Advertisement
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯಾ ಮೋಟಾರ್ (ಭಾರತ)ನ ವ್ಯವಸ್ಥಾಪಕ ನಿರ್ದೇಶಕ ಕೂಖ್ಯೂಂ ಶಿಮ್ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮನೋಹರ್ ಭಟ್ ಮೊದಲಾದ ಅಧಿಕಾರಿಗಳು ಕಿಯಾ-ಸೆಲ್ಟೊಸ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು.
Related Articles
Advertisement
ಯುವಿಒ ಮೊಬೈಲ್ ಆ್ಯಪ್ ಮೂಲಕ 37 ವಿಶೇಷ ಆಯ್ಕೆಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಇದು ಮೂರು ವರ್ಷಗಳವರೆಗೂ ಉಚಿತವಾಗಿ ಸಿಗಲಿದೆ. ಭದ್ರತೆ, ಸುರಕ್ಷತೆ ಹಾಗೂ ಜಾಗರೂಕತೆಗೆ ಇದು ಸಹಕಾರಿ ಯಾಗಲಿದೆ. ಕಾರಿನ ಒಳಗೆ 10.285 ಎಚ್‌ಡಿ ಟಚ್ ಸ್ಕ್ರೀನ್ ಇದೆ. ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಬಿವಿಎಂ ಒಳಗೊಂಡಿರುವ ಕ್ಯಾಮರ ಅಳವಡಿಸಲಾಗಿದೆ.
ಕಿಯಾ ಸೊಲ್ಟೆಸ್ ಟೆಕ್‌ಲೈನ್ ಮಾದರಿಯ ಡೀಸೆಲ್ ಕಾರುಗಳು 9.99 ಲಕ್ಷ ರೂ.ಗಳಿಂದ 13.79 ಲಕ್ಷದ ವರೆಗೂ, ಪೆಟ್ರೋಲ್ ಕಾರುಗಳು 9.69 ಲಕ್ಷ ರೂ.ಗಳಿಂದ 13.79 ಲಕ್ಷ ರೂ. ಎಕ್ಸ್ ಶೋರೂಂ ದರ ಹೊಂದಿದೆ. ಹಾಗೆಯೇ ಜಿಟಿ ಲೈನ್ ಮಾದರಿಯ ಪೆಟ್ರೋಲ್ ಕಾರುಗಳು 13.49 ಲಕ್ಷ ರೂ.ಗಳಿಂದ 15.99 ಲಕ್ಷ ರೂ. ಎಕ್ಸ್ ಶೋ ರೂಂ ದರ ಹೊಂದಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ವ್ಯವಸ್ಥೆ ಇದ್ದು, ಈಗಾಗಲೇ 32035 ಕಾರು ಬುಕ್ ಆಗಿದೆ.
ಕಾರಿನಲ್ಲಿ ಗ್ರಾಹಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರು ಏರ್ ಬ್ಯಾಗ್‌ಗಳು ಇದರಲ್ಲಿದೆ. ಚಾಲಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ. ನಾಲ್ಕು ಚಕ್ರಕ್ಕೂ ಡಿಸ್ಕ್ ಬ್ರೇಕ್ ಸೇರಿ ಗ್ರಾಹಕರಿಗೆ ಬೇಕಾದ ಸಂಪೂರ್ಣ ಸುರಕ್ಷತೆ ಕಿಯಾ-ಸೆಲ್ಟೊಸ್‌ನಲ್ಲಿದೆ.-ಮನೋಹರ್ ಭಟ್, ಉಪಾಧ್ಯಕ್ಷ, ಮಾರುಕಟ್ಟೆ ವಿಭಾಗ ಸಂಸ್ಥೆಯ ಕಾರು ತಯಾರಿಕ ಘಟಕವು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದ್ದು, ವರ್ಷಕ್ಕೆ 3 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಗ್ರಾಹಕರಿಗೆ ಯಾವುದೇ ರೀತಿಯ ವಿಳಂಬ ಇಲ್ಲದೆ ಸೂಕ್ತ ಸಮಯದಲ್ಲಿ ಕಾರು ಒದಗಿಸುತ್ತೇವೆ.
-ಕೂಖ್ಯೂಂ ಶಿಮ್, ವ್ಯವಸ್ಥಾಪಕ ನಿರ್ದೇಶಕ, ಕಿಯಾ ಮೋಟಾರ್ (ಭಾರತ)