Advertisement

ಕಲ್ಯಾಣಿ ಚಾಲುಕ್ಯರ ಕಾಲದ ಶಾಸನ ಶೋಧ

04:53 PM Jan 10, 2022 | Team Udayavani |

ಲಿಂಗಸೂಗೂರು: ಸ್ಥಳೀಯ ಪುರಸಭೆ ವ್ಯಾಪ್ತಿಯ ಕರಡಕಲ್‌ ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ 6ನೇ ವಿಕ್ರಮಾದಿತ್ಯನ ಕಾಲದ ದಾನ ಶಾಸನವನ್ನು ರಾಯಚೂರು ವಿಶ್ವವಿದ್ಯಾಲಯದ ಉಪನ್ಯಾಸಕ, ಸಂಶೋಧಕರಾದ ಡಾ| ಶಿವರಾಜ ಯತಗಲ್‌ ನೇತೃತ್ವದ ತಂಡ ಪತ್ತೆ ಹಚ್ಚಿದೆ.

Advertisement

ಕರಡಕಲ್ಲಿನ ಜನತಾ ಕಾಲೋನಿಯಲ್ಲಿ ಭಗ್ನವಾಗಿ ಬಿದ್ದಿರುವ ಲಕ್ಷ್ಮೀ ದೇವಸ್ಥಾನದ ಅವಶೇಷಗಳಲ್ಲಿ ಮುರಿದು ಬಿದ್ದಿರುವ, 932 ವರ್ಷಗಳ ಹಿಂದೆ ಕೆತ್ತಿಸಿದ ಸ್ತಂಭ ಶಾಸನವನ್ನು ಗುರುತಿಸಿದ್ದಾರೆ.

ಮಣ್ಣಿನಲ್ಲಿ ಹೂತಿರುವ ಶಾಸನ ಹೊರತೆಗೆದು, ನೀರಿನಿಂದ ಸ್ವತ್ಛಗೊಳಿಸಿ ಅದರ ಛಾಯಾಚಿತ್ರ ತೆಗೆದು ಮೈಸೂರಿನ ಭಾರತೀಯ ಪುರಾತತ್ವ ಮತ್ತು ಶಾಸನಶಾಸ್ತ್ರ ಇಲಾಖೆಯ ನಿರ್ದೇಶಕರಾದ ಡಾ| ಕೆ.ಮುನಿರತ್ನಂ ರೆಡ್ಡಿ ಹಾಗೂ ಬೆಂಗಳೂರಿನ ಮಿಥಿಕ್‌ ಸೊಸೈಟಿಯ ತ್ರಿ-ಡಿ ಡಿಜಿಟಲ್‌ ಸದಸ್ಯರಾದ ಶಶಿಕುಮಾರ ನಾಯ್ಕರ ಅವರನ್ನು ಕಳುಹಿಸಿ, ತಕ್ಷಣವೇ ಓದಿ ಮಾಹಿತಿ ಸಂಗ್ರಹಿಸಲಾಯಿತು.

ಗ್ರಾಮದ ಸ್ಥಳೀಯರು ಲಕ್ಷ್ಮೀದೇವಿ ದೇವಸ್ಥಾನವೆಂದು ಕರೆಯುವ ಈ ಸ್ಥಳದಲ್ಲಿ ದೊರಕಿರುವ ಈ ಶಾಸನವನ್ನು ದೇವಸ್ಥಾನದ ಸ್ತಂಭಕ್ಕೆ ಕೆತ್ತಲಾಗಿದೆ. ಸಂಪೂರ್ಣವಾಗಿ ಈ ದೇವಾಲಯ ನೆಲಕಚ್ಚಿದೆ. ಎಂಟು ಸಾಲುಗಳ ಈ ಶಾಸನ 6ನೇ ವಿಕ್ರಮಾದಿತ್ಯನ ಆಡಳಿತಾವ ಧಿಯ ದಾನ ಶಾಸನವಾಗಿದೆ.

ಸದರಿ ಗ್ರಾಮದಲ್ಲಿ ನಾಣ್ಯ ತಯಾರಿಸುವ ಟಂಕಸಾಲೆ ಇತ್ತೆಂದು ಶಾಸನ ಹೇಳುತ್ತದೆ. ತಂಡದಲ್ಲಿ ಬರಹಗಾರ ಅಶೋಕ ದಿದ್ದಿಗಿ, ಶಿಕ್ಷಕ ಗಿರೀಶ ಕೊಳ್ಳೇಗಾಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next