Advertisement

ಮನೆಯಲ್ಲಿಯೇ ಇದ್ರೆ ಮಕ್ಕಳ ಸಂಖ್ಯೆ ಜಾಸ್ತಿಯಾಗುತ್ತೆ ಅನ್ನೋ ಭಯ : ಸೈಫ್ ಅಲಿಖಾನ್

10:46 AM Nov 12, 2021 | Team Udayavani |

ಬಾಲಿವುಡ್ ಮಂದಿ ಯಾವಾಗಲೂ ಬೋಲ್ಡ್ ಹೇಳಿಕೆಗಳನ್ನು ನೀಡುತ್ತ ಸುದ್ದಿಯಾಗುತ್ತಾರೆ. ಇದೀಗ ನಟ ಸೈಫ್ ಅಲಿಖಾನ್ ಕೂಡ ತುಂಬಾ ಸುದ್ದಿಯಲ್ಲಿದ್ದಾರೆ. ಕಾರಣ ಅವರು ನೀಡಿರುವ ಹೇಳಿಕೆ.

Advertisement

ಹೌದು ಈಗಾಗಲೇ ನಾಲ್ಕು ಮಕ್ಕಳಿಗೆ ತಂದೆಯಾಗಿರುವ ಸೈಫ್ ಅಲಿಖಾನ್ ಇನ್ನೂ ಹೆಚ್ಚು ಮನೆಯಲ್ಲಿ ಇದ್ರೆ ಮಕ್ಕಳ ಸಂಖ್ಯೆ ಜಾಸ್ತಿಯಾಗತ್ತೆ ಎನ್ನುವ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ.

ಹಿಂದಿಯಲ್ಲಿ ಮೂಡಿ ಬರುತ್ತಿರುವ ಕಪಿಲ್ ಶರ್ಮಾ ಶೋ ನಲ್ಲಿ ರಾಣಿ ಮುಖರ್ಜಿ, ಸಿದ್ದಾರ್ಥ್ ಚತುರ್ವೇದಿ, ಶಾರ್ವರಿ ವಾಘ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾ ಜೊತೆ ಕಾಮಿಡಿ ಮಾಡುವ ವೇಳೆ ಸೈಫ್ ಅಲಿ ಖಾನೆ ಈ ಹೇಳಿಕೆ ನೀಡಿದ್ದಾರೆ.

 

View this post on Instagram

 

Advertisement

A post shared by Sony Entertainment Television (@sonytvofficial)

ಕಾರ್ಯಕ್ರಮದಲ್ಲಿ ಕಪಿಲ್ ಶರ್ಮಾ ಅವರು, ಈಗಾಗಲೇ 4 ಮಕ್ಕಳನ್ನು ಹೊಂದಿರುವ ನೀವು ಇನ್ನೂ ಮಕ್ಕಳನ್ನು ಪಡೆಯುವ ಒತ್ತಡ ಏನಾದರೂ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸೈಫ್, ಮನೆಯಲ್ಲಿಯೇ ಇದ್ದರೆ ಇನ್ನೊಂದಿಷ್ಟು ಮಕ್ಕಳಾಗುತ್ತವೆ ಎಂಬ ಭಯವಿದೆ ಎಂದು ಹೇಳುತ್ತಾ ಜೋರಾಗಿ ನಕ್ಕು ಬಿಟ್ಟಿದ್ದಾರೆ.

ಸೈಫ್ ಅಲಿಖಾನ್ ಗೆ ಸದ್ಯ 4 ಜನ ಮಕ್ಕಳಿದ್ದಾರೆ. . ಸೈಫ್-ಅಮೃತಾ ಜೋಡಿಗೆ ಇಬ್ರಾಹಿಂ ಅಲಿ ಖಾನ್, ಸಾರಾ ಅಲಿ ಖಾನ್ ಎಂಬ ಮಕ್ಕಳಿದ್ದಾರೆ. ಅಮೃತಾ ಸಿಂಗ್ ಜೊತೆಗಿನ ವಿಚ್ಛೇದನದ ನಂತರ 2012ರಲ್ಲಿ ಸೈಫ್ ಕರೀನಾ ಕಪೂರ್ ಅವರನ್ನು ಮದುವೆಯಾಗಿದ್ದು, ಈ ದಂಪತಿಗೆ ತೈಮೂರ್ ಅಲಿ ಖಾನ್ ಹಾಗೂ ಜೆಹಾಂಗೀರ್ ಎಂಬ ಪುತ್ರರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next