Advertisement

Chikkaballapur: ಲೋಕ ಸಮರಕ್ಕೆ ಶಾಶ್ವತ ನೀರಿನ ಹೋರಾಟದ ಕಾವು!

05:07 PM Mar 09, 2024 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಒಂದಡೆ ಲೋಕಸಭಾ ಚುನಾವಣೆಗೆ ರಾಜಕಾರಣದ ಕಾವು ದಿನೇ ದಿನೇ ಏರಿದರೆ ಮತ್ತೂಂದಡೆ ದಶಕಗ ಳಿಂದ ಶಾಶ್ವತ ನೀರಾವರಿ ವಂಚಿತ ಚಿಕ್ಕ ಬಳ್ಳಾಪುರ ಜಿಲ್ಲೆಯಲ್ಲಿ ಸದ್ದಿಲ್ಲದೇ ಶಾಶ್ವತ ನೀರಾವರಿ ಹೋರಾಟ ಲೋಕಸಭಾ ಚುನಾವಣೆ ವೇಳೆಗೆ ಕಾವೇರುವಂತೆ ಮಾಡಿದೆ.

Advertisement

ಹೌದು, ಈ ವರ್ಷದಿಂದ ತೀವ್ರ ಬರಗಾಲಕ್ಕೆ ತುತ್ತಾಗಿ ಹನಿ ಹನಿ ನೀರಿಗೂ ಪರಿತಪಿಸುತ್ತಿರುವ ಬೆನ್ನಲೇ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಲೋಕಸಭಾ ಚುನಾವಣೆಯನ್ನು ಬಳಸಿಕೊಂಡು ರಾಜಕೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಜಿಲ್ಲೆಗೆ ಆಗುತ್ತಿರುವ ನೀರಾವರಿ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮುಂದಾಗಿದೆ.

ಖ್ಯಾತ ಜಲ ತಜ್ಞರಾದ ಜಿಲ್ಲೆಯ ಸಮಗ್ರ ಹಾಗೂ ಶಾಶ್ವತ ನೀರಾವರಿ ಯೋಜನೆಗಳ ಜನಕ ಡಾ.ಜಿ.ಎಸ್‌. ಪರಮಶಿವಯ್ಯ ನವರ 10ನೇ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಮಾ.11ರಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೀರಾವರಿಗಾಗಿ ಸಂಕಲ್ಪ ಸಮಾವೇ ಶವನ್ನು ಆಯೋಜಿಸಲು ಭರದ ಸಿದ್ಧತೆ ನಡೆಸುತ್ತಿದೆ.

ದಶಕಗಳಿಂದ ಜಿಲ್ಲೆಯ ಸಮಗ್ರ ನೀರಾವರಿಗಾಗಿ 160 ದಿನಗಳ ಅನಿರ್ದಿಷ್ಟಾವಧಿ ಧರಣಿ, ಜಲಯಾತ್ರೆ, ಪಾದ ಯಾತ್ರೆ, ಟ್ರ್ಯಾಕ್ಟರ್‌ ರ್ಯಾಲಿ ಮತ್ತಿತರ ಅನೇಕ ಹೋರಾಟ ಗಳನ್ನು ನಡೆಸಿರುವ ನೀರಾವರಿ ಹೋರಾಟ ಸಮಿತಿ ಇದೀಗ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ನೀರಾವರಿ ಆನ್ಯಾಯವನ್ನು ಪ್ರಶ್ನಿಸಲು ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಸಮಾವೇಶಕ್ಕೆ ನೀರಾವರಿ ಹೋರಾಟಗಾರರು ಮುಂದಾಗಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣಾ ಕಾವೇರುತ್ತಿದ್ದಂತೆ ನೀರಾವರಿ ಹೋರಾಟ ಸಮಿತಿ ಕೂಡ ಜಿಲ್ಲೆಯ ರಾಜಕೀಯ ಪಕ್ಷಗಳ ವೈಫ‌ಲ್ಯ, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸರ್ಕಾರಗಳ ನೀರಾವರಿ ತಾರತಮ್ಯದ ಕುರಿತು ಜಿಲ್ಲೆಯ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಮುಂದಿನ ನೀರಾವರಿ ಹೋರಾಟದ ಬಗ್ಗೆ ರೂಪರೇಷ ಸಿದ್ಧಪಡಿಸಲು ನೀರಾವರಿ ಹೋರಾಟ ಸಮಿತಿ ಮುಂದಾಗಿರುವುದು ಜಿಲ್ಲೆಯ ರಾಜಕೀಯ ಪಕ್ಷಗಳಲ್ಲಿ ಸಹಜವಾಗಿಯೆ ತಳಮಳ ಸೃಷ್ಠಿಸಿದೆ.

Advertisement

ಸಮಾವೇಶ ಎಲ್ಲಿ?: ನಗರದ ಬಿಬಿ ರಸ್ತೆಯ ರಿಲಯನ್ಸ್‌ ಪೆಟ್ರೋಲ್‌ ಬಂಕ್‌ ಸಮೀಪದ ಆವರಣದಲ್ಲಿ ಸಮಾವೇಶ ಮಾ.11 ರಂದು ಸೋಮವಾರ ಬೆಳಗ್ಗೆ ಆಯೋಜನೆಗೊಳ್ಳಲಿದೆ. ಅದಕ್ಕೂ ಮೊದಲು ಬೆಳಗ್ಗೆ 10:30ಕ್ಕೆ ನಗರದ ಮರಳು ಸಿದ್ದೇಶ್ವರ ದೇವಾಲಯದ ಬಳಿಯಿಂದ ಸಮಾವೇಶ ನಡೆಯುವ ಸ್ಥಳದವರೆಗೂ ಬೃಹತ್‌ ಮೆರವಣಿಗೆ ನಡೆಸಲು ಕೂಡ ನೀರಾವರಿ ಹೋರಾಟ ಸಮಿತಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಎತ್ತಿನಹೊಳೆ ಶಂಕು ಸ್ಥಾಪನೆಗೆ ದಶಕ : ಎತ್ತಿನಹೊಳೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಸರಿಯಾಗಿ 10 ವರ್ಷ ಕಳೆದಿದೆ. ಆದರೆ, ಈ ಭಾಗಕ್ಕೆ ಹನಿ ನೀರು ಹರಿದಿಲ್ಲ. ಹೀಗಾಗಿ ಸರ್ಕಾರ ಸದಾ ಬಯಲು ಸೀಮೆಯ ಬರಪೀಡಿತ ಜಿಲ್ಲೆಗಳಿಗೆ ನೀರಾವರಿ ಆನ್ಯಾಯ ಮಾಡುತ್ತಿದೆಯೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಆಕೋಶ ವ್ಯಕ್ತಪಡಿಸಿದೆ. ವಿಶೇಷವಾಗಿ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿರುವುದು. ಅಪಾಯಕಾರಿ ನೈಟ್ರೇಜ್‌, ಯುರೇನಿಯಂ ಲವಣಾಂಶಗಳು ಕುಡಿಯುವ ನೀರಿನಲ್ಲಿ ಪತ್ತೆ ಆಗಿರುವುದು, ಬರದಿಂದ ಜಿಲ್ಲೆಯಲ್ಲಿ ಕೃಷಿ ಹಾಗೂ ಕುಡಿಯುವ ನೀರಿಗೆ ಜನ, ಜಾನುವಾರುಗಳು ಪರಿತಪ್ಪಿಸುತ್ತಿರುವ ಬಗ್ಗೆ ಸರ್ಕಾರದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಗಮನ ಸೆಳೆಯಲು ಮತ್ತೂಮ್ಮೆ ನೀರಾವರಿ ಹೋರಾಟ ಸಮಿತಿ ಸಮಾವೇಶಕ್ಕೆ ಮುಂದಾಗಿದೆ.

ಇಲ್ಲಿವರೆಗೂ ಎತ್ತಿನಹೊಳೆ‌ ಯೋಜನೆ ನೀರು ಹರಿಸಿಲ್ಲ : ಎತ್ತಿನಹೊಳೆಗೆ ಶಿಲಾನ್ಯಾಸ ನೆರವೇರಿಸಿ 10 ವರ್ಷ ಆಯಿತು. ಇಲ್ಲಿವರೆಗೂ ಹಸಿ ನೀರು ಹರಿದಿಲ್ಲ. ಅಂದೇ ಕೇಂದ್ರ ಜಲ ಆಯೋಗ ಎತ್ತಿನಹೊಳೆ ಅವೈಜ್ಞಾನಿಕ ಅಂತ ಹೇಳಿದೆ. ಆದರೂ ರಾಜಕಾರಣಿಗಳು ಯೋಜನೆಯನ್ನು ಚುನಾವಣೆ ಎಟಿಎಂಗಾಗಿ ರೂಪಿಸಿದರು. ನಮಗೆ ಆರೋಗ್ಯ ಪೂರ್ಣ ನೀರು ಬೇಕಿದೆ. ಆಗ ಲೋಕಸಭಾ ಚುನಾವಣೆ ಗೆಲ್ಲುವ ಉದ್ದೇಶದಿಂದ ಎತ್ತಿನಹೊಳಗೆ ಚಾಲನೆ ನೀಡಿದರು.

ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಿ ಮನೆ ಮನೆಗೆ ಶುದ್ಧ ನೀರು ಕೊಡುವುದಾಗಿ ಹೇಳಿದರು. ಆದರೆ ಎತ್ತಿನಹೊಳೆ ಈಗ ಎಲ್ಲಿಗೆ ಬಂದಿದೆ. ಎತ್ತಿನಹೊಳೆ ನೀರಿನ ಲಭ್ಯತೆ, ಪೂರೈಕೆ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲದೇ ಅವೈಜ್ಞಾನಿಕವಾಗಿ ರೂಪಿಸಿದ್ದರಿಂದ ಇಂದು ಸಾವಿರಾರು ಕೋಟಿ ಹಣ ರಾಜಕಾರಣಿಗಳ ಹಾಗೂ ಗುತ್ತಿಗೆದಾರರ ಜೇಬು ತುಂಬಿದೆ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ಆರ್‌.ಆಂಜನೇಯರೆಡ್ಡಿ ಜಿಲ್ಲೆಗೆ ಆಗುತ್ತಿರುವ ನೀರಾವರಿ ಆನ್ಯಾಯಕ್ಕೆ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next