Advertisement

ಪೊಲೀಸರೆಂದು ನಂಬಿಸಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ದೋಚಿದ ಖದೀಮರು

02:12 PM Mar 18, 2023 | Team Udayavani |

ಗಂಗಾವತಿ: ನಗರದಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿಸಿದ್ದು ಪೊಲೀಸರೆಂದು ಗೃಹಿಣಿಯೊರ್ವಳನ್ನು ನಂಬಿಸಿ ೫೦ ಗ್ರಾಂ ಚಿನ್ನದ ಸರವನ್ನು ದೋಚಿಕೊಂಡು ಹೋಗಿರುವ ಪ್ರಕರಣ ನಗರದ ಬಸ್ಟ್ಯಾಂಡ್ ರಸ್ತೆಯಲ್ಲಿರುವ ಮಾಜಿ ಶಾಸಕ ಎಚ್ಎಸ್ ಮುರಳಿದರ ಮನೆ ಹತ್ತಿರ ಶನಿವಾರ ಮಧ್ಯಾಹ್ನ ಜರುಗಿದೆ.

Advertisement

ಪಾರ್ವತಮ್ಮ ಗಂಡ ಭೋಜಪ್ಪ ಎಂಬ ಗ್ರಹಿಣಿ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ತೆಗೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ಯುವಕರಿಬ್ಬರು ಪಾರ್ವತಮ್ಮ ಇವರನ್ನು ಮಾತನಾಡಿಸಿ ನಗರದಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ನೀವು ಧರಿಸಿರುವ ಚಿನ್ನದ ಸರವನ್ನು ಬಿಚ್ಚಿ ಚೀಲದಲ್ಲಿ ಹಾಕಿಕೊಂಡು ಹೋಗುವಂತೆ ಸೂಚಿಸಿದ್ದಾರೆ. ಇದನ್ನು ಪ್ರಶ್ನಿಸಿದ ಪಾರ್ವತಮ್ಮಗೆ ನಾವು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡುತ್ತಿದ್ದೇವೆ ಕೂಡಲೇ ಚಿನ್ನದ ಸರವನ್ನು ಬಿಚ್ಚಿಕೊಂಡು ಕೈಚೀಲದಲ್ಲಿ ಹಾಕಿಕೊಳ್ಳುವಂತೆ ತಿಳಿಸಿದ್ದಾರೆ.

ಕಳ್ಳರ ಮಾತನ್ನು ನಂಬಿದ ಪಾರ್ವತಮ್ಮ ಐದು ಗ್ರಾಂ 50 ಗ್ರಾಂ ಚಿನ್ನದ ಸರ ವನ್ನು ಬಿಚ್ಚಿ ಕೈಚೀಲದಲ್ಲಿ ಹಾಕಿಕೊಳ್ಳುವ ಸಂದರ್ಭದಲ್ಲಿ ನೆರವಾಗುವ ನೆಪದಲ್ಲಿ ಚಿನ್ನದ ಸರವನ್ನು ಯಾಮಾರಿಸಿ ದೋಚಿ ಬೈಕ್ ಮೂಲಕ ಪರಾರಿಯಾಗಿದ್ದು ಮನೆಗೆ ಹೋಗಿ ಕೈ ಚೀಲದಲ್ಲಿ ಸರವನ್ನು ನೋಡಿದಾಗ ಮಾಂಗಲ್ಯ ಸರ ಇಲ್ಲದನ್ನು ಕಂಡು ಪಾರ್ವತಮ್ಮ ಗಾಬರಿಯಾಗಿದ್ದಾರೆ ಕೂಡಲೇ ಪೊಲೀಸ್ ಠಾಣೆಗೆ ತಿಳಿಸಿದ್ದು ಪೊಲೀಸರು ಕಾರ್ಯಾಚರಣೆ ನಡೆಸಿ‌ ಸುತ್ತಲಿನ ಸಿಸಿ ಕ್ಯಾಮೆರಗಳನ್ನು ಪರಿಶೀಲಿಸಿದಾಗ ಇಬ್ಬರು ಬೈಕ್ ಮೇಲೆ ಬಂದು ಸರ ಕಳ್ಳತನ ಮಾಡಿರುವ ವಿಡಿಯೋ ಕಂಡು ಬಂದಿದೆ. ಪೊಲೀಸರು ಪತ್ತೆ ಗಾಗಿ ಹೊಸಪೇಟೆ, ಕಂಪ್ಲಿ,ಕಾರಟಗಿ, ಕುಷ್ಟಗಿ,ತಾವರಗೇರಾ ಮತ್ತು ಕೊಪ್ಪಳ ಪೊಲೀಸ್ ಠಾಣೆಗೆ ವಿಡಿಯೋ ಪೋಟೆಜ್ ಸಮೇತ ಮಾಹಿತಿಯನ್ನ ಕಳಿಸಿದ್ದಾರೆ.

ನಗರ ಠಾಣೆಯಲ್ಲಿ ಸರ ಕಳೆದುಕೊಂಡಿರುವ ಪಾರ್ವತಮ್ಮ ಗಂಡ ಭೋಜಪ್ಪ ಮನವಿಯ ಮೇರೆಗೆ ದೂರು ದಾಖಲಿಸಿಕೊಂಡಿದ್ದು ಶೀಘ್ರವೇ ಕಳ್ಳರನ್ನು ಪತ್ತೆ ಮಾಡಿ ಸರವನ್ನು ಸಂಬಂಧಪಟ್ಟವರಿಗೆ ಒಪ್ಪಿಸಲಾಗುತ್ತದೆ ಎಂದು ನಗರ ನಗರ ಠಾಣೆಯ ಪಿ ಐ ಅಡಿವೆಪ್ಪ ಉದಯವಾಣಿ ಜೊತೆ ಮಾತನಾಡಿ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next