Advertisement

ಕರ್ತಾರ್ಪುರ ಕಾರಿಡಾರ್‌ ಮುಗಿಯದ ಬಿಕ್ಕಟ್ಟು

12:28 PM Nov 10, 2021 | Team Udayavani |
ಸಿಕ್ಖ್ ರ ಧಾರ್ಮಿಕ ಮನೋಭಾವಕ್ಕೆ ಘಾಸಿಯಾಗದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.  ಅತ್ತ ಕಾಂಗ್ರೆಸ್‌ ಕೂಡ ಕರ್ತಾರ್ಪುರ ಕಾರಿಡಾರ್‌ ವಿಚಾರದಲ್ಲಿ ಬೇರೆಯದ್ದೇ ರೀತಿಯ ರಾಜಕೀಯ ಮಾಡುತ್ತಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಚನ್ನಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಕಾರಿಡಾರ್‌ ತೆರೆಯುವ ಕುರಿತಂತೆ ಆಗ್ರಹ ಮಾಡಿದ್ದಾರೆ. ಕಾರಿಡಾರ್‌ ಅನ್ನು ಮುಚ್ಚಿ ಆಗಲೇ ಒಂದು ವರ್ಷದ ಮೇಲಾಗಿದೆ. ಈಗಲಾದರೂ, ಕಾರಿಡಾರ್‌ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಸರಕಾರ ಮಾತ್ರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಮಯ ನೋಡಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಹೇಳುತ್ತಿದೆ.
Now pay only for what you want!
This is Premium Content
Click to unlock
Pay with

ಸಿಕ್ಖ್  ಧರ್ಮಗುರು ಬಾಬಾ ನಾನಕ್‌ ಅವರು ಸ್ಥಾಪಿಸಿದಂಥ ಕರ್ತಾರ್ಪುರ ದಲ್ಲಿನ ದರ್ಬಾರ್‌ ಸಾಹೀಬ್‌ ಗುರುದ್ವಾರ ಮತ್ತು ಭಾರತ-ಪಾಕಿಸ್ಥಾನದ ಕರ್ತಾರ್ಪುರ ಕಾರಿಡಾರ್‌ ಕುರಿತ ವಿಚಾರ ಮತ್ತೆ ಚರ್ಚೆಯಲ್ಲಿದೆ. ಸರಿಯಾಗಿ ಮಂಗಳವಾರಕ್ಕೆ ಕರ್ತಾರ್ಪುರ ಕಾರಿಡಾರ್‌ ಓಪನ್‌ ಆಗಿ 2 ವರ್ಷಗಳಾಗಲಿವೆ. ಆದರೆ ಕಳೆದೊಂದು ವರ್ಷದಿಂದ ಈ ಕಾರಿಡಾರ್‌ ಮುಚ್ಚಿದ್ದು, ಮತ್ತೆ ತೆರೆಯಬೇಕೇ ಅಥವಾ ಬೇಡವೇ ಎಂಬ ಚರ್ಚೆ ಶುರುವಾಗಿದೆ. ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಇದೇ ಪ್ರಮುಖ ವಿಷಯವಾಗುವ ಸಾಧ್ಯತೆಯೂ ಇದೆ.

Advertisement

2019 ನವೆಂಬರ್‌ 9
ಸ್ವಾತಂತ್ರ್ಯಾನಂತರದಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವಿನ ಒಮ್ಮತದ ನಿರ್ಧಾರವೆಂದರೆ ಅದು ಕರ್ತಾ ರ್ಪುರ ಕಾರಿಡಾರ್‌ ನಿರ್ಮಾಣ. ಭಾರತದ ಗಡಿಗೆ ಹೊಂದಿಕೊಂಡಂತಿರುವ, ಪಾಕ್‌ ನೆಲದಲ್ಲಿರುವ ಕರ್ತಾರ್ಪುರದಲ್ಲಿ ದರ್ಬಾರ್‌ ಸಾಹೀಬ್‌ ಗುರುದ್ವಾರವಿದೆ. ಇದನ್ನು ಸಿಕ್ಖ್ ರ ಧರ್ಮಗುರು ಗುರು ನಾನಕ್‌ ಅವರೇ ಸ್ಥಾಪಿಸಿದರು ಎಂಬ ನಂಬಿಕೆ ಈ ಸಮುದಾಯದಲ್ಲಿದೆ. ವಿಶೇಷವೆಂದರೆ, ಇದು ಭಾರತ-ಪಾಕ್‌ ಗಡಿಯಲ್ಲಿ ನಿಂತು ನೋಡಿದರೆ, ಬರೀ ಗಣ್ಣಿಗೆ ಕಾಣುವಷ್ಟು ಹತ್ತಿರದಲ್ಲೇ ಇದೆ. ಸ್ವಾತಂತ್ರಾéನಂತರದಲ್ಲಿ ಈ ಕರ್ತಾರ್ಪುರ ಅಭಿವೃದ್ಧಿಗಾಗಿ ನಾನಾ ಪ್ರಯತ್ನಗಳಾಗಿದ್ದವು. ಆದರೆ, ಇವ್ಯಾವುದೂ ಯಶಸ್ವಿಯಾಗಿರಲಿಲ್ಲ. ವಾಜಪೇಯಿ ಅವರು ಭಾರತದಲ್ಲಿ, ನವಾಜ್‌ ಷರೀಫ್ ಅವರು ಪಾಕಿಸ್ಥಾನದಲ್ಲಿ ಪ್ರಧಾನಿಗಳಾಗಿದ್ದ ವೇಳೆಯಲ್ಲಿ ಕರ್ತಾರ್ಪುರ ಕಾರಿಡಾರ್‌ ನಿರ್ಮಾಣದ ಬಗ್ಗೆ ನಿರ್ಧಾರವಾಗಿತ್ತು. ಆದರೆ, ನಂತರದ ದಿನಗಳಲ್ಲಿ ಎರಡೂ ದೇಶಗಳ ನಡುವೆ ಆಗಾಗ ವೈಮನಸ್ಸು ಬೆಳೆಯುತ್ತಲೇ ಇದ್ದುದರಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ಆದರೆ, 2018ರಲ್ಲಿ ಭಾರತ ಮತ್ತು ಪಾಕಿಸ್ಥಾನಗಳೆರಡೂ ಒಪ್ಪಿ ಈ ಕಾರಿಡಾರ್‌ ಆರಂಭಕ್ಕೆ ನಿರ್ಧಾರ ಮಾಡಿದ್ದವು. ಅದರಂತೆ, ಪಾಕಿಸ್ಥಾನದಲ್ಲಿ ಗುರುದ್ವಾರವನ್ನು ಜೀರ್ಣೋದ್ಧಾರ ಮಾಡುವುದು, ಇತ್ತ ಭಾರತದಿಂದ ಅಲ್ಲಿಗೆ ಹೋಗುವವರಿಗೆ ರಸ್ತೆ ನಿರ್ಮಾಣ ಮಾಡಿಕೊಡುವ ನಿರ್ಧಾರವಾಗಿತ್ತು. ಅದರಂತೆ,  2019ರ ನವೆಂಬರ್‌ 9ರಂದು ಈ ಯೋಜನೆಯನ್ನು ಪಾಕಿಸ್ಥಾನ ಮತ್ತು ಭಾರತದಲ್ಲಿ ಆರಂಭ ಮಾಡಲಾಗಿತ್ತು.

ಕಾರಿಡಾರ್‌ ಓಪನ್‌; ಈಗ ಚುನಾವಣ ವಿಚಾರ
ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರ್ತಾರ್ಪು ಕಾರಿಡಾರ್‌ ಅನ್ನು ತೆರೆಯುವ ವಿಚಾರ ಮುನ್ನೆಲೆಗೆ ಬಂದಿದೆ. ಈಗಾಗಲೇ ಬಿಜೆಪಿ ಈ ಕಾರಿಡಾರ್‌ ಅನ್ನು ತೆರೆಯುವ ಕುರಿತಂತೆ ಕೇಂದ್ರ ಸರಕಾರದ ಮಟ್ಟದಲ್ಲಿ ಸಾಧ್ಯಾಸಾಧ್ಯತೆಗಳ ಬಗ್ಗೆ ಚರ್ಚೆಗಳಾಗುತ್ತಿವೆ ಎಂದು ಹೇಳಿದೆ. ಅಲ್ಲದೇ, ಸಿಕ್ಖ್ ರ ಧಾರ್ಮಿಕ ಮನೋಭಾವಕ್ಕೆ ಘಾಸಿಯಾಗದಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.  ಅತ್ತ ಕಾಂಗ್ರೆಸ್‌ ಕೂಡ ಕರ್ತಾರ್ಪುರ ಕಾರಿಡಾರ್‌ ವಿಚಾರದಲ್ಲಿ ಬೇರೆಯದ್ದೇ ರೀತಿಯ ರಾಜಕೀಯ ಮಾಡುತ್ತಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಚನ್ನಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ, ಕಾರಿಡಾರ್‌ ತೆರೆಯುವ ಕುರಿತಂತೆ ಆಗ್ರಹ ಮಾಡಿದ್ದಾರೆ. ಕಾರಿಡಾರ್‌ ಅನ್ನು ಮುಚ್ಚಿ ಆಗಲೇ ಒಂದು ವರ್ಷದ ಮೇಲಾಗಿದೆ. ಈಗಲಾದರೂ, ಕಾರಿಡಾರ್‌ ತೆರೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಆದರೆ, ಕೇಂದ್ರ ಸರಕಾರ ಮಾತ್ರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಸಮಯ ನೋಡಿ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಹೇಳುತ್ತಿದೆ.

ಇದನ್ನೂ ಓದಿ:ಐಸಿಸಿ ಟಿ-20 ವಿಶ್ವಕಪ್: ಕ್ಯಾಪ್ಟನ್‌ ಕೊಹ್ಲಿಗೆ ಗೆಲುವಿನ ವಿದಾಯ

ಕೇವಲ 59 ಸಾವಿರ ಮಂದಿ ಭೇಟಿ
2019ರ ನ.9ರಂದು ಈ ಕಾರಿಡಾರ್‌ ಓಪನ್‌ ಆಗಿದ್ದರೂ, ಇದುವರೆಗೆ ಭಾರತದ ಕಡೆಯಿಂದ ಅಲ್ಲಿಗೆ ಭೇಟಿ ಕೊಟ್ಟಿದ್ದು ಕೇವಲ 59 ಸಾವಿರ ಮಂದಿ. ಇದಕ್ಕೆ ಕಾರಣ ಪಾಕಿಸ್ಥಾನವೇ ಕಾರಣ. ದಿನಕ್ಕೆ ಕೇವಲ 5 ಸಾವಿರ ಯಾತ್ರಾರ್ಥಿಗಳ ಬೇಟಿಗೆ ಅವಕಾಶ ಕೊಟ್ಟಿರುವ ಅದು, ವಿಶೇಷ ದಿನದಂದು 10 ಸಾವಿರ ಮಂದಿಗೆ ಅವಕಾಶ ಕೊಟ್ಟಿದೆ. ಆದರೂ, ಗುರುದ್ವಾರಕ್ಕೆ ಭೇಟಿ ನೀಡಿದವರ ಸಂಖ್ಯೆ ಮಾತ್ರ ಕಡಿಮೆಯೇ.

Advertisement

ಭಾರತಕ್ಕೇ ಸೇರಬೇಕಾಗಿತ್ತು!
ಕರ್ತಾರ್ಪುರ ಕಾರಿಡಾರ್‌ನಲ್ಲಿರುವ ದರ್ಬಾರ್‌ ಸಾಹೀಬ್‌ ಗುರುದ್ವಾರವನ್ನು ಗುರು ನಾನಕ್‌ ಅವರೇ ಸ್ಥಾಪನೆ ಮಾಡಿರುವುದರಿಂದ ಸಿಖVರ ಪಾಲಿಗೆ ಪವಿತ್ರವಾದ ಸ್ಥಳ. ಆದರೆ, ಸ್ವಾತಂತ್ರ್ಯಾನಂತರದಲ್ಲೇ ಒಂದಷ್ಟು ಪ್ರಯತ್ನ ಮಾಡಿದ್ದರೆ, ಈ ಸ್ಥಳವನ್ನು ಭಾರತಕ್ಕೆ ಸೇರಿಸಬಹುದಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಅಂದರೆ, 1947ರಲ್ಲಿ ಭಾರತ-ಪಾಕ್‌ ವಿಭಜನೆಯಾದಾಗ, ರಾವಿ ನದಿಯ ಬಲಭಾಗದ ದಡ, ಅಂದರೆ, ಕರ್ತಾರ್ಪುರ ಸೇರಿದಂತೆ ಎಲ್ಲಾ ಪ್ರದೇಶಗಳು ಪಾಕಿಸ್ಥಾನಕ್ಕೆ ಹೋದವು. ರಾವಿ ನದಿಯ ಎಡಭಾಗ ಭಾರತದ ಪಾಲಿಗೆ ಬಂದಿತು. 1948ರಲ್ಲಿ ಅಕಾಲಿ ದಳ ಕರ್ತಾರ್ಪುರವನ್ನು ಭಾರತದೊಳಗೇ ಸೇರಿಸುವಂತೆ ಒತ್ತಡ ತಂದಿತ್ತು. 1959ರ ವರೆಗೂ ಇದೇ ಒತ್ತಡ ಇತ್ತು. ಆದರೆ, ಆಗಿನ ಪಂಜಾಬ್‌ನಲ್ಲಿದ್ದ ಸರಕಾರ, ಗಡಿಯನ್ನು ಬದಲಿಸುವ ಬಗ್ಗೆ ನಕಾರಾತ್ಮಕ ಧೋರಣೆ ತೆಗೆದುಕೊಂಡಿತು. ವಿಶೇಷವೆಂದರೆ, 1965ರ ವರೆಗೂ ಕರ್ತಾರ್ಪುರಕ್ಕೆ ಹೋಗಿಬರಲು ಭಾರತೀಯರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ರಾವಿ ನದಿಯ ಮೇಲೊಂದು ಸೇತುವೆ ಇದ್ದು, ಅದರ ಮೂಲಕವೇ ಹೋಗಿ ಬರುತ್ತಿದ್ದರು. ಆದರೆ, 1965ರಲ್ಲಿ ಭಾರತ-ಪಾಕಿಸ್ಥಾನದ ನಡುವೆ ನಡೆದ ಯುದ್ಧದಲ್ಲಿ ಈ ಸೇತುವೆ ನಾಶವಾಯಿತು. ಗಡಿಯೂ ಭದ್ರವಾಯಿತು.

ಇಂದಿರಾ ಗಾಂಧಿ ಕಾಲದಲ್ಲಿ ಪ್ರಯತ್ನ
1969ರಲ್ಲಿ ಕೇಂದ್ರದಲ್ಲಿ ಇಂದಿರಾ ಗಾಂಧಿ ಸರಕಾರವಿತ್ತು. ಆಗ ಅವರು ಪಾಕಿಸ್ಥಾನದ ಜತೆ ಮಾತನಾಡಿ ಕರ್ತಾರ್ಪುರದಲ್ಲಿನ ಗುರುದ್ವಾರವನ್ನು ಭಾರತಕ್ಕೆ ಸೇರಿಸುವುದು, ಇದಕ್ಕೆ ಬದಲಾಗಿ ಬೇರೊಂದು ಪ್ರದೇಶವನ್ನು ಪಾಕ್‌ಗೆ ಬಿಟ್ಟುಕೊಡುವ ಬಗ್ಗೆ ಚರ್ಚೆಗಳಾಗಿದ್ದವು. ಆದರೆ, ಇದು ಈಡೇರಲೇ ಇಲ್ಲ. 1974ರಲ್ಲಿ ಪಾಕಿಸ್ಥಾನದ ಕೆಲವೊಂದು ಧಾರ್ಮಿಕ ಸ್ಥಳಗಳಿಗೆ ಭಾರತೀಯರು ಭೇಟಿ ಕೊಡುವ ಬಗ್ಗೆ ಮಾತುಕತೆಯಾಗಿ ನಿರ್ಧಾರವಾಗಿತ್ತು. ಆದರೆ, ಇದರಲ್ಲಿ ಕರ್ತಾರ್ಪುರ ಸೇರಲೇ ಇಲ್ಲ. ವಿಚಿತ್ರವೆಂದರೆ, 2003ರ ವರೆಗೂ ಪಾಕಿಸ್ಥಾನ ಕೂಡ ಕರ್ತಾರ್ಪುರವನ್ನು ಅಭಿವೃದ್ಧಿಪಡಿಸುವ ಗೋಜಿಗೇ ಹೋಗಿರಲಿಲ್ಲ.

ಸದ್ಯ ಕಾರಿಡಾರ್‌ ಬಂದ್‌
ಕೊರೊನಾ ಕಾರಣದಿಂದಾಗಿ 2020ರ ಮಾರ್ಚ್‌ 16ರಂದು ಕರ್ತಾರ್ಪುರ ಕಾರಿಡಾರ್‌ ಅನ್ನು ಮುಚ್ಚಲಾಗಿದೆ. ಈಗಲೂ ಈ ಗುರುದ್ವಾರ ಓಪನ್‌ ಆಗಿಲ್ಲ. ಈ ಹಿಂದೆ ಪಾಕಿಸ್ಥಾನ ಒಂದೆರಡು ಬಾರಿ ಕಾರಿಡಾರ್‌ ಅನ್ನು ಮುಕ್ತಗೊಳಿಸುವ ಬಗ್ಗೆ ಮಾತನಾಡಿದರೂ, ಭಾರತದ ಕಡೆಯಿಂದ ಒಪ್ಪಿಗೆ ಸಿಗಲಿಲ್ಲ. ಈಗಲೂ ಕಾರಿಡಾರ್‌ ಅನ್ನು ತೆರೆಯಲು ಎರಡೂ ಕಡೆಯಲ್ಲೂ ಪ್ರಯತ್ನಗಳಾಗುತ್ತಿವೆ.

ನಿರ್ವಹಣಾ ಮಂಡಳಿಗೆ ಮುಸ್ಲಿಂ ಅಧ್ಯಕ್ಷ
ಸದ್ಯ ಗುರುದ್ವಾರ ದರ್ಬಾರ್‌ ಸಾಹೀಬ್‌ ನಿರ್ವಹಣೆಗಾಗಿ ಪಾಕಿಸ್ಥಾನ ಸರಕಾರ 126 ಸದಸ್ಯರ ಯೋಜನಾ ನಿರ್ವಹಣಾ ಘಟಕ(ಪಿಎಂಯು) ರಚಿಸಿದೆ. ಇದು ಈ ಗುರುದ್ವಾರದ ದಿನನಿತ್ಯದ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಆದರೆ, ಈ ಘಟಕಕ್ಕೆ ಪಾಕಿಸ್ಥಾನ ಸರಕಾರ, ಸಿಖ್‌ ವ್ಯಕ್ತಿಯನ್ನು ಬಿಟ್ಟು, ಮುಸ್ಲಿ ವ್ಯಕ್ತಿಯೊಬ್ಬರನ್ನು ಸಿಇಓ ಆಗಿ ನೇಮಿಸಿದೆ. ಇದು ಸಿಕ್ಖ್ ರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೇ, ಈ ಸಮಿತಿಯಲ್ಲಿ ಹೆಚ್ಚಿನ ಸದಸ್ಯರು ಮುಸ್ಲಿಮರೂ ಇದ್ದಾರೆ. ಈ ಬಗ್ಗೆ ಸಿಖV ಮಂಡಳಿಗಳು ಮತ್ತು ಭಾರತವೂ ಆಕ್ಷೇಪ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.