಡಬಳ್ಳಾಪುರ ನಗರದಲ್ಲಿ ಸರಾಸರಿ 5ರಿಂದ 6ದಿನಗಳಿಗೊಮ್ಮೆ ಕುಡಿಯುವ ನೀರನ್ನು ತಲಾ 51 ಎಲ್‌ಪಿಸಿಡಿಯಲ್ಲಿ ಪೂರೈಸಲಾಗುತ್ತಿದೆ.

Advertisement

ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ಪ್ರತಿದಿನ 10.00ಲಕ್ಷ ಲೀ. ನೀರು ಸರಬರಾಜು ಆಗುತ್ತಿದೆ. ಮಾ ರ್ಚ್‌ 19 ರವರೆಗೆ ಜಕ್ಕಲಮಡಗು ಜಲಾಶಯದಲ್ಲಿ ಶೇಖರಣೆಯಾಗಿರುವ ನೀರಿನ ಮಟ್ಟ 8 ಅಡಿಗಳಿದೆ. ದೊಡ್ಡಬಳ್ಳಾಪುರ ನಗರಕ್ಕೆ ಪ್ರತಿದಿನ 1.0ದಶಲಕ್ಷ ಲೀ. ನೀರನ್ನು ಸರಬರಾಜು ಮಾಡಿಕೊಳ್ಳಲಾಗುತ್ತದೆ. ಅದರಂತೆ ನಗರಕ್ಕೆ ಹಾಲಿ ಇರುವ ಜಲಾಶಯದಲ್ಲಿ ಸುಮಾರು 15ದಿನಗಳ ವರೆಗೆ ಮಾತ್ರ ನೀರು ಸರಬರಾಜು ಆಗಲಿದೆ.

2017-18ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ ಈಗಾಗಲೇ 14ಸಂಖ್ಯೆ  ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಇದರಲ್ಲಿ 4 ವಿಫಲಗೊಂಡಿದ್ದು, ಉಳಿದ 10 ಕೊಳವೆಬಾವಿಗಳಲ್ಲಿ ನೀರು ಸರಬರಾಜು ಮಾಡಿಕೊಳ್ಳಲಾಗುತ್ತಿದೆ. 2018-19ನೇ ಸಾಲಿನ ಎಸ್‌ಎಫ್‌ಸಿ ಅನುದಾನದಡಿ 25 ಲಕ್ಷ ರೂ. ಬಿಡುಗಡೆ ಮಾಡಿದ್ದು, ಈ ಮೊತ್ತದಲ್ಲಿ ಬೇಸಿಗೆ ಕಾಲದಲ್ಲಿ ಅವಶ್ಯಕತೆಗನುಗುಣವಾಗಿ 12ಸಂಖ್ಯೆ ಕೊಳವೆಬಾವಿಗಳನ್ನು ಕೊರೆಯಲು ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ ಎನ್ನುತ್ತಾರೆ ನೀರು ಸರಬರಾಜು ವಿಭಾಗದ ಕಿರಿಯ ಅಭಿಯಂತರ ರಾಮೇಗೌಡ.

ಗ್ರಾಮಾಂತರ ಪ್ರದೇಶ: ಗ್ರಾಮಾಂತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ. ಕೆರೆ ಕುಂಟೆಗಳಲ್ಲಿ ಹೂಳು ತಂಬಿಕೊಂಡು ನೀರಿನ ಶೇಖರಣೆ ಕಡಿಮೆಯಾಗಿದೆ. ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಇಲ್ಲದೇ ಹಲವಾರು ಘಟಕಗಳು ಮುಚ್ಚಿವೆ. ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಕಾಲಕಾಲಕ್ಕೆ ಕ್ರಿಯಾ ಯೋಜನೆ ರೂಪಿಸಿ, ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ ಎನ್ನುವ ಆರೋಪಗಳಿವೆ. 

ಜಾರಿಯಾಗದ ನೀರಾವರಿ ಯೋಜನೆ: ಸದ್ಯಕ್ಕೆ ಜಕ್ಕಲಮಡುಗುವಿನಿಂದ ನಗರಕ್ಕೆ ನೀರು ಸರಬರಾಜಾಗುತ್ತಿರುವುದರಿಂದ ಪರಿಸ್ಥಿತಿ ತಿಳಿಯಾಗಿದೆ. ಬಯಲುಸೀಮೆಯಲ್ಲಿ ಮಳೆ ಕಡಿಮೆ. ಅಂತರ್ಜಲ ಬತ್ತಿದೆ. ಕೆರೆ, ಕುಂಟೆಗಳು ಭರ್ತಿಯಾಗಿ ಅಂತರ್ಜಲ ವೃದ್ಧಿಯಾಗದೇ ಸಮಸ್ಯೆ ಬಗೆಹರಿಯುವುದಿಲ್ಲ. ಈ ನಿಟ್ಟಿನಲ್ಲಿ ಶಾಶ್ವತ ನೀರಾವರಿಗಾಗಿ ಪರಮಶಿವಯ್ಯನವರ ವರದಿ ಜಾರಿಗೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಿದೆ ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ.

* ಡಿ.ಶ್ರೀಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next