Advertisement

ಪಹಣಿ ಪತ್ರ ಆನ್‌ಲೈನ್‌ನಲ್ಲಿ  ಲಭ್ಯ

08:15 AM Feb 08, 2018 | Team Udayavani |

ಉಡುಪಿ/ಮಂಗಳೂರು: ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳುವ ಮಾದರಿಯಲ್ಲೆ ಸಾರ್ವಜನಿಕರು ಹಾಗೂ ರೈತರು ಇನ್ನು ಮುಂದೆ ಪಹಣಿ ಪತ್ರಗಳನ್ನು ಆನ್‌ಲೈನ್‌ ಮೂಲಕ ಪಡೆದುಕೊಳ್ಳಬಹುದಾಗಿದೆ.

Advertisement

ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್‌ನಿಂದ ಸಾಲ ಪಡೆಯಲು ಬೆಳೆ ವಿಮೆ ಪಡೆಯಲು ಹಾಗೂ ಇನ್ನಿತರ ಸರಕಾರದ ಸೌಲಭ್ಯ ಪಡೆಯಲು ಅಗತ್ಯವಾದ ಪಹಣಿಗಾಗಿ ಸಾರ್ವಜನಿಕರು ಹಾಗೂ ರೈತರು ತಹಶೀಲ್ದಾರ್‌ ಕಚೇರಿ, ನಾಡ ಕಚೇರಿ ಗಳಲ್ಲಿ ಇಡೀ ದಿನ ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿ ಸುವುದಕ್ಕಾಗಿ ಹಾಗೂ ಕ್ಷಣಾರ್ಧದಲ್ಲಿ ಪಹಣಿ ಪತ್ರವನ್ನು ದೂರಕಿಸುವ ಉದ್ದೇಶದಿಂದ ಸರಕಾರವು “ಐ Rಖಇ” ಎಂಬ ವಿಶೇಷ ತಂತ್ರಾಂಶವನ್ನು ಪರಿಚಯಿಸಿದೆ.

ಅದರಂತೆ ಕಂಪ್ಯೂಟರ್‌, ಪ್ರಿಂಟರ್‌ ಮತ್ತು ಇಂಟರ್‌ನೆಟ್‌ ಸಂಪರ್ಕ ಹೊಂದಿರುವವರು ಅಥವಾ ಸೈಬರ್‌ ಕೆಫೆ ಅಥವಾ ಎಲ್ಲೆಂದರಲ್ಲಿ ಯಾವುದೇ ಸಮಯದಲ್ಲಿ ಆನ್‌ ಲೈನ್‌ ಮೂಲಕ ಪಹಣಿ ಪಡೆಯಬಹುದಾಗಿದೆ. /landrecords.karnataka.gov.in ತಾಣಕ್ಕೆ ಭೇಟಿ ನೀಡಿ ಹೆಸರು, ಮೊಬೈಲ್‌ ಸಂಖ್ಯೆ, ಇ-ಮೇಲ್‌ ಐಡಿ, ಆಧಾರ್‌ ಸಂಖ್ಯೆ, ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್‌ ನಮೂ ದಿಸಿ ಡೆಬಿಟ್‌ ಕಾರ್ಡ್‌, ಆನ್‌ಲೈನ್‌ ಬ್ಯಾಂಕಿಂಗ್‌ ಸಹಿತ ಲಭ್ಯವಿರುವ ಹಣ ಪಾವತಿಸುವ ಆಯ್ಕೆಗಳನ್ನು ಬಳಸಿ ರೂ. 10 ಪಾವತಿಸಿ ನಿಮಿಷಗಳಲ್ಲಿ ಖಾಲಿ ಹಾಳೆಯಲ್ಲಿ ಪಹಣಿ ಪಡೆಯಬಹುದಾಗಿದೆ ಎಂದು ಡಿಸಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next