Advertisement

‘ಕರ್ನಾಟಕ -ಭಾರತ್‌ ಗೌರವ್‌ ಕಾಶಿ ದರ್ಶನ’ ರೈಲು ಶೀಘ್ರವೇ ಆರಂಭ

05:17 PM Oct 20, 2022 | Team Udayavani |

ಬೆಂಗಳೂರು: ಅಕ್ಟೋಬರ್‌ 30 ರ ಒಳಗಾಗಿ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ‘ಕರ್ನಾಟಕ – ಭಾರತ್‌ ಗೌರವ್‌ ಕಾಶಿ ದರ್ಶನ್‌’ ರೈಲಿನ ಸಿದ್ದತೆಗಳನ್ನು ಪೂರ್ಣಗೊಳಿಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಐಆರ್‌ಸಿಟಿಸಿ, ಕೆಎಸ್‌ಟಿಡಿಸಿ ಮತ್ತು ರೈಲ್ವೇ ಅಧಿಕಾರಿಗಳು ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಿದ್ದತೆಗಳನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕಾಶಿಯ ಭವ್ಯತೆಯನ್ನ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಆನಂದಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿಯ ಬಜೆಟ್‌ ನಲ್ಲಿ ರಿಯಾಯಿತಿ ದರದ ಪ್ಯಾಕೇಜ್‌ ಪ್ರವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರು ಮುತುವರ್ಜಿಯಿಂದ ಭಾರತ್‌ ಗೌರವ್‌ ಯೋಜನೆಯ ಅಡಿಯಲ್ಲಿ ವಿಶೇಷ ರೈಲನ್ನು ಸಿದ್ದಗೊಳಿಸಲಾಗಿದೆ. ಈ ಸಿದ್ದತೆಗಳು ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ರೈಲು ಉದ್ಘಾಟನೆಗೆ ಸಿದ್ದವಾಗಲಿದೆ.

ಇದನ್ನೂ ಓದಿ:ಫಿಫಾ ಫುಟ್‌ ಬಾಲ್‌ ವೀಕ್ಷಿಸಲು ಜೀಪ್‌ ನಲ್ಲಿ ಒಂಟಿಯಾಗಿ ಕತಾರ್‌ ಗೆ ಹೊರಟ ಮಹಿಳೆ..!

ಕೆಲವು ದಿನಗಳ ಹಿಂದೆ ಕೇಂದ್ರ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಮಹತ್ವಕಾಂಕ್ಷಿ ಯೋಜನೆ ಪ್ರಾರಂಭಕ್ಕೆ ಇದ್ದಂತಹ ಕೆಲವು ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕೆ ಮನವಿಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರೈಲ್ವೇ ಇಲಾಖೆಯಿಂದ ಕೆಲಸಗಳಿಗೆ ಚುರುಕು ದೊರಕಿದೆ. ಇಂದು ಈ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಮುಖರೊಂದಿಗೆ ಸಭೆಯನ್ನು ನಡೆಸಿದ್ದೇನೆ. ಯೋಜನೆ ಸಿದ್ದಗೊಳಿಸುವ ನಿಟ್ಟಿನಲ್ಲಿ ಅಂತಿಮ ಸೂಚನೆಗಳನ್ನು ನೀಡಿದ್ದೇನೆ. ಅಲ್ಲದೇ, ಯೋಜನೆಗೆ ‘ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ’ ಎಂದು ಹೆಸರನ್ನು ಅಂತಿಮಗೊಳಿಸಿದ್ದೇವೆ. ಅಕ್ಟೋಬರ್‌ 30 ರ ಒಳಗಾಗಿ ರೈಲು ಎಲ್ಲಾ ರೀತಿಯಲ್ಲೂ ಸಜ್ಜಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ. ಪ್ರತಿ ದಿನ ಈ ಯೋಜನೆಯ ಪ್ರಗತಿಯ ಬಗ್ಗೆ ವರದಿಯನ್ನು ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದರು.

Advertisement

ಶೀಘ್ರದಲ್ಲೇ ಬುಕ್ಕಿಂಗ್‌: ’ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ’ ರೈಲಿನಲ್ಲಿ ಯಾತ್ರೆಯನ್ನು ಕೈಗೊಳ್ಳಲು ಬುಕ್ಕಿಂಗ್‌ ನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಕೆಎಸ್‌ಟಿಡಿಸಿ ಹಾಗೂ ಐಆರ್‌ಸಿಟಿಸಿ ಸಂಸ್ಥೆಗಳು ಈ ಬಗ್ಗೆ ವೆಬ್‌ಸೈಟ್‌ ಹಾಗೂ ಇನ್ನಿತರೆ ಅಗತ್ಯ ವಿಷಯಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವಂತೆ ಸಚಿವರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next