Advertisement

ಸದಭಿರುಚಿ ಚಿತ್ರಕ್ಕೆ ಪ್ರೇಕ್ಷಕರ ಕೊರತೆ : ಪಿ. ಶೇಷಾದ್ರಿ

09:13 AM Mar 31, 2017 | Team Udayavani |

ಉಡುಪಿ: ಕಲಾತ್ಮಕ ಚಿತ್ರಗಳು ಎನ್ನುವುದಕ್ಕಿಂತ ಒಳ್ಳೆಯ- ಕೆಟ್ಟ ಚಿತ್ರಗಳೆನ್ನುವುದು ಸೂಕ್ತ. ಇಂದು ಬೆಟ್ಟದ ಜೀವ, ಅತಿಥಿ, ಡಿ. 1 ಮೊದ ಲಾದ ಸಾಮಾಜಿಕ ಸದಭಿರುಚಿಯ ಚಲನಚಿತ್ರಗಳಿಗೆ ಪ್ರೇಕ್ಷಕರ ಕೊರತೆ ಇದೆ. ಪ್ರೇಕ್ಷಕ ವರ್ಗವನ್ನು ಹಿಡಿ
ದಿಟ್ಟುಕೊಳ್ಳಲು ನೆಟ್‌ವರ್ಕ್‌ ವೃದ್ಧಿ ಯಾಗಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು. ಉಡುಪಿಯಲ್ಲಿ ನಡೆಯಲಿರುವ ತ್ರಿದಿನ ಚಲನಚಿತ್ರೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಗುರುವಾರ ಹೊಟೇಲ್‌ ಡಯಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. 

Advertisement

ಪ್ರೇಕ್ಷಕರ ಕೊರತ: ಒಳ್ಳೆಯ ಚಿತ್ರಗಳಿಗೆ ಪ್ರೇಕ್ಷಕರೇ ಕಡಿಮೆಯಾಗಿದ್ದಾರೆ. ಎಲ್ಲ ದೇಶ, ಭಾಷೆಗಳು ಕೂಡ ಪ್ರೇಕ್ಷಕರ ಕೊರತೆ ಯನ್ನೆದುರಿಸುತ್ತಲಿವೆ. ಹಿಂದೆ ಒಂದು ಚಿತ್ರ ಬಿಡುಗಡೆ ಮಾಡುವುದೇ ಸವಾ ಲಾಗಿತ್ತು. ಆದರೆ ಈಗ ಪ್ರೇಕ್ಷಕರನ್ನು ಸೆಳೆಯುವುದೇ ಕಷ್ಟವಾಗಿ ಬಿಟ್ಟಿದೆ ಎಂದರು.

ಅನ್ಯ ಭಾಷೆಗೆ ಪ್ರಾಮುಖ್ಯತೆ
ಕೇರಳದಲ್ಲಿ 300ಕ್ಕೂ ಅಧಿಕ ಫಿಲ್ಮ್ ಸೊಸೈಟಿಗಳು ಕಾರ್ಯನಿರ್ವಹಿಸುತ್ತಲಿವೆ. ಕರ್ನಾಟಕದಲ್ಲಿ ಸೊಸೈಟಿ ಚಾಲ್ತಿಯಲ್ಲೇ ಇಲ್ಲ. ಸರಕಾರ ಘೋಷಿಸಿರುವ ಜನತಾ ಚಿತ್ರಮಂದಿರಗಳ ನಿರ್ಮಾಣವಾದ ಬಳಿಕ ಸದಭಿರುಚಿ ಚಿತ್ರಗಳಿಗೆ ಚಿತ್ರಮಂದಿರಗಳು ಕೊರತೆಯಾಗವು. ಅನ್ಯ ಭಾಷೆಗಳ ಒತ್ತಡದಿಂದಾಗಿ ಜನಸಂದಣಿ ಇರಬಹುದಾದ ಸಮಯದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸದೆ ಅನ್ಯ ಭಾಷಾ ಚಿತ್ರಕ್ಕೆ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದರು.

ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ರವಿರಾಜ ಎಚ್‌.ಪಿ., ಪೂರ್ಣಿಮಾ ಸುರೇಶ್‌ ಅವರು ಪತ್ರಿಕಾ ಗೋಷ್ಠಿಯಲ್ಲಿದ್ದರು.

“ಮೂಕಜ್ಜಿಯ ಕನಸು’-ಮುಂದಿನ ಚಿತ್ರ
ಸಿನೆಮಾ ಕಲೆ, ಮನೋರಂಜನೆಗೆ ಸೀಮಿತವೆಂದು ತಿಳಿಯಬಾರದು. ಒಂದು ಚಿತ್ರವು ಸಮಾಜದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಬೇಕು. ಡಾ| ಕೆ. ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಕೃತಿಯನ್ನಾಧರಿಸಿ ಚಿತ್ರ ಮಾಡುವ ಚಿಂತನೆ ಇದೆ ಎಂದರು.
 

Advertisement

“ಡಬ್ಬಿಂಗ್‌ ಬೇಡ’
ಡಬ್ಬಿಂಗ್‌ನಿಂದಾಗಿ ಭಾಷೆ ಬೆಳೆಯುವುದಿಲ್ಲ. ಬದಲಾಗಿ ಭಾಷಾ ಸಂಸ್ಕೃತಿಗೆ ಅಪಾಯವಿದೆ. ವ್ಯಾಪಾರೀಕರಣದ ಮನೋಧರ್ಮದಿಂದಾಗಿ ಡಬ್ಬಿಂಗ್‌ಗೆ ಮಣೆ ಹಾಕಲಾಗುತ್ತಿದೆ. ಸರಕಾರಿ ಅಧೀನದ ದೂರದರ್ಶನ ಚಾನೆಲ್‌ ಕೂಡ ಕನ್ನಡದ ಸದಭಿರುಚಿ ಚಿತ್ರಗಳನ್ನು ನಿರ್ಲಕ್ಷಿಸುತ್ತಿದೆ ಎಂದು ವಿಷಾದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next