Advertisement

ಕುತ್ಪಾಡಿಯಲ್ಲಿ ಮುದ ನೀಡಿದ ಕೆಸರ್ಡ್ ಗೊಬ್ಬು ಕ್ರೀಡಾಕೂಟ

02:50 AM Jul 17, 2017 | Harsha Rao |

ಮಲ್ಪೆ: ಅಲ್ಲಿ ಜಾತಿ, ಮತ, ಧರ್ಮ, ಪಕ್ಷಭೇದ ವಿಲ್ಲದೆ ಮಕ್ಕಳು, ಯುವಕ ಯುವತಿಯರು, ಮಹಿಳೆಯರು ಪುರುಷರು ಉತ್ಸಾಹದಿಂದ ಕೆಸರು ಗದ್ದೆಯಲ್ಲಿ ಕುಣಿದು ಕುಪ್ಪಳಿಸಿದರು. ಸ್ಪರ್ಧಿಗಳು ಎದ್ದು ಬಿದ್ದು  ಓಡಿದರು. ಸ್ಪರ್ಧಾಳುಗಳು ಗುರಿಮುಟ್ಟುವ ವೇಗದಲ್ಲಿ ಕೆಲವರು ಕೆಸರಲ್ಲಿ ಬಿದ್ದರು. ಕೆಸರು ಗದ್ದೆಯನ್ನು ಕ್ರಮಿಸಲು ಕೆಲವರು ಸಾಧ್ಯವಾಗದೆ ಅರ್ಧದಲ್ಲೆ ಬಿದ್ದು ನೋಡುಗರ ಮುಂದೆ ಮುಜುಗರಕ್ಕೊಳಗಾದರು.  ಮತ್ತೆ ಕೆಲವರು ಬಿದ್ದರೂ ಎದ್ದು ಛಲ ಬಿಡದೆ ಓಟವನ್ನು ಮುಂದುವರಿಸಿ ಗುರಿಮುಟ್ಟುವ ಪ್ರಯತ್ನವನ್ನು ನಡೆಸಿದರು. ಕೆಸರನ್ನು ಮೈಗೆ ಮೆತ್ತಿಕೊಂಡರು. ಕೆಸರನ್ನು ಚಿಮ್ಮಿಸುತ್ತಾ ಗುರಿಯಡೆಗೆ ಮುನ್ನುಗ್ಗುತ್ತಿರುವ ದೃಶ್ಯ ರೋಮಾಂಚನವಾಗಿತ್ತು. ಕೆಲವರು ಓಟದಲ್ಲಿ ಭಾಗವಹಿಸುತ್ತಿದ್ದ ತಮ್ಮ ಗೆಳೆಯರನ್ನು ಹುರಿದುಂಬಿಸುತ್ತಿದ್ದರು.

Advertisement

ಇದು ರವಿವಾರ ಕಡೆಕಾರು  ಗ್ರಾಮ ಪಂಚಾಯತ್‌ ವ್ಯಾಪ್ತಿಯ ಎಲ್ಲ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕುತ್ಪಾಡಿ ಗರೋಡಿ ಬಳಿ ನಡೆದ ಕೆಸರ್ಡ್ ಗೊಬ್ಬು ಕಾರ್ಯಕ್ರಮದ ಝಲಕ್‌. ಇಂದು ಕೃಷಿ ಸಂಸ್ಕೃತಿ ಕಣ್ಮರೆಯಾಗುತಿದ್ದು ಕೃಷಿ ಬದುಕು ನಮಗೆ ನೀಡುತ್ತಿದ್ದ ಸಂಸ್ಕೃತಿ, ನೆಮ್ಮದಿ ಸೌಹಾರ್ದ ಎಲ್ಲವೂ ದೂರವಾಗುತ್ತಿದೆ. ಕರಾವಳಿಯ ಜಾನಪದ ಕೀÅಡೆಗಳಲ್ಲಿ ಕೆಸರುಗದ್ದೆ ಕೀÅಡೆ ಎಂದರೆ ಹಳ್ಳಿ ಜನರಿಗೆ ಎಲ್ಲಿಲ್ಲದ ಪೀÅತಿ.  ಪಾರಂಪರಿಕವಾಗಿ ಬೆಳೆದು ಬಂದ ಜನಪದ ಕೀÅಡೆಗಳು ಇಂದಿನ ಕಂಪ್ಯೂಟರ್‌ ಯುಗದಲ್ಲಿ ಮೂಲೆ ಗುಂಪಾಗುತ್ತಿವೆ. ಕೆಸರು ಗದ್ದೆ ಜನಪದ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ  ಕಡೆಕಾರು ಗ್ರಾ.ಪಂ. ವ್ಯಾಪ್ತಿಯ ಎಲ್ಲ ಸಂಘ ಸಂಸ್ಥೆಗಳ (26 ಸಂಘಟನೆಗಳು) ಸಹಯೋಗದೊಂದಿಗೆ ಕೆಸರುಡೊಂಜಿ ದಿನ ಕೀÅಡಾಕೂಟವನ್ನು ಆಯೋಜಿಸಲಾಗಿತ್ತು.

ಕೆಸರು ಗದ್ದೆ ಆಟವನ್ನು ಕಣ್ತುಂಬ ಕಾಣಲು ಗ್ರಾಮದ ನೂರಾರು ಜನರು ಜಮಾಯಿಸಿದ್ದರು. ವೈವಿಧ್ಯಮಯ ಸ್ಪರ್ಧೆಗಳು ನಡೆದವು. ಪುರುಷರ ತಂಡ ವಿಭಾಗದಲ್ಲಿ ಹಗ್ಗಜಗ್ಗಾಟ, ವಾಲಿಬಾಲ್‌, ಗೋಣಿ ಓಟ, ಹಾಳೆಗರಿ ಓಟ, ಮಾನವ ಗೋಪುರ, ರಿಲೇ, ತಪ್ಪಂಗಾಯಿ, ಹಿಂಬದಿ ಓಟ, ದಂಡದ ತುದಿ, ಸಂಖ್ಯಾ ರಚನೆ, ಮಹಿಳೆಯರ ತಂಡ ವಿಭಾಗದಲ್ಲಿ ಹಗ್ಗಜಗ್ಗಾಟ, ತ್ರೋಬಾಲ್‌, ರಿಲೇ, ಹಾಳೆಗರಿ ಓಟ, ಗಿಡ ಓಟ, ಜೋಡಿ ಸೇರು, ಮಡಕೆ ಒಡೆತ, ನಿಧಿ ಶೋಧ, ಹಿಂಬದಿ ಓಟ, ದಂಡದ ತುದಿ, ಮಕ್ಕಳಿಗಾಗಿ ಗಿಡ ಓಟ, ಹಿಂಬದಿ ಓಟ, 100ಮೀ ಓಟ, ಗರಂ ಪತ್ತಣಿ, ಹರಣ್ಣ ತುರಣ್ಣ ಆಟ ನೋಡುಗರನ್ನು ರೋಮಾಂಚನಗೊಳಿಸಿತು.

ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಮಧ್ಯಾಹ್ನ ಗಂಜಿ ಊಟ ಮತ್ತು ಚಟ್ನಿಯ ರುಚಿಯನ್ನು ಸವಿದರು. ಕಾರ್ಯಕ್ರಮದ ಉದ್ದಕ್ಕೂ ಜಾನಪದ ಸಂಗೀತದ ನಿನಾದ ಮೇಳೈಸುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next