Advertisement

ಸಿಬಂದಿ ಜತೆಗೆ ರಾಜನ ವಿವಾಹ

09:42 AM May 06, 2019 | Team Udayavani |

ಬ್ಯಾಂಕಾಕ್‌: ಆತ ರಾಜ; ಈಕೆ ಬೆಂಗಾವಲು ಸಿಬ್ಬಂದಿ. ಇಬ್ಬರೂ ಪತಿ-ಪತ್ನಿಯಾಗುವುದಕ್ಕುಂಟೇ? ಥೈಲ್ಯಾಂಡ್‌ನ‌ಲ್ಲಿ ಈ ಅಚ್ಚರಿ ನಡೆದು ಹೋಗಿದೆ.

Advertisement

ರಾಜನಾಗಿ ಪಟ್ಟಾಭಿಷೇಕ ನಡೆಯುವುದಕ್ಕೆ ಮೊದಲೇ ರಾಜ ಮಹಾ ವಾಜಿರಾಲೊಂಕೋರ್ನ್ (66) ವಿವಾಹವಾಗಿರುವ ವಿಚಾರ ಬಹಿರಂಗವಾಗಿದೆ.

ಬೆಂಗಾವಲು ಪಡೆಯ ಉಪ ಮುಖ್ಯಸ್ಥೆ ಸುತಿದಾರನ್ನು ಬುಧವಾರ ಮದುವೆಯಾಗಿ ರಾಣಿ ಸುತಿದಾ ಎಂದು ಹೆಸರನ್ನೂ ಬದಲಾಯಿಸಲಾಗಿದೆ.

ಸುತಿದಾ ಅವರು ಥಾಯ್‌ ಏರ್‌ವೆàಸ್‌ನಲ್ಲಿ ಗಗನಸಖೀಯಾಗಿದ್ದರು. ಅವರನ್ನು ರಾಜ 2014ರಲ್ಲಿ ಬೆಂಗಾವಲು ಪಡೆ ಸಿಬ್ಬಂದಿಯಾಗಿ ನೇಮಿಸಿ ಕೊಂಡಿದ್ದರು. ರಾಜಮನೆ ತನಕ್ಕೆ ಸೇರಿದ ಗಣ್ಯರಲ್ಲದೆ, ಇತರರೂ ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು. ವಿವಾಹವಾದ ಸುದ್ದಿಯನ್ನು ಅರಮನೆಯ ಸುದ್ದಿ ವಿಭಾಗದ ಮೂಲಕ ಪ್ರಕಟಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next